ಜೊತೆ ಜೊತೆಯಲಿ ಸೀರಿಯಲ್ ಜೊತೆ ಮುಗಿಯುತ್ತಾ ಮೇಘಾ ಶೆಟ್ಟಿ ಬಣ್ಣದ ಬದುಕು…?!

ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಸದ್ದು ಮಾಡ್ತಿರೋದು ನಟ ಅನಿರುದ್ಧ ನಟಿಸ್ತಿರೋ ಜೊತೆ ಜೊತೆಯಲಿ ಧಾರಾವಾಹಿ. ಈ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಬಂದ ಬೆಡಗಿ ಮೇಘಾ ಶೆಟ್ಟಿ ಜರ್ನಿ ಇಲ್ಲಿಗೆ ಮುಗಿಯುತ್ತಾ…?!

ಬಣ್ಣದ ಬದುಕಿಗೆ ಕಾಲಿಟ್ಟ ಸೀರಿಯಲ್ ನಲ್ಲೇ ಬ್ರೇಕ್ ಪಡೆದ ಹುಡುಗಿ ಮೇಘಾ ಶೆಟ್ಟಿ. ಎಂಬಿಎ ಓದ್ತಿದ್ದ ಹುಡುಗಿಯನ್ನು ಬಣ್ಣದ ಲೋಕಕ್ಕೆ ಕರೆತಂದವರು ನಟ ಅನಿರುದ್ಧ. ಆದರೇ ಇದೇ ಸೀರಿಯಲ್ ನಲ್ಲೇ ಅನು ಸಿರಿಮನೆ ಬಣ್ಣದ ನಂಟು ಮುಗಿಯುವ ಸಾಧ್ಯತೆ ಇದೆ.

ಜೊತೆ ಜೊತೆಯಲಿ ಸೀರಿಯಲ್ ಜನಮನ ಗೆಲ್ಲುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ಫುಲ್ ಬ್ಯುಸಿಯಾದ್ರು. ಸಧ್ಯ ಕೈತುಂಬ ಕೆಲಸ ಹೊತ್ತು ಸ್ಯಾಂಡಲ್ ವುಡ್ ನಲ್ಲೂ ಮಿಂಚೋಕೆ ಮುಂದಾಗ್ತಿರೋ ಮೇಘಾ ಶೆಟ್ಟಿ ರ್ಯಾಪ್ ಸಾಂಗ್ ಗೂ ಹೆಜ್ಜೆ ಹಾಕ್ತಿದ್ದಾರೆ.

ರ್ಯಾಪರ್ ಚಂದನ ಶೆಟ್ಟಿ ಸಾಹಿತ್ಯ ರಚಿಸಿ ನಿರ್ದೇಶಿಸುತ್ತಿರುವ ಅದ್ದೂರಿ ರ್ಯಾಪ್ ಸಾಂಗ್‌ ಒಂದಕ್ಕೆ ಹೆಜ್ಜೆ ಹಾಕ್ತಿರೋ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಬೆಳ್ಳಿತೆರೆ ಪಯಣವನ್ನು ಆರಂಭಿಸಿದ್ದಾರೆ.

ಹೀಗಾಗಿ ಇನ್ಮುಂದೆ ಮೇಘಾ ಶೆಟ್ಟಿ ಸಿನಿ ಹಾಗೂ ಕಿರುತೆರೆ ಲೋಕದಲ್ಲಿ ತಮ್ಮ ಯಶಸ್ವಿ ಜರ್ನಿ ಮುಂದುವರೆಸ್ತಾರೆ ಅಂತ ನೀವಂದುಕೊಂಡಿದ್ರೇ ಅದು ಸುಳ್ಳು.

ಅಕಸ್ಮಾತ ಬಣ್ಣದ ಲೋಕಕ್ಕೆ ಬಂದ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿಯ ಬದುಕಿನ ಕನಸು ಬೇರೆಯೇ ಇದೆ. ಮೇಘಾ ಶೆಟ್ಟಿ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತು ಕಳೆದ 10 ವರ್ಷದಿಂದ ಅಧ್ಯಯನ ಮಾಡ್ತಿದ್ದಾರಂತೆ.

ಈಗಲೂ ಎಲ್ಲ ಶೂಟಿಂಗ್ ನಡುವೆ ಸ್ವಲ್ಪ ಸಮಯ ಸಿಕ್ಕದರೂ ಮೇಘಾ ಓದಿನತ್ತ ಮುಖಮಾಡ್ತಾರಂತೆ. ಅವರ ಕುಟುಂಬದ ಮೂಲಗಳು ಹೇಳೋ ಪ್ರಕಾರ ಜೊತೆ ಜೊತೆಯಲಿ ಸೀರಿಯಲ್ ಬಳಿಕ ಮೇಘಾ, ನಟನೆ ಮುಂದುವರೆಸೋದು ಅನುಮಾನ.

ಸಿನಿಮಾದಲ್ಲಿ ಅವಕಾಶ ಸಿಕ್ಕರೇ ನಟಿಸಬಹುದಷ್ಟೇ, ಅದನ್ನು ಬಿಟ್ಟರೇ ಅವರ ಕನಸು ಹಾಗೂ ಗಮನ ಇರೋದು ಐಎಎಸ್ ಮೇಲಂತೆ.ಹೀಗಾಗಿ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯದ ಜೊತೆಗೆ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಓದಿನ ಕಡೆಗೆ ಸರಿದರು ಅಚ್ಚರಿ ಏನಿಲ್ಲ.

Comments are closed.