ಸರಿಗಮಪ ಖ್ಯಾತಿಯ ಪೊಲೀಸ್ ಸುಬ್ರಹ್ಮಣಿ ಪತ್ನಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು : ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಸರಿಗಮಪ ಖ್ಯಾತಿಯ ಪೊಲೀಸ್ ಸುಬ್ರಮಣಿ ಪತ್ನಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸುಬ್ರಹ್ಮಣಿ ಪತ್ನಿ ಸಾವಿಗೆ ಕೊರೊನಾ ಕಾರಣವಲ್ಲ ಅನ್ನೋ ಶಂಕೆ ವ್ಯಕ್ತವಾಗಿದೆ.

ಸರಿಗಮಪ ಖ್ಯಾತಿಯ ಪೊಲೀಸ್ ಸಿಂಗರ್ ಸುಬ್ರಮಣಿ ಅವರ ಪತ್ನಿ ಜ್ಯೋತಿ (33 ವರ್ಷ)‌ ಕೊರೊನಾ ಸೋಂಕಿನಿಂದಾಗಿ ಚಿಕಿತ್ಸೆ‌ ಸಿಗದೆ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಆದ್ರೀಗ ಪ್ರಕರಣ ಹೊಸ ತಿರುವು ಪಡಧುಕೊಂಡಿದೆ. ಕೋಲಾರದ ಧರ್ಮರಾಯನಗರದ ನಿವಾಸದಲ್ಲಿ ಜ್ಯೋತಿ ಮೇ 7 ರಂದು ಆತ್ಮಹತ್ಯೆ ಯತ್ನಿಸಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ  ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಹೊಸ‌ಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಜ್ಯೋತಿ ಅವರು ಉಸಿರಾಟ ದ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಅಲ್ಲದೇ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರು ಕೊರೊನಾ‌ ಸೋಂಕಿನಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಆದ್ರೀಗ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಇನ್ನು  ಕೆ.ಆರ್.ಪುರಂ ಠಾಣೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಸುಬ್ರಮಣಿ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದರು. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಸುಬ್ರಮಣಿ ಕರ್ತವ್ಯಕ್ಕರ ಹಾಜರಾಗಿರಲಿಲ್ಲ. ಅಲ್ಲದೇ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಕೋಲಾರ ಟೌನ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆ ಯಿಂದ ಸತ್ಯಾಂಶ ಹೊರ‌ ಬರಬೇಕಾಗಿದೆ.

Comments are closed.