ಭಾನುವಾರ, ಏಪ್ರಿಲ್ 27, 2025
HomeBreakingPranithasubash: ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ...

Pranithasubash: ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

- Advertisement -

ಸ್ಯಾಂಡಲ್ ವುಡ್ ತಮ್ಮ ಜನಪರ, ಸಾಮಾಜಿಕ ಕಾಳಜಿ ಮೂಲಕವೇ ಹೆಸರು ಮಾಡಿದ ನಟಿ ಪ್ರಣೀತಾ ಸುಭಾಶ್ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಂಗಾಮಾ-2 ಚಿತ್ರದ ಮೂಲಕ ಮುಂಬೈ ಮಾಯಾನಗರಿಗೆ ಕಾಲಿಟ್ಟ ಮೊದಲ ಸಿನಿಮಾದಲ್ಲೇ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚಿಗಷ್ಟೇ ಉದ್ಯಮಿ ಜೊತೆ ಸರಳವಾಗಿ ವಿವಾಹವಾಗಿ ಹೊಸ ಬದುಕಿಗೆ ಕಾಲಿಟ್ಟ ಮತ್ತೆ ಶೂಟಿಂಗ್ ಗೆ ಮರಳಿದ್ದು, ಹಾಟ್ ಹಾಟ್ ಅವತಾರದಲ್ಲಿ ಹೀರೋ ಜೊತೆ ಕಾಣಿಸಿಕೊಂಡು ಅಚ್ಚರಿಮೂಡಿಸಿದ್ದಾರೆ.

ಪ್ರಿಯಾಂಕಾದರ್ಶನ್ ನಿರ್ದೇಶನದ ಹಂಗಾಮಾ 2 ಸಂಪೂರ್ಣ ಕಾಮಿಡಿ ಸಿನಿಮಾ ಆಗಿದ್ದು, ಇದರಲ್ಲಿ ಪರೇಶ್ ರಾವಲ್ ಹಾಗೂ ಶಿಲ್ಪಾ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.

ಹಲವು ವರ್ಷಗಳಿಂದ ಬಾಲಿವುಡ್ ನ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದ ಶಿಲ್ಪಾ ಶೆಟ್ಟಿ ಈ ಸಿನಿಮಾ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಹಾಡಿನ ದೃಶ್ಯಗಳಲ್ಲಿ ಪ್ರಣೀತಾ ಕೆಂಪುಬಣ್ಣ ಕಾಸ್ಟ್ಯೂಮ್ ನಲ್ಲಿ ಮಾದಕವಾಗಿ ಕಾಣಿಸಿಕೊಂಡಿದ್ದು, ಕನ್ನಡತಿ ಮೈಚಳಿ ಬಿಟ್ಟು ಕುಣಿದ ಹಾಡಿನ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹಂಗಾಮಾ 2 ಜೊತೆ ಇನ್ನೊಂದು ಹಿಂದಿ ಚಿತ್ರದಲ್ಲೂ ಪ್ರಣೀತಾ ನಟಿಸುತ್ತಿದ್ದಾರೆ. 2010 ರಿಂದ ನಟನೆಯಲ್ಲಿ ತೊಡಗಿಕೊಂಡಿರೋ ಪ್ರಣೀತಾ, ಕನ್ನಡ,ತೆಲುಗು,ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.

RELATED ARTICLES

Most Popular