ಸೋಮವಾರ, ಏಪ್ರಿಲ್ 28, 2025
HomeBreakingಫೆ.೩ ರಂದು ರಾಬರ್ಟ್ ತೆಲುಗು ಟೀಸರ್ ....! ಕುತೂಹಲದಿಂದ ಕಾಯ್ತಿದ್ದಾರೆ ಡಿ ಬಾಸ್ ಫ್ಯಾನ್ಸ್...!!

ಫೆ.೩ ರಂದು ರಾಬರ್ಟ್ ತೆಲುಗು ಟೀಸರ್ ….! ಕುತೂಹಲದಿಂದ ಕಾಯ್ತಿದ್ದಾರೆ ಡಿ ಬಾಸ್ ಫ್ಯಾನ್ಸ್…!!

- Advertisement -

ಕೊರೋನಾ ಮುಗಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿದ್ದು ಸಖತ್ ಹವಾ ಸೃಷ್ಟಿಸಿದೆ. ಈ ಪೈಕಿ ದಚ್ಚು ರಗಡ್ ಲುಕ್ ರಾಬರ್ಟ್ ಸಖತ್ ಹೈಪ್ ಸೃಷ್ಟಿಸಿದ್ದು ಫೆ‌.೩ ರಂದು ತೆಲುಗು ಟೀಸರ್ ರಿಲೀಸ್ ಆಗಲಿದೆ‌.

ದಚ್ಚು ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿರೋ ರಾಬರ್ಟ್ ಸಿನಿಮಾ ಶಿವರಾತ್ರಿಯಂದು ತೆರೆಗೆ ಬರಲಿದೆ. ಮಾರ್ಚ್ ೧೧ ರಂದು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿರೋ ಚಿತ್ರದ ಟೀಸರ್ ನಾಳೆ ತೆರೆಗೆ ಬರಲಿದೆ.

ಕೆಲದಿನಗಳ ಹಿಂದೆಯಷ್ಟೇ ತೆಲುಗು ಸಿನಿಮಾ ರಿಲೀಸ್ ಕಾರಣ ಮುಂದಿಟ್ಟುಕೊಂಡು ರಾಬರ್ಟ್ ತೆಲುಗು ವರ್ಸನ್ ರಿಲೀಸ್ ಗೆ ತೆಲುಗು ಇಂಡಸ್ಟ್ರಿ ವಿರೋಧ ವ್ಯಕ್ತಪಡಿಸಿತ್ತು.

ಆದರೆ ಚಿತ್ರನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಫಿಲ್ಂ ಚೆಂಬರ್ ಮೆಟ್ಟಿಲೇರಿದ್ದರು. ಬಳಿಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆಯಲ್ಲಿ ರಾಬರ್ಟ್ ರಿಲೀಸ್ ವಿವಾದ ಸುಖಾಂತ್ಯ ಕಂಡಿತ್ತು.


ಹೀಗಾಗಿ ಇದೇ ಖುಷಿಯಲ್ಲಿ ರಾಬರ್ಟ್ ಚಿತ್ರತಂಡ ನಾಳೆ ತೆಲುಗು ಚಿತ್ರದ ಟೀಸರ್ ರಿಲೀಸ್ ಗೆ ಸಿದ್ಧವಾಗಿದೆ. ಸಖತ್ ರೆಸ್ಪಾನ್ಸ್ ಸಿಗೋ ಭರವಸೆ ಇದೆ‌.

ರಾಬರ್ಟ್ ಕನ್ನಡ ಟೀಸರ್ ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದ ವೇಳೆ ರಿಲೀಸ್ ಆಗಿತ್ತು. ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈಗ ತೆಲುಗು ಟೀಸರ್ ಬರಲಿದ್ದು ಅಭಿಮಾನಿಗಳಿಗೆ ಸಖತ್ ಇಷ್ಟವಾಗುವ ನೀರಿಕ್ಷೆ ಇದೆ. ತರುಣ್ ಸುಧೀರ್ ನಿರ್ದೇಶನ ಈ ಚಿತ್ರಕ್ಕೆ ಉಮಾಪತಿ ಬಂಡವಾಳ ಹೂಡಿದ್ದು,ನಾಯಕಿಯಾಗಿ ಕನ್ನಡತಿ ಆಶಾ ಭಟ್ ನಟಿಸಿದ್ದಾರೆ

RELATED ARTICLES

Most Popular