ಮಗು ಮುದ್ದಾಗಿದೆ…! ಆದರೆ ಜ್ಯೂನಿಯರ್ ಚಿರು ಅಲ್ಲವೇ ಅಲ್ಲ…! ಮೇಘನಾ ಹೀಗ್ಯಾಕಂದ್ರು…?!

ಸೋಷಿಯಲ್ ಮೀಡಿಯಾ ಅನ್ನೋದು ಒಂಥರಾ ದೊಡ್ಡ ಸಮುದ್ರ ಇದ್ದಂತೆ. ಇಲ್ಲಿ ಸತ್ಯ ಸಂಗತಿಗಳಿಗಿಂತ ಕೆಲವೊಮ್ಮೆ ಸುಳ್ಳು ಸುದ್ದಿಗಳೇ ಸದ್ದು ಮಾಡುತ್ತವೆ. ಇಂತಹುದೇ ಸುಳ್ಳು ಸುದ್ದಿ ಯೊಂದಕ್ಕೆ ನಟಿ ಮೇಘನಾ ರಾಜ್ ನಯವಾಗಿ, ಅಷ್ಟೇ ಖಾರವಾದ ಉತ್ತರ ನೀಡಿದ್ದಾರೆ.

ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಚಿರುದೇ ಹವಾ. ಯಾವ ಸೈಟ್ ನೋಡಿದರೂ ಜ್ಯೂನಿಯರ್ ಚಿರು ಹೇಗಿದ್ದಾರೆ ನೋಡಿ, ಅವರ ತುಂಟಾಟದ ವಿಡಿಯೋ ನೋಡಿ ಎಂಬೆಲ್ಲ ಹೆಡ್ಡಿಂಗ್ ಗಳ ಜೊತೆ ಮುದ್ದಾದ ಮಗುವಿನ ವಿಡಿಯೋ ಇರ್ತಿತ್ತು.

ಚಿರು ಹಾಗೂ ಮೇಘನಾ ಅಭಿಮಾನಿಗಳು ಈ ಪೋಟೋ ನೋಡಿ ಸಂಭ್ರಮಿಸ್ತಾ ಇದ್ದರು. ಆದರೆ ಅಸಲಿಗೆ ಅದ್ಯಾವುದು ಚಿರು ಮಗುವಲ್ಲ. ನಾಮಕರಣ ದ ವರೆಗೆ ಜ್ಯೂನಿಯರ್ ಚಿರು ಪೋಟೋ ಸೋಷಿಯಲ್ ಮೀಡಿಯಾಗೆ ಬಿಡದಿರಲು ಮೇಘನಾ ಕುಟುಂಬ ನಿರ್ಧರಿಸಿದೆ.

ಆದರೂ ಜ್ಯೂನಿಯರ್ ಚಿರು ಹೆಸರಲ್ಲಿ ನೂರಾರು ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದ್ದವು. ಇದನ್ನೆಲ್ಲ ನೋಡಿ ನೋಡಿ ಬೇಸತ್ತ ಮೇಘನಾ ಈ ಸುಳ್ಳುಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ.

ಇದಕ್ಕಾಗಿ ತಮ್ಮ ಅಧಿಕೃತ ಅಕೌಂಟ್ ನಲ್ಲಿ ಈ ಪೋಸ್ಟ್ ಗಳ ಸ್ಪಷ್ಟನೆ ನೀಡಿರುವ ಮೇಘನಾ, ಪಿಂಕ್ ಡ್ರೆಸ್ ನಲ್ಲಿ ಇರುವ ಮುದ್ದಾಗ ಮಗುವಿನ ಪೋಟೋ ಶೇರ್ ಮಾಡಿಕೊಂಡು ಈ‌ಮಗು ಮುದ್ದಾಗಿದೆ.

ಆದರೆ ನಿಮಗೆ ನಿರಾಸೆ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ. ಇದು ಜ್ಯೂನಿಯರ್ ಚಿರು ಅಲ್ಲ ಎಂದಿದ್ದಾರೆ. ಮೇಘನಾ ಈ ಮಾತು ಕೇಳಿ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿದ್ದರೂ, ಜ್ಯೂನಿಯರ್ ಚಿರು ಹೆಸರಿನಲ್ಲಿ ಬೇರೆ‌ ಪೋಟೋ ಪ್ರಕಟಿಸುತ್ತಿರುವವರ ವಿರುದ್ಧ ಆಕ್ರೋಶವೂ ವ್ಯಕ್ತ ವಾಗ್ತಿದೆ.

ಇನ್ನು ಅದ್ದೂರಿ ನಾಮಕರಣ ಶಾಸ್ತ್ರ‌ ಮಾಡಿ ಜ್ಯೂನಿಯರ್ ಚಿರು ಪೋಟೋಗಳನ್ನು ಹಂಚಿಕೊಳ್ಳೋದಿಕ್ಕೆ ಸರ್ಜಾ ಹಾಗೂ ಮೇಘನಾ ಕುಟುಂಬ ಸಜ್ಜಾಗಿತ್ತು.


ಅದೇ ವೇಳೆಗೆ ಮೇಘನಾ,ಜ್ಯೂನಿಯರ್ ಚಿರು ಸೇರಿದಂತೆ ಇಡಿ ಕುಟುಂಬವೇ ಕೊರೋನಾಗೆ ತುತ್ತಾಗಿದ್ದು ಸಧ್ಯ ಚಿಕಿತ್ಸೆ ಪಡೆಯುತ್ತಿದೆ. ಹೀಗಾಗಿ ಸಧ್ಯ ನಾಮಕರಣವನ್ನು‌ ಮುಂದೂಡಲಾಗಿದ್ದು, ಸಧ್ಯದಲ್ಲೇ ಡೇಟ್ ಹಂಚಿಕೊಳ್ಳುವುದಾಗಿ ಸರ್ಜಾ ಕುಟುಂಬ ಹೇಳಿದೆ. ಇನ್ನು ಮಗುವಿನ ಪೋಟೋ ವಿಚಾರದಲ್ಲಿ ಅನಗತ್ಯವಾಗಿ ಸೃಷ್ಟಿ ಯಾಗಿದ್ದ ರೂಮರ್ ಗಳಿಗೆ ಮೇಘನಾ ದಿಟ್ಟತನದಿಂದ ಉತ್ತರಿಸಿ ಗಮನಸೆಳೆದಿದ್ದಾರೆ

Comments are closed.