‘ಅಯ್ಯಪ್ಪನುಮ್ ಕೋಶಿಯಮ್’ ನಿರ್ದೇಶಕರ ಬೆನ್ನಲ್ಲೇ ಶೂಟಿಂಗ್ ವೇಳೆ ದುರಂತ ಸಾವು ಕಂಡ ನಟ ಅನಿಲ್

ಕೇರಳ : ಮಲಯಾಲಂನ ಸೂಪರ್ ಹಿಟ್ ಸಿನಿಮಾ ‘ಅಯ್ಯಪ್ಪನುಮ್ ಕೋಶಿಯಮ್’, ‘ಕಮ್ಮಟಿಪಾಡಂ’, ‘ಪಾವಡ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಪ್ರಖ್ಯಾತಿಗಳಿಸಿದ ಮಲಯಾಳಂ ನಟ ಅನಿಲ್ ನೆಡುಮಂಗದ್ ಅವರು ದುರಂತ ಸಾವು ಕಂಡಿದ್ದಾರೆ.

ಕೇರಳದ ತೊಡಪುಳಾ ಬಳಿಯ ಪೀಸ್’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆಯಲ್ಲಿ ಅನಿಲ್ ಹಾಗೂ ಸ್ನೇಹಿತರು ಮಲಂಕರ ಡ್ಯಾಮ್‌ನಲ್ಲಿ ಈಜುವುದಕ್ಕೆ ತೆರಳಿದ್ದಾರೆ. ಆದರೆ ನೀರಿನ ಆಳಕ್ಕೆ ಸಿಲುಕಿದ್ದ ಅನಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ ಸ್ನೇಹಿತರು ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಕ್ಷಣಾ ದಳದ ಸಿಬ್ಬಂದಿಗಳ ಹುಡುಕಾಟದ ನಂತರದ ಅನಿಲ್ ಮೃತದೇಹ ಪತ್ತೆಯಾಗಿದೆ.

ಜೊಜು ಜಾರ್ಜ್ ‘ಪೀಸ್’ ಸಿನಿಮಾದಲ್ಲಿ ಅನಿಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಸಿನಿಮಾದ ಬಿಡುವಿನ ವೇಳೆಯಲ್ಲಿ ಅನಿಲ್ ಸ್ನೇಹಿತರ ಜೊತೆಗೆ ಈಜಲು ತೆರಳಿದ್ದರು. ನೀರಿನಲ್ಲಿ ಮುಳುಗಡೆಯಾಗಿದ್ದ ಅನಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇನ್ನು ಅಯ್ಯಪ್ಪನುಮ್ ಕೋಶಿಯಮ್ ಸಿನಿಮಾದ ನಿರ್ದೇಶಕ ಸಾಚಿ (ಕೂವಕಟ್ಟು ಆರ್.ಸಚ್ಚಿದಾನಂದನ್ ) ಇದೇ ವರ್ಷ ಜೂನ್ 18ರಂದು ಸಾವನ್ನಪ್ಪಿದ್ದರು. ಈ ಘಟನೆ ನಡೆದು ಆರು ತಿಂಗಳು ಕಳೆಯುವಷ್ಟರಲ್ಲೇ ನಾಯಕ ನಟ ಸಾವನ್ನಪ್ಪಿರೋದು ದುರಂತವೇ ಸರಿ. ಅನಿಲ್ ನೆಡುಮಂಗದ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

Comments are closed.