ಭ್ರಷ್ಟ ನೌಕರರಿಗೆ ಇನ್ಮುಂದೆ ಸಿಗೋದಿಲ್ಲ ‘ಪಾಸ್ ಪೋರ್ಟ್’ !

0

ನವದೆಹಲಿ : ದೇಶದಲ್ಲಿ ಭ್ರಷ್ಟಾಚಾರ ಪ್ರಕರಣ ಹೆಚ್ಚುತ್ತಿದೆ. ಸರಕಾರಿ ಕಚೇರಿಗಳಲ್ಲಂತೂ ಲಂಚ ಕೊಡದೆ ಯಾವುದೇ ಕೆಲಸ ಕಾರ್ಯಗಳು ನಡೆಯೋದಿಲ್ಲ. ಭ್ರಷ್ಟಾಚಾರದ ವಿರುದ್ದ ತೊಡೆ ತಟ್ಟಿರೋ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯೊಂದನ್ನು ಇರಿಸಿದೆ.

ಭ್ರಷ್ಟಾಚಾರ ಆರೋಪ ಸಂಬಂಧ ಅಮಾನತ್ತು ಅಥವಾ ವಿಚಾರಣೆಗೆ ಗುರಿಯಾಗುವ ಸರಕಾರಿ ಉದ್ಯೋಗಿಗಳಿಗೆ ಇನ್ಮುಂದೆ ಪಾಸ್ ಪೋರ್ಟ್ ಸಿಗೋದಿಲ್ಲ. ಇನ್ಮುಂದೆ ಸರಕಾರಿ ನೌಕರರು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದರೆ ಆತನ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ ಅನ್ನೋ ಕುರಿತು ದೃಢೀಕರಣ ನೀಡಲೇ ಬೇಕು.

ಸರಕಾರಿ ನೌಕರರು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ ಕೂಡಲೇ ಜಾಗೃತ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಬೇಕು ಜಾಗೃತ ಆಯೋಗ ನೀಡುವ ವಿಜಿಲೆನ್ಸ್ ಕ್ಲಿಯರೆನ್ಸ್ ( ನಿರಾಪೇಕ್ಷಣಾ ಪತ್ರ) ನೀಡಿದ್ರೆ ಮಾತ್ರ ಪಾಸ್ ಪೋರ್ಟ್ ಲಭ್ಯವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಒಂದೊಮ್ಮೆ ನೌಕರ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಅಮಾನತ್ತಿಗೆ ಒಳಗಾಗಿದ್ರೆ ಇಲ್ಲಾ ಯಾವುದೇ ತನಿಖಾ ಸಂಸ್ಥೆ ಆತನ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ರೆ ಜಾಗೃತ ಆಯೋಗ ಆತನಿಗೆ ನಿರಾಪೇಕ್ಷಣಾ ಪತ್ರವನ್ನು ತಡೆಹಿಡಿಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರೀಯ ಜಾಗೃತ ಆಯೋಗದ ಜೊತೆಗೆ ಚರ್ಚಿಸಿ ಈ ನಿರ್ಧಾರ ಪ್ರಕಟಿಸಿದೆ.

Leave A Reply

Your email address will not be published.