ನಿನಗೆ ಯಾರಿಂದಲೂ ನೋವಾಗದಂತೆ‌ ಕಾಯುತ್ತೇನೆ…! ರಶ್ಮಿಕಾ ಪ್ರಾಮಿಸ್ ಮಾಡಿದ್ದ್ಯಾರಿಗೆ ಗೊತ್ತಾ…?!

ಸ್ಯಾಂಡಲ್ ವುಡ್ ನಿಂದ‌ ಆರಂಭಿಸಿ ತೆಲುಗು,ತಮಿಳು ದಾಟಿ ಬಾಲಿವುಡ್ ಅಂಗಳದಲ್ಲಿ‌‌ ಮಿಂಚುತ್ತಿರೋ ಬೆಡಗಿ ರಶ್ಮಿಕಾ‌ಮಂದಣ್ಣ. ನ್ಯಾಶನಲ್ ಕ್ರಶ್ ಎನ್ನಿಸಿರೋ ರಶ್ಮಿಕಾ ಸ್ಪೆಶಲ್ ದಿನದಂದು ಸ್ಪೆಶಲ್ ಪರ್ಸನ್ ಒಬ್ಬರಿಗೆ ನಿನಗೆ ಯಾರಿಂದಲೂ ನೋವಾಗದಂತೆ‌ ಕಾಯುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಕೆರಿಯರ್ ನ ಸುವರ್ಣದಿನಗಳಲ್ಲಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಅವಕಾಶಗಳನ್ನು ಪಡೆಯುತ್ತಿರುವ ರಶ್ಮಿಕಾ ಈ ಬ್ಯುಸಿ ದಿನಗಳಲ್ಲೂ ತನ್ನ ಪ್ರೀತಿಯ ತಂಗಿಯ ಬರ್ತಡೇಯನ್ನು ಸೆಲಿಬ್ರೇಟ್ ಮಾಡಲು ಮರೆತಿಲ್ಲ. 

ಸೋಷಿಯಲ್ ಮೀಡಿಯಾದಲ್ಲಿ ಭಾವುಕವಾಗಿ ಪೋಸ್ಟ್ ಹಾಕಿರುವ ರಶ್ಮಿಕಾ, ಡಾರ್ಲಿಂಗ್ ಬೇಬಿ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ಯಾರಿಂದಲೂ ನಿನಗೆ ನೋವಾಗದಂತೆ ಕಾಯುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ.

ರಶ್ಮಿಕಾ ಸಹೋದರಿ ಶಿಮನ್ ಮಂದಣ್ಣ ರಶ್ಮಿಕಾಗಿಂತ ಬರೋಬ್ಬರಿ 15 ವರ್ಷ ಚಿಕ್ಕವರು. ಇದೇ ಕಾರಣಕ್ಕೆ ರಶ್ಮಿಕಾ ತಂಗಿಯನ್ನು ತುಂಬ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.

ತಮ್ಮ ಬಿಡುವಿನ ವೇಳೆಯಲ್ಲಿ ತಂಗಿಯನ್ನು ಕೂಸುಮರಿ ಮಾಡುತ್ತಾ, ಆಕೆಯೊಂದಿಗೆ ಆಟ ಆಡುತ್ತ ಕಳೆಯುವ ರಶ್ಮಿಕಾಗೆ ಆಕೆಯೆಂದರೇ ತುಂಬ ಎಮೋಶನಲ್ ಅಟ್ಯಾಚಮೆಂಟ್ ಅಂತೆ.

ಸದ್ಯ ಹೈದ್ರಾಬಾದ್ ನ ತಮ್ಮ ಪ್ಯ್ಲಾಟ್ ನಲ್ಲಿರುವ ರಶ್ಮಿಕಾ  ಕೊರೋನಾ ಕಡಿಮೆಯಾಗಿ ಪರಿಸ್ಥಿತಿ ಎಲ್ಲ ಸರಿ ಹೋದ ಮೇಲೆ  ಮನೆಗೆ ಬರುತ್ತೇನೆ. ಅವಾಗ ನಿನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸೋಣ ಎಂದಿದ್ದಾರೆ.

ಕೊಡಗಿನಲ್ಲಿ ರಶ್ಮಿಕಾ ಪೋಷಕರು ಆಕೆಯ ತಂಗಿ ಶಿಮನ್ ಮಂದಣ್ಣ  ವಾಸವಾಗಿದ್ದಾರೆ. ಉದ್ಯಮಿಯಾಗಿರುವ ರಶ್ಮಿಕಾ ತಂದೆ ಕೊಡಗಿನಲ್ಲಿ ರೆಸಾರ್ಟ್, ರೆಸ್ಟೋರೆಂಟ್ ಗಳನ್ನು ಹೊಂದಿದ್ದಾರೆ. ರಶ್ಮಿಕಾ ತಾಯಿ ಗೃಹಿಣಿಯಾಗಿದ್ದು, ತಂಗಿ ಶಿಮನ್ ರೊಂದಿಗೆ ರಶ್ಮಿಕಾ ಯಾವಾಗಲೂ ಆಟ ಆಡುತ್ತ ಎಂಜಾಯ್ ಮಾಡ್ತಾರೆ.

ಈಗ ತಂಗಿಯ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಂಡಿರೋ ರಶ್ಮಿಕಾ ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

Comments are closed.