ಬ್ರಿಟನ್ ನಲ್ಲಿ ಹೊಸ ಕೊರೊನಾ ಪತ್ತೆ: ಅಂತರಾಷ್ಟ್ರೀಯ ವಿಮಾನ ಸೇವೆ ಬಂದ್ : ಕೇಂದ್ರ ಸರಕಾರದ ಮಹತ್ವದ ನಿರ್ಧಾರ..!

ನವದೆಹಲಿ : ಬ್ರಿಟನ್ ನಲ್ಲಿ ಹೊಸ ಕೊರೊನಾ ಸೋಂಕಿನ ಅಬ್ಬರದ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ಭಾರತಕ್ಕೆ ಬರುವ ಹಾಗೂ ಹೋಗುವ ಎಲ್ಲಾ ಅಂತರಾಷ್ಟ್ರೀಯ ವಿಮಾನಯಾನ ಸೇವೆಯನ್ನು ರದ್ದು ಮಾಡಿ ಕೇಂದ್ರ ಸರಕಾರ ಮಹತ್ವದ ಆದೇಶ ಹೊರಡಿಸಿದೆ.

ಬಹೊಸ ಕೊರೊನಾ ವೈರಸ್ ಸೋಂಕಿನ ಆರ್ಭಟಕ್ಕೆ ಬ್ರಿಟನ್ ತತ್ತರಿಸಿದೆ. ಕೊರೊನಾ ವೈರಸ್ ಸೋಂಕು ರೂಪಾಂತರಗೊಂಡು ಹೊಸ ಪ್ರಬೇಧವಾಗಿ ಹರಡುತ್ತಿದ್ದು, ಮರಣ ಮೃದಂಗವನ್ನು ಬಾರಿಸುತ್ತಿದೆ. ಬ್ರಿಟನ್ ಈಗಾಗಲೇ ಪರಿಸ್ಥಿತಿ ಕೈ ಮೀರಿದೆ ಅಂತಾ ಹೇಳಿಕೊಂಡಿದ್ದು, ಬ್ರಿಟನ್ ನಲ್ಲಿ ಲಾಕ್ ಡೌನ್ ಆದೇಶವನ್ನು ಜಾರಿ ಮಾಡಲಾಗಿದೆ.

ಬ್ರಿಟನ್ ನಲ್ಲಿ ಹೊಸ ಕೊರೊನಾ ವೈರಸ್ ಪತ್ತೆಯಾಗುತ್ತಿದ್ದಂತೆಯೇ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದ್ದು, ಡಿಸೆಂಬರ್ 31ರ ವರೆಗೆ ಬ್ರಿಟನ್ ನಿಂದ ದೇಶಕ್ಕೆ ಬರುವ ಹಾಗೂ ಹೋಗುವ ಎಲ್ಲಾ ವಿಮಾನಯಾನ ಸೇವೆಗೆ ನಿರ್ಬಂಧ ವಿಧಿಸಿದೆ.

ಕೇಂದ್ರ ವಿಮಾನಯಾನ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಬ್ರಿಟನ್ ನಿಂದ ದೇಶಕ್ಕೆ ಮರಳಿದವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದೆ. ಭಾರತದ ಸೇರಿದಂತೆ ವಿಶ್ವದ 30 ಕ್ಕೂ ಅಧಿಕ ದೇಶಗಳು ಬ್ರಿಟನ್ ವಿಮಾನಕ್ಕೆ ನಿರ್ಬಂಧ ಹೇರಿವೆ.

Comments are closed.