ಪೊಲೀಸ್ ಕಾನ್‍ಸ್ಟೇಬಲ್ ವಿಚಿತ್ರ ಪ್ರತಿಭಟನೆ : ಕಾರಣ ಕೇಳಿದ್ರೆ ಶಾಕ್ ಆಗ್ತೀರಿ !

0

ಹಾಸನ : ತಮಗೆ ನ್ಯಾಯ ಬೇಕೆಂದು ಆಗ್ರಹಿಸಿ ಪೊಲೀಸ್ ಕಾನ್ ಸ್ಟೇಬಲ್ ವೋರ್ವರು ನಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಸಕಲೇಶಪುರ ಗ್ರಾಮಾಂತರ ಠಾಣೆಯ ಪೋಲಿಸ್ ಕಾನ್‍ಸ್ಟೇಬಲ್ ದಯಾನಂದ್ ರಾಷ್ಟ್ರೀಯ ಹೆದ್ದಾರಿ 75ರ ಬಳಿಯಲ್ಲಿರುವ ಮೆಡಿಕಲ್‍ನ ಮುಂಭಾಗ ಕಾರ್ ನಿಲ್ಲಿಸಿ ಔಷಧಿ ತರಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ತಹಶೀಲ್ದಾರ್ ಮಂಜುನಾಥ್ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಗಮನಿಸಿದ್ದಾರೆ. ತಮ್ಮ ಕಾರು ಚಾಲಕನಿಗೆ ಹೇಳಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಟೈಯರ್ ಗಾಳಿ ತೆಗೆಸಿದ್ದಾರೆ. ಮೆಡಿಕಲ್ ಶಾಪಿನಿಂದ ಹೊರ ಬಂದ ಪೊಲೀಸ್ ಕಾನ್ ಸ್ಟೇಬಲ್ ದಯಾನಂದ ತಹಶೀಲ್ದಾರ್ ಮಂಜುನಾತ್ ಅವರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ.

ತಹಶೀಲ್ದಾರ್ ಸ್ಥಳದಿಂದ ತೆರಳುತ್ತಿದ್ದಂತೆಯೇ ದಯಾನಂದ್ ಮಹಾತ್ಮಗಾಂಧೀಜಿ ಅವರ ಪೋಟವನ್ನು ಕೈಯಲ್ಲಿ ಹಿಡಿದು ಕಾರಿನ ಪಕ್ಕದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುವುದಕ್ಕೆ ಶುರುಮಾಡಿದ್ದಾರೆ. ಮೆಡಿಕಲ್ ಶಾಪ್ ಗೆ ಹೋಗಿ ಬರುವಷ್ಟರಲ್ಲಿ ಕಾರಿನ ಗಾಳಿ ತೆಗೆಸಿರುವ ಕುರಿತು ತನಗೆ ನ್ಯಾಯ ಒದಗಿಸುವಂತೆ ಪಟ್ಟುಹಿಡಿದಿದ್ದಾನೆ. ತಹಶೀಲ್ದಾರ್ ಅವರು ತನ್ನ ತಪ್ಪಿಗೆ ದಂಡ ವಿಧಿಸಬಹುದಿತ್ತು. ಆದ್ರೆ ಕಾರಿನ ಚಕ್ರದ ಗಾಳಿ ತೆಗೆಯಿಸಿರುವುದು ಸರಿಯಲ್ಲ ಎಂದಿದ್ದಾರೆ.

ಪೊಲೀಸ್ ಕಾನ್ ಸ್ಟೇಬಲ್ ದಯಾನಂದ ಅವರ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪೊಲೀಸ್ ಪ್ರತಿಭಟನೆಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಸೆರೆ ಹಿಡಿಯುತ್ತಿರುವುದು ಅಧಿಕಾರಿಗಳಿಗೆ ಮುಜುಗರನ್ನುಂಟು ಮಾಡಿತ್ತು.

ಕೊನೆಗೆ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪಿಎಸ್‍ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‍ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ದಯಾನಂದ ಅವರನ್ನು ಎತ್ತಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಪೇದೆಯ ಪ್ರತಿಭಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.

https://youtu.be/jVGMoYuT1FY
Leave A Reply

Your email address will not be published.