ಭಾರತಕ್ಕೂ ಕಾಲಿಟ್ಟದೆ ಹೊಸ ಕೊರೊನಾ ವೈರಸ್ ..! ದೆಹಲಿ, ಚೆನ್ನೈ ಸೇರಿ 6 ಮಂದಿಗೆ ಸೋಂಕು ಪತ್ತೆ

ನವದೆಹಲಿ : ವಿಶ್ವವನ್ನೇ ನಡುಗಿಸುತ್ತಿರುವ ಹೊಸ ಕೊರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಲಂಡನ್ ನಿಂದ ದೆಹಲಿ ಹಾಗೂ ಚೆನ್ನೈಗೆ ಬಂದಿಳಿದ 6 ಮಂದಿಯಲ್ಲಿ ಯುಕೆ ಬ್ರಹ್ಮ ರಾಕ್ಷಸ ಪತ್ತೆಯಾಗಿರೋದು ಆತಂಕ ಮೂಡಿಸಿದೆ.

ಕೊರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗುತ್ತೆ ಅನ್ನೋ ಹೊತ್ತಲ್ಲೇ ವಿಶ್ವದಲ್ಲಿ ಕೊರೊನಾ ಮಹಾಮಾರಿ ರೂಪಾಂತರ ಡು ಹೊಸ ರೂಪದಲ್ಲಿ ಪ್ರತ್ಯಕ್ಷವಾಗಿದೆ. ಈಗಾಗಲೇ ಲಂಡನ್, ಆಫ್ರೀಕಾ, ಟರ್ಕಿ ಸೇರಿದಂತೆ ಹಲವು ದೇಶಗಳಲ್ಲಿ ಹೊಸ ಕೊರೊನಾ ವೈರಸ್ ಸೋಂಕು ಆತಂಕ ಮೂಡಿಸಿದೆ. ಅದ್ರಲ್ಲೂ ಲಂಡನ್ ನಲ್ಲಿ ಹೊಸ ಕೊರೊನಾ ವೈರಸ್ ಸೋಂಕಿನಿಂದಾಗಿ ಪರಿಸ್ಥಿತಿ ಕೈ ಮೀರಿದ್ದು, ಲಾಕ್ ಡೌನ್ ಜಾರಿ ಮಾಡಲಾಗಿದೆ.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತ ಸರಕಾರ, ಲಂಡನ್ ನಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದೆ. ಅದ್ರಲ್ಲೂ ಲಂಡನ್ ನಿಂದ ದೇಶಕ್ಕೆ ಮರಳಿದವರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದ್ದು, ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಲಂಡನ್ ನಿಂದ ದೆಹಲಿಗೆ ಮರಳಿದ್ದ 266 ಮಂದಿಯ ಪೈಕಿ 5 ಮಂದಿಯಲ್ಲಿ ಹೊಸ ವೈರಸ್ ಸೋಂಕು ಪತ್ತೆಯಾಗಿದ್ದು, ಲಂಡನ್ ನಿಂದ ಚೆನ್ನೈಗೆ ಬಂದಿಳಿದ ವ್ಯಕ್ತಿಯೋರ್ವರಲ್ಲಿಯೂ ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಹೀಗಾಗಿ 6 ಮಂದಿಯ ಸ್ಯಾಂಪಲ್ಸ್ ಗಳನ್ನು ಈಗಾಗಲೇ ಲ್ಯಾಬೋರೇಟರಿಗೆ ಕಳುಹಿಸಲಾಗಿದೆ.

ಹೊಸ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವಲ್ಲೇ ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರೋದ್ರಿಂದಾಗಿ ಆರೋಗ್ಯ ಇಲಾಖೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

Comments are closed.