ದಾಖಲೆಯತ್ತ‌ ದಾಪುಗಾಲಿಟ್ಟ ರಾಬರ್ಟ್…! 100 ಕೋಟಿ ಗಳಿಸಲಿದೆ ದಚ್ಚು ಸಿನಿಮಾ…!!

ಕೊರೋನಾ ಎಫೆಕ್ಟ್‌ ಬಳಿಕ ತೆರೆಗೆ ಬಂದ ರಾಬರ್ಟ್ ಚಿತ್ರಪ್ರದರ್ಶನ ದಾಖಲೆಯತ್ತ ಸಾಗುತ್ತಿದ್ದು ಇನ್ನೆರಡು ವಾರದಲ್ಲಿ ಸಿನಿಮಾ 100 ಕೋಟಿ ಹಣಗಳಿಸುವ ಮುನ್ಸೂಚನೆ ನೀಡಿದೆ.

ಮಾರ್ಚ್‌೧೧ ಶಿವರಾತ್ರಿಯಂದು ಮೊದಲ‌ ದಿನವೇ ಬರೋಬ್ಬರಿ ೨ ಸಾವಿರ ಸ್ಕ್ರಿನ್ ಮೇಲೆ ಪ್ರದರ್ಶನಗೊಂಡ ರಾಬರ್ಟ್ ಮೊದಲ ಎರಡು ದಿನದಲ್ಲೇ ಅಂದಾಜು ೧೮ ಕೋಟಿ ರೂಪಾಯಿ ಗಳಿಸಿತ್ತು.

ಕರ್ನಾಟಕ‌ ಮಾತ್ರವಲ್ಲದೇ ಆಂಧ್ರಪ್ರದೇಶದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು,‌ಮೊದಲ ವಾರವೇ 70 ಕೋಟಿ ಗಳಿಸಿದೆ ಎನ್ನಲಾಗಿದೆ.

ಈ ಮಧ್ಯೆ ಎಲ್ಲೆಡೆಯೂ ಚಿತ್ರಮಂದಿರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇನ್ನೆರಡು ವಾರದಲ್ಲಿ ಚಿತ್ರ ದ ಗಳಿಕೆ 100 ಕೋಟಿ ಮೀರಲಿದೆ ಅಂತಾರೆ‌ ಚಿತ್ರರಂಗದ ಮಂದಿ.

ಇದುವರೆಗೂ ಕನ್ನಡದಲ್ಲಿ ಕೆಜಿಎಫ್ ಚಿತ್ರ ಹೊರತು ಪಡಿಸಿದರೇ ಮತ್ಯಾವ ಚಿತ್ರವೂ ನೂರು ಕೋಟಿ ಕ್ಲಬ್ ದಾಟಿಲ್ಲ. ರಾಬರ್ಟ್ ೧೦೦ ಕೋಟಿ ಹಣ ಗಳಿಸಿದರೇ ಎರಡನೇ ಚಿತ್ರ ಎಂಬ ಖ್ಯಾತಿ ಪಡೆಯಲಿದೆ.ಕನ್ನಡದಲ್ಲಿ ೧೦೦ ಕೋಟಿ ಗಳಿಸಿದ ಖ್ಯಾತಿಗೂ ರಾಬರ್ಟ್ ಪಾತ್ರವಾಗಲಿದೆ. ಎರಡು ವರ್ಷಗಳ ಬಳಿಕ ದರ್ಶನ್ ಚಿತ್ರ ತೆರೆಗೆ ಬಂದಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Comments are closed.