ಮಲೆನಾಡ ಹುಡುಗರಿಗೆ ಹುಡುಗಿ ಸಿಕ್ತಿಲ್ಲ…! ತೆರೆಗೆ ಬರಲಿದೆ ಕೃಷಿಕರ ಮದುವೆ ಬವಣೆ….!!

ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ಮತ್ತೊಂದು ಹಾಸ್ಯಪ್ರಧಾನ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಮಲೆನಾಡಿನ ಜ್ವಲಂತ ಸಮಸ್ಯೆಯಾಗಿರುವ ಕೃಷಿಕರಿಗೆ ವಧು ಕೊರತೆ ಸಿನಿಮಾದ ಪ್ರಧಾನ ಅಂಶ.

ಸ್ವತಃ ಹೇಮಂತ್ ಹೆಗಡೆ ನಿರ್ದೇಶನದ ಜೊತೆಗೆ ನಾಯಕರಾಗಿಯೂ ಕಾಣಿಸಿಕೊಳ್ಳಲಿದ್ದು, 35 ವರ್ಷದ ಕೃಷಿಕ ವರನಿಗೆ ವಧು ಹುಡುಕುವ ಕತೆಯ ಬವಣೆಯನ್ನು ಸಿನಿಮಾ ತೆರೆಗೆ ತರಲಿದೆ. ಚಿತ್ರದಲ್ಲಿ ನಾಯಕಿಯಾಗಿ ಮರಾಠಿಯ ಲೋಪಮುದ್ರಾ ರಾವುತ್ ಕಾಣಿಸಿಕೊಳ್ಳಲಿದ್ದಾರೆ.

ಜೂನ್ 23 ರಂದು ಚಿತ್ರತಂಡ ಸಿನಿಮಾದ ಶೀರ್ಷಿಕೆ ಅನಾವರಣಗೊಳಿಸಲಿದ್ದು, ಪದ್ಮಜಾ ರಾವ್, ಶರತ್ ಲೋಹಿತಾಶ್ವ,ರಮೇಶ್ ಭಟ್ ಸೇರಿದಂತೆ ಹಲವು ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ.

ಉತ್ತರ ಕನ್ನಡ, ಶಿವಮೊಗ್ಗ, ಶೃಂಗೇರಿ,ಉತ್ತರ ಭಾರತದಲ್ಲಿ ಸಿನಿಮಾ ಶೂಟಿಂಗ್ ತಂಡ ನಿರ್ಧರಿಸಿದ್ದು, ನೈಜವಾಗಿ ಮೂಡಿಬರಲಿದೆ ಸಿನಿಮಾ ಎನ್ನುತ್ತಾರೆ ಹೇಮಂತ್ ಹೆಗಡೆ.

ಕಳೆದ 5-6 ವರ್ಷದಿಂದ ಮಲೆನಾಡು ಭಾಗದಲ್ಲಿ ಹವ್ಯಕ ಸಮುದಾಯ ಸೇರಿದಂತೆ ಕೃಷಿಕ ಸಮುದಾಯಕ್ಕೆ ಹೆಣ್ಣು ಕೊಡಲು ಮಾತಾಪಿತೃರು ಹಿಂದೇಟು ಹಾಕುತ್ತಿದ್ದು, ಇದರಿಂದ ಸಾಮಾಜಿಕ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಕಾಲಕಳೆದಂತೇ ಕೃಷಿಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದು ಸಾಮಾಜಿಕ ಪಿಡುಗಾಗಿ ಬದಲಾಗುತ್ತಿದೆ ಎನ್ನುತ್ತಿದ್ದಾರೆ  ನಿರ್ದೇಶಕ ಹೇಮಂತ್ ಹೆಗಡೆ. ಮೂವರು ಎನ್ಆರ್ಆಯ್ ಗಳು ಈ ಸಿನಿಮಾ ನಿರ್ಮಾಪಕರಾಗಿದ್ದಾರೆ.  

Comments are closed.