ಶಿವಣ್ಣನ ಸಿನಿಮಾದಲ್ಲಿ ಕಣ್ಣೇ ಅದಿರಿಂದಿ ಗಾಯಕಿ…! ಕನ್ನಡ ಸಿನಿಮಾಕ್ಕೆ ಕಾಲಿಟ್ಟ ಮಂಗ್ಲಿ…!!

ರಾಬರ್ಟ್ ಸಿನಿಮಾದ ಜೊತೆ ಜೊತೆಗೆ ಹಿಟ್ ಆಗಿದ್ದು ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಹಾಡು ಕಣ್ಣೇ ಅದಿರಿಂದಿ. ಇದೊಂದೆ ಹಾಡು ಗಾಯಕಿಯನ್ನು ಕರುನಾಡಿಗೆ ಪರಿಚಯಿಸಿತು. ಇದೀಗ ಗಾಯಕಿ ಸ್ಥಾನದಿಂದ ಮಂಗ್ಲಿ ಗೆ ನಟಿ ಪಟ್ಟಕ್ಕೆ ಪ್ರಮೋಶನ್ ಸಿಕ್ಕಿದೆ.

ಈಗಾಗಲೇ‌ ಕನ್ನಡದ ಕರಿಯಾ ಆಯ್ ಲವ್ ಯೂ ಸಿನಿಮಾದ ಹಾಡಿನ ಮೂಲಕ ಕನ್ನಡ ಗಾಯನಕ್ಕೆ ಕಾಲಿಟ್ಟ ಮಂಗ್ಲಿ ಈಗ‌ ಕನ್ನಡಕ್ಕಾಗಿ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ.

ಕನ್ನಡದ ಹಲವು ಸಿನಿಮಾದಲ್ಲಿ ನಟಿಸುವ ಆಫರ್ ಬಂದಿತ್ತಂತೆ.ಆದರೆ ಯಾವ ಅಫರ್ ಗೂ ಒಪ್ಪಿಕೊಳ್ಳದ ಮಂಗ್ಲಿ ಕೊನೆಗೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜೊತೆ ನಟನೆಗೆ ಜೈ ಎಂದಿದ್ದಾರೆ.

ಶಿವರಾಜ್ ಕುಮಾರ್ ನಟನೆಯ ೧೨೪ ಸಿನಿಮಾಗೇ ತೆಲುಗಿನ ರಾಮ್ ಧುಲಿಪುಡಿ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಬಾಲ ಶ್ರೀರಾಮ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು ಇದಕ್ಕೆ ಶ್ರೀಕಾಂತ್ ಧುಲಿಪುಡಿ,ಸ್ವಾತಿ ವನಪಲ್ಲಿ ಹಾಗೂ ನಾರಾಲ್ ಶ್ರೀನಿವಾಸ್ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ.

ಇದೇ ಸಿನಿಮಾದಲ್ಲಿ ಮಂಗ್ಲಿ ನಟಿಸಲಿದ್ದಾರಂತೆ. ಗಾಯಕಿ ಹಾಗೂ ಸಾಂಪ್ರದಾಯ ನೃತ್ಯದಲ್ಲೂ ಹೆಸರುಗಳಿಸಿರುವ ಮಂಗ್ಲಿ ಸಿನಿಮಾದ ಯಾವ ಪಾತ್ರದಲ್ಲಿ ನಟಿಸುತ್ತಿರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಎದುರಾಗಿದೆ.

ಆದರೇ ಇನ್ನೂ ಹೆಸರಿಡದ ಈ ಚಿತ್ರತಂಡ ಕತೆ ಅಥವಾ ಸಿನಿಮಾದ ಟೈಟಲ್ ಏನೆಂಬುದನ್ನು ಇನ್ನು ಹೇಳಿಲ್ಲ. ಹೀಗಾಗಿ ಸಿನಿಮಾದಲ್ಲಿ ಮಂಗ್ಲಿ ಪಾತ್ರ ಕುತೂಹಲ ಮೂಡಿಸಿದೆ.

ಸಿನಿಮಾದಲ್ಲಿ ಸಾಧುಕೋಕಿಲ್,ಸಂಪತ್ ಸೇರಿದಂತೆ ಹಲವು ಕಲಾವಿದರಿದ್ದು,ಜೂನ್ ಮೊದಲ ವಾರದಲ್ಲಿ ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ.

Comments are closed.