ಚಿರು ಅಗಲಿದ ಸುದ್ದಿ ಮೊದಲು ತಿಳಿದಿದ್ದು ಯಾರಿಗೆ…!? ವೈದ್ಯರು ಕುಟುಂಬಕ್ಕಿಂತ ಮೊದಲು ಪೋನ್ ಮಾಡಿದ್ದ್ಯಾರಿಗೆ ಗೊತ್ತಾ…?!

ಸ್ಯಾಂಡಲ್ ವುಡ್ ನ ಯುವ ನಟ ಚಿರು ಇನ್ನಿಲ್ಲವಾಗಿ ಇಂದಿಗೆ ಒಂದು ವರ್ಷ. ಸರ್ಜಾ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದರೇ, ಸರ್ಜಾ ಕುಟುಂಬದ ಆಪ್ತರು  ಚಿರು ಸಾವಿನ ಸಂಗತಿಯನ್ನು, ಆ ಕರಾಳ ದಿನವನ್ನು ನೆನಪಿಸಿಕೊಂಡು ಕಣ್ಣೀರಾಗಿದ್ದಾರೆ.

ಜೂನ್ 7 ರಂದು ಹೃದಯಾಘಾತಕ್ಕೆ ಗುರಿಯಾಗುವ ಮುನ್ನ ಚಿರು ಜೂನ್ 6 ರಂದು ಫಿಟ್ಸ್ ಬಂದು ಬಿದ್ದಿದ್ದರಂತೆ. ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರಂತೆ. ಬಳಿಕ  ಜೂನ್ 7 ರಂದು ಮತ್ತೆ ಎಚ್ಚರ ತಪ್ಪಿದಾಗ ಸಾಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಈ ವೇಳೆ ಚಿರುಗೆ ಚಿಕಿತ್ಸೆ ನೀಡಿದ ವೈದ್ಯರು ಚಿರುವನ್ನು ಉಳಿಸಲು ಹಾಗೂ ಸ್ತಬ್ಧಗೊಂಡಿದ್ದ ಆತನ ಹೃದಯ ಬಡಿತವನ್ನು ಉಳಿಸಲು ಇನ್ನಿಲ್ಲದ ಸರ್ಕಸ್ ಮಾಡಿದ್ದರಂತೆ. ಇದು ಸಫಲವಾಗದೇ ಹೋದಾಗ ವೈದ್ಯರು ಈ ಬಗ್ಗೆ ಹಿರಿಯ ನಿರ್ದೇಶಕ ಹಾಗೂ ಸುಂದರ ರಾಜ್ ಕುಟುಂಬಕ್ಕೆ ಆಪ್ತರಾದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಮಾಹಿತಿ ನೀಡಿದ್ದರಂತೆ.

ಈ ಬಗ್ಗೆ ನೋವಿನಿಂದ ಮಾಹಿತಿ ಹಂಚಿಕೊಂಡಿರುವ ಬರಗೂರು ರಾಮಚಂದ್ರಪ್ಪ, ಚಿರುಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು  ನನಗೆ ಆತ್ಮೀಯರು. ಹೀಗಾಗಿ ಚಿರುವನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯೇ ಸುಂದರ ರಾಜ್ ನನಗೆ ಪೋನ್ ಮಾಡಿದ್ದರು.

ಹೀಗಾಗಿ ನಾನು ಮೊದಲೇ ವೈದ್ಯರಿಗೆ ತಿಳಿಸಿದ್ದೆ. ಅವರು ಚಿಕಿತ್ಸೆ ಕೊಡಲು ಸಿದ್ಧವಾಗಿದ್ದರು. ಒಂದು ತಾಸುಗಳ ಕಾಲ ಚಿರು ಜೀವ ಉಳಿಸುವ ಪ್ರಯತ್ನ ನಡೆಸಿದರು. ಈ ವೇಳೆ ನಾನು ಅವರೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಳ್ಳುತ್ತಿದ್ದೆ.  ಕೊನೆಗೆ ಚಿರು ಇನ್ನಿಲ್ಲ ಎಂಬ ಸಂಗತಿಯನ್ನು ವೈದ್ಯರು ನನಗೆ ತಿಳಿಸಿದರು.

ಸೂಕ್ಷ್ಮವಾಗಿ ಈ ಸಂಗತಿಯನ್ನು ಸುಂದರ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ ತಿಳಿಸುವಂತೆ ಸೂಚಿಸಿದ್ದೆ. ನನ್ನ ಪತ್ನಿಗೆ ಹೃದಯಾಘಾತವಾದಾಗಲೂ ಸಾಗರ್ ಅಪೋಲೋ ಆಸ್ಪತ್ರೆಯ ವೈದ್ಯರು ಪಲ್ಸ್ ರಿವೈಲ್ ಮಾಡಿ ಉಳಿಸಿಕೊಂಡಿದ್ದರು. ಚಿರುವನ್ನು ಉಳಿಸಲು ಪ್ರಯತ್ನ ನಡೆಸಿದರೂ ಎಂಬ ಸಂಗತಿಯನ್ನು ಬರಗೂರು ರಾಮಚಂದ್ರಪ್ಪ ಹೇಳಿಕೊಂಡಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರು ಸುಂದರ ರಾಜ್ ದಂಪತಿಯೊಂದಿಗೆ ಹಲವು ವರ್ಷಗಳಿಂದ ಆತ್ಮೀಯ ಸಂಬಂಧ ಹೊಂದಿದ್ದು, ಮೇಘನಾ ರಾಜ್ ಕೂಡ ರಾಮಚಂದ್ರಪ್ಪ ನಿರ್ದೇಶನದ ಕರಡಿಪುರ ಸಿನಿಮಾ ಮೂಲಕವೇ ಬಣ್ಣ ಹಚ್ಚಿದ್ದರು.

ಇನ್ನು ಚಿರು ಮತ್ತು ಮೇಘನಾ ಬಗ್ಗೆಯೂ ಮಾತನಾಡಿರುವ ಬರಗೂರುರಾಮಚಂದ್ರಪ್ಪ ಚಿರುವನ್ನು ನಾನು ಹತ್ತಿರದಿಂದ ನೋಡಿದ್ದು ಕಡಿಮೆ. ಆದರೆ ಆತ ಸಿಂಪಲ್ ವ್ಯಕ್ತಿ ಎಂಬುದನ್ನು ಕೇಳಿ ತಿಳಿದುಕೊಂಡೆ. ಮೇಘನಾ ಚಿರು ಮದುವೆ ಬಳಿಕ ಸಾಕಷ್ಟು ಸಲ ಭೇಟಿಯಾಗಿದ್ದೆ ಎಂದಿದ್ದಾರೆ.

Comments are closed.