ಚಾಕ್ಲೇಟ್ ನಲ್ಲಿ ಮೂಡಿಬಂದ ಗಾನಬ್ರಹ್ಮ…! ಎಸ್ ಪಿ ಬಿ ಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ ಅಭಿಮಾನಿ…!!

ಪುದುಚೇರಿ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಂದ್ರೇ ಸಂಗೀತ. ಸಂಗೀತ ಅಂದ್ರೇ ಎಸ್.ಪಿ.ಬಿ. ಇಂತಹ ಗಾನಗಾರುಡಿಗನಿಗೆ ಇಲ್ಲೊಂದು ವಿಭಿನ್ನ ಗೌರವ ಸ್ಮರಣೆ ಸಂದಿದ್ದು ಚಾಕ್ಲೇಟ್ ನಲ್ಲೇ ಎಸ್ ಪಿಬಿ ಮೂರ್ತಿ ನಿರ್ಮಿಸಲಾಗಿದೆ.

ಪುದುಚೇರಿಯ ಮಿಷನ್ ಸ್ಟ್ರೀಟ್ ನಲ್ಲಿ ಗಾನಬ್ರಹ್ಮ ಎಸ್ ಪಿಬಿ ಚಾಕ್ಲೇಟ್ ನಲ್ಲಿ‌ ಮೈ ತಳೆದಿದ್ದು ಕೈಯಲ್ಲೊಂದು ಮೈಕ್ ಹಿಡಿದು ಗಾಯನಕ್ಕೆ ಸಿದ್ಧವಾಗಿದ್ದಾರೆ.

ಹೊಷವರ್ಷ ಹಾಗೂ ಕಿಸ್ಮಸ್ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯೋಕೆ ಇಂತಹದೊಂದು ವಿಭಿನ್ನ ಪ್ರಯತ್ನ ಮಾಡಿದೆ ಮಿಷನ್ ರಸ್ತೆಯ ರಾಜೇಂದ್ರನ್ ಎಂಬುವವರ ಸ್ವೀಟ್ಸ್ ಮತ್ತು ಬೇಕರಿ ಶಾಪ್.

ಬರೋಬ್ಬರಿ 5.8ಅಡಿ ಎತ್ತರದ ಎಸ್ ಪಿಬಿ ಮೂರ್ತಿಯನ್ನು ಸಿದ್ಧಪಡಿಸಲಾಗಿದ್ದು ಇದಕ್ಕಾಗಿ 339 ಕೆಜಿ ಚಾಕ್ಲೇಟ್ ಬಳಸಲಾಗಿದೆಯಂತೆ. ಜನವರಿ 3 ರವರೆಗೆ ಈ ಚಾಕ್ಲೇಟ್ ಎಸ್.ಪಿ.ಬಿ ಮೂರ್ತಿ ಪ್ರದರ್ಶನ ಇರಲಿದೆ ಎಂದು ಮೂರ್ತಿ ತಯಾರಿಸಿದ ರಾಜೇಂದ್ರನ್ ವಿವರಣೆ ನೀಡಿದ್ದಾರೆ.

ಈಗಾಗಲೇ ಎಸ್. ಪಿ.ಬಿ ಫ್ಯಾನ್ಸ್ ಅಂಗಡಿಗೆ ಭೇಟಿ‌ನೀಡ್ತಿದ್ದು ಮೂರ್ತಿ ಜೊತೆ ಪೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರಂತೆ.

ಸೋಷಿಯಲ್ ಮೀಡಿಯಾದಲ್ಲಿ ಸಹ ಚಾಕ್ಲೆಟ್ ಎಸ್.ಪಿ.ಬಾಲಸುಬ್ರಹ್ಮಣ್ಯಂ ಪೋಟೋ ವೈರಲ್ ಆಗಿದೆ. ಇದೇ ಅಂಗಡಿಯು ಈ ಹಿಂದೆ ಎ.ಪಿ.ಜೆ.ಅಬ್ದುಲ್‌ಕಲಾಂ,ಸೂಪರ್ ಸ್ಟಾರ್ ರಜನಿಕಾಂತ್ ಸೇರಿ ಹಲವರ ಮೂರ್ತಿ ನಿರ್ಮಿಸಿ ಹೆಸರು ಪಡೆದಿತ್ತು.

Comments are closed.