ಕೊಡಗಿನ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ…! ಬಾಲಿವುಡ್ ಗೆ ಪ್ರಮೋಶನ್ ಪಡೆದ ಕನ್ನಡತಿಗೆ ಕಾಮನ್ ಡಿಪಿ ಗಿಫ್ಟ್…!!

ಸ್ಯಾಂಡಲ್ ವುಡ್ ನಂತರ, ಟಾಲಿವುಟ್,ಕಾಲಿವುಡ್ ದಾಟಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿರೋ ಕೊಡವತಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಬದುಕಿನ ಬೆಳ್ಳಿಹಬ್ಬದ ಸಂಭ್ರಮದಲ್ಲಿರೋ ರಶ್ಮಿಕಾಗೆ ಕಾಮನ್ ಡಿಪಿ ಮೂಲಕ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಟಾಲಿವುಡ್ ನ ಲಿಲ್ಲಿ ಹಾಗೂ ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗುಡ್ ಬೈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿರುವ ರಶ್ಮಿಕಾ, ಇದೇ ಸಂಭ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಬರ್ತಡೇಗೆ ರಿಲೀಸ್ ಆಗಿರೋ ಕಾಮನ್ ಡಿಪಿಯನ್ನು, ಟಾಲಿವುಡ್ ನಿರ್ದೇಶಕ ವೆಂಕಿ ಕುಡುಮಲ ಹಾಗೂ ವಿಜಯ್ ದೇವರಕೊಂಡ ಸಹೋದರ ಹಂಚಿಕೊಂಡಿದ್ದು, ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ. ತೆಲುಗು,ತಮಿಳಿನಲ್ಲಿ ಚಿತ್ರಗಳ ಶೂಟಿಂಗ್ ಮುಗಿಸಿರುವ ರಶ್ಮಿಕಾ ಬಾಲಿವುಡ್ ನ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಬಾಲಿವುಡ್  ಸಿನಿಮಾಗಳಲ್ಲಿ ಅವಕಾಶ ಸಿಕ್ಕಿರೋದಕ್ಕೆ ಸಖತ್ ಖುಷಿಯಾಗಿರೋ ರಶ್ಮಿಕಾ ಇದು ತಮ್ಮ ಬರ್ತಡೇಗೆ ಸಿಕ್ಕಿರೋ ಸ್ಪೆಶಲ್ ಗಿಫ್ಟ್ ಎಂದಿದ್ದಾರೆ.

ಮುಂಬೈನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿರೋ ರಶ್ಮಿಕಾ ಶೂಟಿಂಗ್ ಗಾಗಿ ಅಲ್ಲೇ ವಾಸವಾಗಿದ್ದು, ಏಪ್ರಿಲ್ 2 ರಂದು ಅಮಿತಾಬ್ ಜೊತೆ ನಟಿಸುತ್ತಿರುವ ಗುಡ್ ಬೈ ಸಿನಿಮಾ ಮುಹೂರ್ತ ನೆರವೇರಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರೋ ರಶ್ಮಿಕಾ ಮೊನ್ನೆಯಷ್ಟೇ ಅಕ್ಕಿನೇನಿ ನಾಗಾರ್ಜುನ್ ಅಭಿನಯದ ಸಿನಿಮಾ ಪ್ರಮೋಶನ್ ಗಾಗಿ 30 ಸೆಕೆಂಡ್ಸ್ ಡಿಪ್ಸ್ ತೆಗೆದು ವಿಡಿಯೋ ಹಂಚಿಕೊಂಡಿದ್ದರು.

Comments are closed.