ಭಾರತೀಯರ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ತರಕಾರಿ ಈರುಳ್ಳಿ (Onion). ವರ್ಷ ಪೂರ್ತಿ ಸಿಗುವ ಈರುಳ್ಳಿಯನ್ನು ಸಾರು, ಪಲ್ಯ, ಚಟ್ನಿ, ಸಲಾಡ್, ಸೂಪ್, ಸ್ಯಾಂಡ್‌ವಿಚ್, ಫುಲಾವ್, ಚಿತ್ರಾನ್ನ ಹೀಗೆ ಎಲ್ಲ ಅಡುಗೆಗಳಲ್ಲೂ ಉಪಯೋಗಿಸುತ್ತೇವೆ. ಕೆಲವರು ಊಟದಲ್ಲಿ ಹುರಿದ ಈರುಳ್ಳಿಯನ್ನು ತಿಂದರೆ, ಹೆಚ್ಚಿನವರು ಹಸಿ ಈರುಳ್ಳಿಯನ್ನು (Raw Onion Benefits) ತಿನ್ನುತ್ತಾರೆ. ಹಾಗೆ ರುಚಿಗಾಗಿ ತಿನ್ನುವ ಹಸಿ ಈರುಳ್ಳಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ (Raw Onion Benefits). ಏಕೆಂದರೆ ಇದು ಅಗಾಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ನಿಂದ ಕೂಡಿದೆ. ಹಸಿ ಈರುಳ್ಳಿ ಕೊಲೆಸ್ಟ್ರಾಲ್ (Cholesterol) ಅನ್ನು ನಿಯಂತ್ರಿಸುತ್ತದೆ.
ಅಧಿಕ ಕೊಲೆಸ್ಟ್ರಾಲ್ ಅನ್ನು ಈರುಳ್ಳಿ ಹೇಗೆ ನಿಯಂತ್ರಿಸುತ್ತದೆ?
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ಆಹಾರ ವರದಿಯ ಪ್ರಕಾರ, ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್, ಲಿಪೊಪ್ರೋಟೀನ್‌ಗಳು ಹೆಚ್ಚಾಗುತ್ತವೆ. ಇದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕೂಡ ಹೆಚ್ಚುತ್ತದೆ. ಈರುಳ್ಳಿಯಲ್ಲಿ ಸಲ್ಫರ್ ಇರುವುದು ನಮಗೆಲ್ಲರಿಗೂ ಗೊತ್ತಿದೆ. ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸಲ್ಫರ್ ಮಾಡುತ್ತದೆ. ಅದಲ್ಲದೆ, ಇದು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ರಕ್ತನಾಳಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಶೇಖರಣೆಗೊಳ್ಳುವುದು ಕಡಿಮೆಯಾಗುತ್ತದೆ.
ಊಟದಲ್ಲಿ ಹಸಿ ಈರುಳ್ಳಿ ತಿನ್ನವುದರಿಂದಾಗುವ ಇತರೆ ಪ್ರಯೋಜನಗಳು :
ಕೆಟ್ಟ್ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವುದರ ಜೊತೆಗೆ ಹಸಿ ಈರುಳ್ಳಿಯಿಂದ ಅನೇಕ ಪ್ರಯೋಜನಗಳಿವೆ. ಈರುಳ್ಳಿಯು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಚಯಾಪಚಯ ಕ್ರಿಯೆಯೂ ವೇಗವಾಗುತ್ತದೆ. ಮತ್ತು ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಈರುಳ್ಳಿಯಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಆಂಟಿಇನ್ಫ್ಲಮೇಟರಿ ಗುಣವು ಹೃದಯಕ್ಕೆ ತುಂಬಾ ಒಳ್ಳೆಯದು. ಇದು ಹೃದಯದ ಕಾಯಿಲೆಗಳನ್ನು ತಪ್ಪಿಸುತ್ತದೆ. ಇದರೊಂದಿಗೆ, ಇದು ಸಕ್ಕರೆಯನ್ನು ನಿಯಂತ್ರಿಸುವ ಕೆಲಸವನ್ನು ಸಹ ಮಾಡುತ್ತದೆ. ಹಾಗಾಗಿ ಈರುಳ್ಳಿ ಮಧುಮೇಹಿಗಳಿಗೂ ಉತ್ತಮವಾಗಿದೆ.
ಲಾಸ್ಟ್ ಟಿಪ್ಸ್ :
ಕೆಲವರು ಹಸಿ ಈರುಳ್ಳಿ ತಿಂದರೆ ಬಾಯಿ ಖಾರ ಅನಿಸುತ್ತದೆ ಎಂದು ತಿನ್ನವುದೇ ಇಲ್ಲ. ಅದಕ್ಕಾಗಿ ಹೀಗೆ ಮಾಡಿ. ಹಸಿ ಈರುಳ್ಳಿಗೆ ಸ್ವಲ್ಪ ಉಪ್ಪು ಮತ್ತು ಲಿಂಬು ರಸ ಸೇರಿಸಿ ತಿನ್ನಿ.
ಇದನ್ನೂ ಓದಿ : Children Eat Soil:ನಿಮ್ಮ ಮಕ್ಕಳಿಗೆ ಮಣ್ಣು ತಿನ್ನುವ ಹವ್ಯಾಸವೇ ? ಹಾಗಿದ್ದರೆ ಇದನ್ನು ಹೇಗೆ ಬಿಡಿಸುವುದು
ಇದನ್ನೂ ಓದಿ : Pippali Benefits : ಮಸಾಲಾ ಪದಾರ್ಥಗಳಲ್ಲಿ ಒಂದಾದ ಪಿಪ್ಪಲಿಯ ಪ್ರಯೋಜನಗಳು ನಿಮಗೆ ಗೊತ್ತಾ…
(Raw Onion Benefits it controls Cholesterol and gives good health)