ಜಾತಕದಲ್ಲಿನ ದೋಷ ಪರಿಹಾರಕ್ಕೆ 13 ವರ್ಷದ ವಿದ್ಯಾರ್ಥಿಯನ್ನೇ ವಿವಾಹವಾದ ಶಿಕ್ಷಕಿ…!!!

ಪಂಜಾಬ್ : ಜಾತಕದಲ್ಲಿನ ದೋಷ ನಿವಾರಣೆಗಾಗಿ ಮನೆಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ 13 ವರ್ಷದ ವಿದ್ಯಾರ್ಥಿಯನ್ನೇ ಶಿಕ್ಷಕಿಯೋರ್ವರು ವಿವಾಹವಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಪಂಜಾಬ್ ರಾಜ್ಯದ ಜಲಂಧರ್ ನಗರದ ಬಸ್ತಿ ಬಾವ ಖೇಲ್ ನಿವಾಸಿಯಾಗಿರುವ ಶಿಕ್ಷಕಿಯೋರ್ವರಿಗೆ ಮದುವೆ ವಯಸ್ಸು ಬಂದ್ರೂ ವಿವಾಹವಾಗಿರಲಿಲ್ಲ. ಹೀಗಾಗಿ ಜ್ಯೋತಿಷಿಯೋರ್ವರನ್ನು ಭೇಟಿಯಾಗಿ ಸಮಸ್ಯೆಯನ್ನು ತಿಳಿಸಿದ್ದಾರೆ. ಈ ವೇಳೆ ಶಿಕ್ಷಕಿಯ ಜಾತಕದಲ್ಲಿ ಮಂಗಲಿಕ್ ದೋಷವಿದ್ದು, ಈ ದೋಷವೇ ಮದುವೆಗೆ ತೊಡಕಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕನ್ನು ವಿವಾಹವಾದ್ರೆ ದೋಷ ಪರಿಹಾರವಾಗುತ್ತೆ ಅನ್ನೋ ಸಲಹೆಯನ್ನು ಕೊಟ್ಟಿದ್ದ.

https://kannada.newsnext.live/soldiers-park-road-district-collector-udupi/

ಇದನ್ನು ನಂಬಿದ ಶಿಕ್ಷಕಿ ಹಾಗೂ ಪೋಷಕರು ಅಪ್ರಾಪ್ತ ಬಾಲಕನೊಂದಿಗೆ ವಿವಾಹ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಇದೇ ವೇಳೆಯಲ್ಲಿ ಶಿಕ್ಷಕಿಯ ಕೈಯಲ್ಲಿ ಮನೆ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ 13 ವರ್ಷದ ಬಾಲಕನೊಂದಿಗೆ ಸಾಂಕೇತಕವಾಗಿ ವಿವಾಹ ಮಾಡುವ ಪ್ಲ್ಯಾನ್ ರೂಪಿಸಿದ್ದಾರೆ. ಇದಕ್ಕಾಗಿ ಶಿಕ್ಷಕಿ ಬಾಲಕನ ಪೋಷಕರಿಗೆ ಕರೆ ಮಾಡಿ 1 ವಾರ ತನ್ನ ಮನೆಯಲ್ಲಿಯೇ ತಂಗಲು ಅನುಮತಿಯನ್ನು ಪಡೆದುಕೊಂಡಿದ್ದಾಳೆ.

ಶಿಕ್ಷಕಿ ಹಾಗೂ ಪೋಷಕರು ಮದುವೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಮೆಹಂಡಿ, ಫೇರೆ ಮತ್ತು ಸುಹಾಗ್ ರಾತ್ ಸಮಾರಂಭದ ಜೊತೆಗೆ ವಿವಾಹವನ್ನೂ ಶಾಸ್ತ್ರೋಕ್ತವಾಗಿಯೇ ನೆರವೇರಿಸಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಶಿಕ್ಷಕಿಯನ್ನು ವಿಧವೆಯನ್ನಾಗಿ ಘೋಷಿಸಿ ಶಾಸ್ತ್ರವನ್ನೂ ಪೂರೈಸಿದ್ದಾರೆ. ವಾರ ಕಳೆದು ಮನೆಗೆ ಮರಳಿದ ಬಾಲಕ ತನ್ನ ತಾಯಿ ನಡೆದ ವಿಚಾರವನ್ನು ತಿಳಿಸಿದ್ದಾನೆ.
ಬಾಲಕನನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡು ಬಲವಂತವಾಗಿ ವಿವಾಹವನ್ನು ನೆರವೇರಿಸಲಾಗಿದೆ ಎಂದು ಬಸ್ತಿ ಬಾವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಆದರೆ ಪೋಷಕರು ಹಾಗೂ ಶಿಕ್ಷಕಿಯ ಕಡೆಯವರು ರಾಜಿ ಮೂಲಕ ಪ್ರಕರಣವನ್ನು ಬಗೆ ಹರಿಸಿಕೊಂಡಿದ್ದಾರೆ.

ಆದರೆ ಅಪ್ರಾಪ್ತ ಬಾಲಕನನ್ನು ಅಕ್ರಮ ಬಂಧನದಲ್ಲಿರಿಸಿ, ಬಲವಂತವಾಗಿ ವಿವಾಹ ಮಾಡಿರುವ ಪ್ರಕರಣವನ್ನು ಪಂಜಾಬ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

https://kannada.newsnext.live/priya-varrier-hotphotos-socialmedia-bad-comment-answers/

Comments are closed.