Puneeth Rajkumar Padma Shri : ಪವರ್ ಸ್ಟಾರ್ ಗೆ ಪ್ರದ್ಮಶ್ರೀ: ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ

ಸ್ಯಾ‌ಂಡಲ್ ವುಡ್ ನ ಪವರ್ ಸ್ಟಾರ್ ಕೇವಲ ಚಿತ್ರನಟ ಮಾತ್ರವಲ್ಲ ತಮ್ಮ ಸಮಾಜಮುಖಿ ಕೆಲಸಗಳ‌ಮೂಲಕವೇ ಜನರಿಗೆ ಹತ್ತಿರವಾದವರು. ಸಾಕಷ್ಟು ಒಳ್ಳೆಯ ಕೆಲಸಗಳ ಮೂಲಕ ಜನರಿಗೆ ನೆರವಾದ ರಾಜ್ ಕುಮಾರ್ ಅಳಿದ ಬಳಿಕವೂ ಕೀರ್ತಿಯ ಮೂಲಕ ನಮ್ಮ‌ ನಡುವೆ ಉಳಿದು ಹೋಗಿದ್ದಾರೆ. ದೊಡ್ಮನೆಯ ಈ ರಾಜರತ್ನನಿಗೆ ಹಲವು ಗೌರವಗಳು ಸಂದಿದ್ದರೂ ಪದ್ಮಶ್ರೀ ಗೌರವ (Puneeth Rajkumar Padma Shri) ಸಿಗಬೇಕೆಂಬುದು ಎಲ್ಲ ಅಭಿಮಾನಿಗಳ ಒತ್ತಾಯ. ಈ ಆಗ್ರಹಕ್ಕೆ ರಾಜ್ಯ ಸರ್ಕಾರ ಧ್ವನಿಯಾಗಿದೆ.

ನಟ ಪುನೀತ್ ರಾಜ್ ಕುಮಾರ್ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರಿಗೆ ಮರಣೋತ್ತರ ಪದ್ಮಶ್ರೀ ಗೌರವ ನೀಡಬೇಕೆಂದು ಕೇಂದ್ರಕ್ಕೆ ಪತ್ರದ ಮೂಲಕ ಒತ್ತಾಯಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಬೊಮ್ಮಾಯಿ, ಈಗಾಗಲೇ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಗೌರವ ಘೋಷಿಸಲಾಗಿದೆ.ಆದರೆ ಪುನೀತ್ ರಾಜ್ ಕುಮಾರ್ ಗೆ ಪದ್ನಶ್ರೀ ಗೌರವ ಸಿಗಬೇಕೆಂಬುದು ನಮ್ಮೆಲ್ಲರ ಆಶಯ.

ವಿಪಕ್ಷಗಳು ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಗೌರವ ಸಿಗಬೇಕೆಂದು ಒತ್ತಾಯಿಸಿವೆ. ಹೀಗಾಗಿ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಬೊಮ್ಮಾಯಿ ಸದನದಲ್ಲಿ ಹೇಳಿದ್ದಾರೆ. ಅಲ್ಲದೇ ಸದ್ಯದಲ್ಲೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪುನೀತ್ ಗೆ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ದಿನಾಂಕವನ್ನು ನಿಗದಿ ಮಾಡಲಿದ್ದೇವೆ ಎಂದಿದ್ದಾರೆ. ಇದಕ್ಕೂ ಮುನ್ನ ವಿಧಾನಸಭೆ ಕಲಾಪಕ್ಕೂ ಮುನ್ನ ಅಗಲಿದ ಗಣ್ಯರಿಗೆ ಗೌರವ ಸಲ್ಲಿಸುವ ವಾಡಿಕೆಯಂತೆ ನಟ ಪುನೀತ್ ರಾಜ್ ಕುಮಾರ್ ಗೂ ಗೌರವ ಸಲ್ಲಿಸಲಾಯಿತು.

ಸದನದಲ್ಲಿ ಪುನೀತ್ ರನ್ನು ಸ್ಮರಿಸಿಕೊಂಡ ವಿರೋಧ ಪಕ್ಷದ ನಾಯಕ ಸಿದ್ಧ ರಾಮಯ್ಯ,ಪುನೀತ್ ರಾಜ್ಯದ ಎಲ್ಲರಿಗೂ ಪ್ರಿಯವಾದ ವ್ಯಕ್ತಿಯಾಗಿದ್ದರು. ಅವರ ಸಮಾಜಮುಖಿ ಕೆಲಸವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ವೈಯಕ್ತಿಕವಾಗಿ ನನಗೆ ತುಂಬ ಆತ್ಮೀಯವಾಗಿದ್ದರು. ಅವರ ಒತ್ತಾಯಕ್ಕೆ ನಾನು ಎಷ್ಟೋ ವರ್ಷದ ಬಳಿಕ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿದ್ದೆ ಎಂದಿದ್ದಾರೆ. ಮಾತ್ರವಲ್ಲ ಮಾಮಾ ಮಾಮಾ ನನ್ನ ರಾಜ್ ಕುಮಾರ್ ಸಿನಿಮಾ ನೋಡಿ ಎಂದು ಪುನೀತ್ ಹೇಳಿದ್ದನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಪುನೀತ್ ನಿಧನದ ಬಳಿಕ ಪದ್ಮಶ್ರೀ ಪ್ರಶಸ್ತಿ ಪುನೀತ್ ಗೆ ಸಿಗಬೇಕೆಂಬ ಆಗ್ರಹ ಎಲ್ಲೆಡೆಯಿಂದ ಕೇಳಿಬಂದಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕೆಂದು ಪಕ್ಷಾತೀತವಾಗಿ ರಾಜ್ಯದ ಎಲ್ಲ ಗಣ್ಯರು ಸರಕಾರಕ್ಕೆ ಒತ್ತಾಯ ಮಾಡಿದ್ದರು. ಸದ್ಯ ಕೇಂದ್ರ ಸರ್ಕಾರಕ್ಕೆ ರಾಜ್ಯದ ಬೇಡಿಕೆ ಸಲ್ಲಿಕೆಯಾಗಿದ್ದು ಸದ್ಯದಲ್ಲೇ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಘೋಷಣೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್‌ ಪ್ರೇರಣೆ : ನೇತ್ರದಾನಕ್ಕೆ ಒಂದೇ ದಿನ 1000 ಕ್ಕೂ ಅಧಿಕ ಮಂದಿ ನೋಂದಣಿ

ಇದನ್ನೂ ಓದಿ : Puneeth- Padma shri Award : ಪುನೀತ್ ಗೆ ಸಲ್ಲಲಿ ಪದ್ಮಶ್ರೀ: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

Puneeth Rajkumar Padma Shri : State government writing letter to Central government

Comments are closed.