ಮುಂಬೈ ಲಾಕ್ ಡೌನ್ ಎಫೆಕ್ಟ್….! ಹೈದ್ರಾಬಾದ್ ಗೆ ಹಾರಿದ ಕೊಡಗಿನ ಕುವರಿ ರಶ್ಮಿಕಾಮಂದಣ್ಣ…!!

ಕೊರೋನಾ ಎರಡನೇ ಅಲೆಯ ಎಫೆಕ್ಟ್ ದೇಶದಾದ್ಯಂತ ಲಾಕ್ ಡೌನ್ ಹಂತಕ್ಕೆ ಬಂದು ನಿಂತಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಚಿತ್ರೀಕರಣದ ಮೇಲೆ ನಿರ್ಬಂಧ ಹೇರಿದ್ದು, 15 ದಿನಗಳಲಾಕ್ ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮುಂಬೈನಿಂದ  ಹೈದ್ರಾಬಾದ್ ಗೆ ಹಾರಿದ್ದಾರೆ.

ಬಾಲಿವುಡ್ ಬಿಗ ಬೀ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ತೆರೆಹಂಚಿಕೊಳ್ಳುತ್ತಿರುವ ರಶ್ಮಿಕಾ ಈ ಸಿನಿಮಾ ಶೂಟಿಂಗ್ ಗಾಗಿ ಮುಂಬೈನಲ್ಲಿ ವಾಸವಾಗಿದ್ದರು. ಇತ್ತೀಚಿಗಷ್ಟೇ ಮುಂಬೈಯಲ್ಲಿ ಉಳಿದುಕೊಳ್ಳೋದಿಕ್ಕೆ ಐಷಾರಾಮಿ ಫ್ಲ್ಯಾಟ್ ಕೂಡ ಖರೀದಿಸಿದ್ದರು. ಆದರೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಈಗ ಹೈದ್ರಾಬಾದ್ ಗೆ ತೆರಳಿದ್ದಾರೆ.

ಗುಡ್ ಬೈ ಸಿನಿಮಾ ಶೂಟಿಂಗ್ ಏಪ್ರಿಲ್ ಮೊದಲ ವಾರವಷ್ಟೇ ಆರಂಭವಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೇಸ್ ಗಳು ದಾಖಲಾದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧ ಹೇರಿದೆ.

ಹೀಗಾಗಿ ರಶ್ಮಿಕಾ ಸುಮ್ಮನೇ ಮುಂಬೈಯಲ್ಲಿರೋದು ಯಾಕೆಂದು ಹೈದ್ರಾಬಾದ್ ಗೆ ತೆರಳಿದ್ದಾರಂತೆ. ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಹೈದ್ರಾಬಾದ್ ನಲ್ಲೂ ಇತ್ತೀಚಿಗೆ ಫ್ಲ್ಯಾಟ್ ಖರೀದಿಸಿದ್ದರು.

ಮುಂಬೈ ಏರ್ಪೋರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಶ್ಮಿಕಾ ಲಾಕ್ ಡೌನ್ ಕಾರಣಕ್ಕೆ ಹೈದ್ರಾಬಾದ್ ಗೆ ತೆರಳುತ್ತಿದ್ದೇನೆ. ಲಾಕ್ ಡೌನ್ ಬಳಿಕ ಮತ್ತೆ ಹಿಂತಿರುಗುತ್ತೇನೆ. ನೀವೆಲ್ಲ ಆರೋಗ್ಯ ಕಾಪಾಡಿಕೊಳ್ಳಿ ಎಂದಿದ್ದಾರೆ. ತೆಲುಗು,ತಮಿಳು,ಕನ್ನಡ ಹೀಗೆ ಬಹುಭಾಷೆಯಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಕನ್ನಡದಲ್ಲಿ ಕೊನೆಯದಾಗಿ ಪೊಗರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.  

Comments are closed.