ಗುದ್ದಾಡಿ ಆಸ್ಪತ್ರೆಯಲ್ಲಿ ಬೆಡ್ ಪಡೆಯುವ ವೇಳೆಗೆ ನಾಲ್ವರ ಬಲಿಯಾಯ್ತು…! ಬೇಸರ ತೋಡಿಕೊಂಡ ನಾಗತಿಹಳ್ಳಿ ಚಂದ್ರಶೇಖರ್….!!

ಕೊರೋನಾ ಎರಡನೇ ಅಲೆ ಯಾರನ್ನೂ ಬಿಟ್ಟಿಲ್ಲ. ಸ್ಯಾಂಡಲ್ ವುಡ್ ನ ಹಲವು ಗಣ್ಯರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ತಮ್ಮ ಆಪ್ತರನ್ನು ಕಳೆದುಕೊಂಡ ದುಃಖದಲ್ಲಿ ಕೊರೋನಾ ಭೀಕರತೆಯನ್ನು ಬಿಚ್ಚಿಟ್ಟ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಾವೊಂದು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದ್ದೇವೆ ಎಂದಿದ್ದಾರೆ.

ನಮ್ಮ ತಲೆಮಾರು ಇಂಥ ಕರಾಳದಿನಗಳಿಗೆ ಸಾಕ್ಷಿಯಾಗುತ್ತದೆ ಎಂದು ನಾನು ಎಣಿಸಿರಲಿಲ್ಲ. ಶತಾಯಗತಾಯ ಹೋರಾಟ ಮಾಡಿ ಆಸ್ಪತ್ರೆಯಲ್ಲಿ ಹಾಸಿಗೆ ಪಡೆದುಕೊಂಡಾಯಿತು. ಆದರೆ ಅಲ್ಲಿಗೆ ಹೋಗಿ ದಾಖಲಾಗುವ ವೇಳೆಗೆ ನಾಲ್ವರು ಪ್ರಾಣ ಕಳೆದುಕೊಂಡರು. ಇನ್ನು ಕ್ಷೇಮವೆಂದು ನಂಬಿದ್ದ ನನ್ನ ಹಳ್ಳಿಯಲ್ಲೂ ಹೆಣಗಳು ಬೀಳುತ್ತಿವೆ. ನಾವೆಲ್ಲರೂ ಅಸಹಾಯಕರಂತೆ ಕಾಣುತ್ತಿದ್ದೇವೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಟ್ವಿಟ್ ಮಾಡಿದ್ದಾರೆ.

https://kannada.newsnext.live/udupi-court-judgement-5-year-girl-case/amp/

ತಮ್ಮ ಆಪ್ತರ ಸಾವಿನ ಬಗ್ಗೆ ಭಾವುಕರಾಗಿ ನಾಗತಿಹಳ್ಳಿಚಂದ್ರಶೇಖರ್ ಮಾಡಿದ ಟ್ವಿಟ್ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಸ್ಯಾಂಡಲ್ ವುಡ್ ನ ಸಾಲು ಸಾಲು ಸಾವಿನ ಸರಣಿ ಎಲ್ಲರನ್ನು ಆತಂಕಕ್ಕೆ ದೂಡಿದೆ.

ಎಲ್ಲೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಬೆಡ್, ಆಕ್ಸಿಜನ್,ಮೆಡಿಸಿನ್ ಕೊರತೆ ಸೇರಿದಂತೆ ಹಲವು ಸಮಸ್ಯೆಯಿಂದ ನರಳುತ್ತಿದ್ದಾರೆ. ಕೆಲವೆಡೆ ಪ್ರಭಾವಿಗಳು ಸೇರಿದಂತೆ ಎಲ್ಲರೂ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ.

ಇನ್ನು ಹಲವರಿಗೆ ವಿಳಂಬವಾಗಿ ಆಸ್ಪತ್ರೆಯಲ್ಲಿ ಬೆಡ್ ದೊರೆಯುತ್ತಿರೋದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುತ್ತಿದ್ದಾರೆ. ಒಟ್ಟಿನಲ್ಲಿ ಕೊರೋನಾ ಭೀಕರತೆ ಹೆಚ್ಚುತ್ತಲೇ ಇದ್ದು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.