ಭಾರತಕ್ಕೆ ಬರ್ತಾನೆ ಭೂಗತ ಪಾತಕಿ : ಇನ್ನೊಂದು ವಾರದಲ್ಲಿ ರವಿ ಪೂಜಾರಿ ಹಸ್ತಾಂತರ

0

ಬೆಂಗಳೂರು : ಭೂಗತ ಪಾತಕಿ ರವಿ ಪೂಜಾರಿಯನ್ನು ಇನ್ನೊಂದು ವಾರದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ. 2019ರ ಜನವರಿಯಲ್ಲಿ ಪಾತಕಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನಗಲ್ ನಲ್ಲಿ ಬಂಧಿಸಲಾಗಿತ್ತು. ಸೆನಗಲ್ ಕೋರ್ಟ್ ರವಿ ಪೂಜಾರಿ ಹಸ್ತಾಂತರಕ್ಕೆ ಸಮ್ಮತಿಸಿದ್ದು, ಭಾರತಕ್ಕೆ ಕರೆ ತರೋದು ಪಕ್ಕಾ ಆಗಿದೆ.

90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕುಳಿತುಕೊಂಡೇ ಬೆಂಗಳೂರು, ಮಂಗಳೂರು, ಮುಂಬೈ ಹಾಗೂ ಕೇರಳದಲ್ಲಿ ತನ್ನ ಪಾತಕ ಕೃತ್ಯಗಳನ್ನು ಎಸಗುತ್ತಿದ್ದ, ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು. ಈ ಮೂಲಕ ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿಸಲಾಗಿತ್ತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದ ಹಲವು ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದ. 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಅನಿಲ್ ಲಾಡ್, ಬಾಲಿವುಡ್ ನಟ ಶಾರೂಕ್ ಖಾನ್, ಸಲ್ಮಾನ್ ಖಾನ್, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಸೇರಿದಂತೆ ಹಲವರಿಗೆ ರವಿ ಪೂಜಾರಿ ಬೆದರಿಕೆಯೊಡ್ಡಿದ್ದಾನೆ.

ಜೀವ ಬೆದರಿಕೆ, ಅಪಹರಣ, ಕೊಲೆ, ಬ್ಲಾಕ್ ಮೇಲ್, ವಂಚನೆ ಪ್ರಕರಣದಲ್ಲಿ ರವಿ ಪೂಜಾರಿಗೆ ಆತನ ಪತ್ನಿ ಹಾಗೂ ಮಗ ಸಹಕರಿಸುತ್ತಾರೆ ಅನ್ನೋ ಕಾರಣಕ್ಕೆ ಪೊಲೀಸರು ಈಗಾಗಲೇ ಪತ್ನಿ ಹಾಗೂ ಮಗನನ್ನು ಬಂಧಿಸಿದ್ದರು. ಮಾತ್ರವಲ್ಲ ರವಿ ಪೂಜಾರಿ ಸಹಚರರಾದ ವಿಲಿಯಂ ರೋಡ್ರಿಕ್ಸ್ ಹಾಗೂ ಆಕಾಶ್ ಶೆಟ್ಟಿಯನ್ನು ಮುಂಬೈ ಪೊಲೀಸರು ಕಳೆದ ವರ್ಷ ಬಂಧಿಸಿದ್ರು. ಅಲ್ಲದೇ ಇಬ್ಬರ ವಿರುದ್ದವೂ ಮೋಕಾ ಕಾಯ್ದೆಯಡಿ (ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ) ಪ್ರಕರಣ ದಾಖಲಿಸಲಾಗಿತ್ತು. ರವಿ ಪೂಜಾರಿ ನಕಲಿ ಪಾಸ್ ಪೋರ್ಟ್ ಬಳಸಿ ದುಬೈಗೆ ಹಾರಿದ್ದ.

ಪೊಲೀಸರು ಆಫ್ರಿಕಾದ ಸೆನೆಗಲ್ ನಲ್ಲಿ 2019ರ ಜನವರಿ ತಿಂಗಳಲ್ಲಿ ಬಂಧಿಸಿದ್ದರು. ಆದರೆ ಆತನನ್ನು ಭಾರತಕ್ಕೆ ಕರೆತರಲು ಕಾನೂನು ತೊಡಕಾಗಿತ್ತು. ಇದೀಗ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಸೆನಗಲ್ ನ್ಯಾಯಾಲಯ ಕೂಡ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.

ಹೀಗಾಗಿ ಕೇಂದ್ರ ಗೃಹ ಇಲಾಖೆ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುತ್ತಿದೆ. ಈ ಹಿಂದೆ ಪಾತಕಿ ಬನ್ನಂಜೆ ರಾಜಾನನ್ನು ಭಾರತಕ್ಕೆ ಕರೆತರಲು ಕಾನೂನು ತೊಡಗು ಎದುರಾಗಿತ್ತು. ಅಂತಿಮವಾಗಿ ಬನ್ನಂಜೆ ರಾಜಾನನ್ನು ಭಾರತಕ್ಕೆ ಕರೆತರಲಾಗಿತ್ತು. ಇದೀಗ ಅದೇ ರೀತಿಯಲ್ಲಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆ ತರಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.