ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್…! ಕೆಜಿಎಫ್-೨ ತಂಡದಿಂದ ಹೊರಬಿತ್ತು ಬ್ರೇಕಿಂಗ್ ನ್ಯೂಸ್…!!

ಕೆಜಿಎಫ್-೨ ಕನ್ನಡ ಸೇರಿದಂತೆ ಚಿತ್ರರಸಿಕರು ಕಾತುರರಾಗಿ ಕಾಯ್ತಿರೋ ಚಿತ್ರ. ಸಧ್ಯ ಶೂಟಿಂಗ್ ಮುಗಿಸಿರೋ ಚಿತ್ರತಂಡ ರಿಲ್ಯಾಕ್ಸ್ ಮೂಡನಲ್ಲಿದ್ದು, ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ರಾಕಿಂಗ್ ಸ್ಟಾರ್ ಸಿನಿಕೆರಿಯರ್ ಗೆ ಬ್ರೇಕ್ ನೀಡಿದ ಚಿತ್ರ ಕೆಜಿಎಫ್ ಬಳಿಕ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಾ ಇರೋ ಚಿತ್ರ ಕೆಜಿಎಫ್-೨. ಕೊರೋನಾ ದಿಂದ ಶೂಟಿಂಗ್ ವಿಳಂಬಗೊಂಡ್ರು ಸಧ್ಯ ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಸಿನಿಮಾ ಸೆಟ್ ನಲ್ಲೇ ಸೆಲ್ಪಿ ತಗೊಂಡು ಸಂಭ್ರಮಿಸಿದೆ.

ಅಷ್ಟೇ ಅಲ್ಲ ಡಿಸೆಂಬರ್ ೨೧ ಕೆಜಿಎಫ್ ಸಿನಿಮಾ ರೀಲಿಸ್ ಆದ ದಿನ. ಇದೇ ದಿನ ಕೆಜಿಎಫ್-೨ ಗೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್ ಕೊಡೋದಾಗಿ ಹೇಳಿಕೊಂಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

https://twitter.com/prashanth_neel/status/1340879166258855936?s=19

ಅಭಿಮಾನಿಗಳ ನೀರಿಕ್ಷೆಯಂತೆ, ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನವೇ ಅವರ ಬರ್ತಡೇ ಗಿಫ್ಟ್ ಆಗಿ ಕೆಜಿಎಫ್-೨ ಟೀಸರ್ ರಿಲೀಸ್ ಆಗಲಿದೆ. ಜನವರಿ ೮ ರಂದು ಬೆಳಗ್ಗೆ ೧೦.೧೮ ಕ್ಕೆ ಕೆಜಿಎಫ್-೨ ಟೀಸರ್ ಹೊರಬರಲಿದೆ.

ಪ್ರಶಾಂತ್ ನೀಲ್ ಈ ಸಿಹಿಸುದ್ದಿ ಜೊತೆ ಚಿತ್ರದ ಇಮೇಜ್ ಒಂದನ್ನು ಹಂಚಿಕೊಂಡಿದ್ದು ಅದಕ್ಕೆ, ಸಾಮಾಜ್ಯದತ್ತ ಒಂದು ನೋಟ… ಇದನ್ನು ಸೃಷ್ಟಿಸಲು ಒಂದು ವರ್ಷದ ಧೀರ್ಘಕಾಲ ತೆಗೆದುಕೊಂಡಿರಬಹುದು. ಆದರೇ ಮತ್ತಷ್ಟು ಬಲಿಷ್ಟವಾಗಿ ಬಂದಿದ್ದೇವೆ ಎಂದಿದ್ದಾರೆ.

ಕೆಜಿಎಫ್-೨ ದ ಈ ಅಪ್ಡೇಟ್ ಗಳು ಇವತ್ತಿನ ಸೋಷಿಯಲ್ ಮೀಡಿಯಾದ ಹೈಲೈಟ್ಸ್ ಆಗಿದ್ದು ಯಶ್ ಅಭಿಮಾನಿಗಳು ಪೋಟೋ, ಟೀಸರ್ ರಿಲೀಸ್ ಡೇಟ್ ಅಪ್ಡೇಟ್ ಗಳನ್ನು ಶೇರ್ ಮಾಡ್ಕೊಂಡು ಸಂಭ್ರಮಿಸುತ್ತಿದ್ದಾರೆ.

ಸಧ್ಯ ಕೆಜಿಎಫ್-೨ ಕ್ಲೈಮ್ಯಾಕ್ಸ್ ಶೂಟಿಂಗ್ ನ್ನು ಸಂಜಯ್ ದತ್ ಮತ್ತು ಯಶ್ ನಡುವಿನ ಫೈಟಿಂಗ್ ಶೂಟಿಂಗ್ ಜೊತೆ ಮುಗಿಸಿರುವ ಚಿತ್ರತಂಡ ಸಂಜಯ್ ದತ್ ಅವರನ್ನು ಪ್ರೀತಿಯಿಂದ ಬೀಳ್ಕೊಟ್ಟಿದ್ದು ಪೋಟೋಗಳನ್ನು ಹಂಚಿಕೊಂಡಿದೆ.

Comments are closed.