ಡಿ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ….! ಮತ್ತೊಂದು ದಾಖಲೆ ಬರೆದ ಕಣ್ಣು ಹೊಡಿಯಾಕ್ ಸಾಂಗ್…!!

ಬರೋಬ್ಬರಿ ಎರಡು ವರ್ಷಗಳ ಬಳಿಕ ತೆರೆಗೆ ಎಂಟ್ರಿಕೊಟ್ಟು ಅಬ್ಬರಿಸಿದ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದರು. ಏಕ ಕಾಲದಲ್ಲಿ ಹಲವು ಭಾಷೆಯಲ್ಲಿ ರಿಲೀಸ್ ಆದ ಈ ಸಿನಿಮಾದ ಹಾಡು ಕಣ್ಣು ಹೊಡಿಯಾಕ್ ಸಾಧನೆಯ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ತೆಲುಗಿನಲ್ಲಿ ಕಣ್ಣೇ ಅದಿರಿಂದಿ ಎಂದು ಸಂಚಲನ ಮೂಡಿಸಿದ ಹಾಡು ಕನ್ನಡದಲ್ಲಿ ಕಣ್ಣು ಹೊಡೆಯಾಕ ಎಂದು ಪಡ್ಡೆಗಳ ಮನಗೆದ್ದಿತ್ತು. ಅದ್ಭುತ ಕಂಠಸಿರಿಯ ಗಾಯಕಿ ಶ್ರೇಯಾ ಘೋಷಾಲ್ ಹಾಡಿದ ಈ ಹಾಡು ಇದೀಗ ಯೂಟ್ಯೂಬ್ ನಲ್ಲಿ ಅತ್ಯಂತ ವೇಗವಾಗಿ 50 ಮಿಲಿಯನ್ ವೀವ್ಸ್ ಪಡೆದ ಕನ್ನಡ ಹಾಡು ಎಂಬ ಖ್ಯಾತಿಗೆ ಭಾಜನವಾಗಿದೆ.

ಎಂದಿನಂತೆ ತಮ್ಮ ಅದ್ಭುತ ಸಾಹಿತ್ಯದ ಮೂಲಕ ಮಿಂಚಿರೋ ಯೋಗ ರಾಜ್ ಭಟ್ ಈ ಹಾಡು ರಚಿಸಿಕೊಟ್ಟಿದ್ದು, ನಿನ್ನ ನೋಡಿ ಸುಮ್ಮನೆಂಗರಲಿ ಎಂಬ ಹಾಡಿಗೆ ದರ್ಶನ್ ಹಾಗೂ ನಾಯಕಿ ಆಶಾ ಭಟ್ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ್ದರು.

https://kannada.newsnext.live/udupi-corona-village-lockdown-dc-jagadeesh/

ತರುಣ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದ ರಾಬರ್ಟ್ ಸಿನಿಮಾ ರಿಲೀಸ್ ಗೂ ಮುನ್ನವೇ ಸಖತ್ ನೀರಿಕ್ಷೆ ಹುಟ್ಟಿಸಿತ್ತು. ಅಂತೆಯೇ ಥಿಯೇಟರ್ ನಲ್ಲೂ ಪ್ರೇಕ್ಷಕರ ಮನಗೆದ್ದ ಸಿನಿಮಾ ಈಗಾಗಲೇ ಹಲವು ದಾಖಲೆ ಬರೆದಿದೆ.

https://kannada.newsnext.live/singer-rajesh-krishanan-birthday-kannada-tamil-telugu-singer/

ಅದರಲ್ಲೂ ಕಣ್ಣು ಹೊಡಿಯಾಕ ಸಾಂಗ್ ಅಂತೂ ಯುವಜನತೆಯ ಮೆಚ್ಚಿನ ಸಾಂಗ್ ಆಗಿದ್ದು,ಈಗ 50 ಮಿಲಿಯನ್ ವೀವ್ಸ್ ಪಡೆಯೋ ಮೂಲಕ ಹೊಸದಾಖಲೆ ಬರೆದಿದೆ.

ಕಣ್ಣು ಹೊಡಿಯಾಕ್ ಮೊನ್ನೆ ಕಲತಿನಿ ಎಂದು ಆರಂಭವಾಗೋ ಈ ಜವಾರಿ ಹಾಡಿಗೆ ಮ್ಯಾಜಿಕ್ ಮ್ಯೂಸಿಕ್ ಕಂಪೋಸರ್ ಅರ್ಜುನ ಜನ್ಯ ಸಂಗೀತ ನೀಡಿದ್ದರು. ತೆಲುಗಿನಲ್ಲಿ ಇದೇ ಹಾಡಿಗೆ ಧ್ವನಿಯಾದ ಮಂಗ್ಲಿ ಕೂಡ ಸಖತ್ ಹಿಟ್ ಆಗಿದ್ದು, ಈಗ ಕನ್ನಡದಲ್ಲೂ ಹಾಡು ಹೊಸದಾಖಲೆ ಬರೆಯೋ ಮೂಲಕ ದರ್ಶನ್ ಫ್ಯಾನ್ಸ್ ಸಂಭ್ರಮಕ್ಕೆ ಕಾರಣವಾಗಿದೆ.  

Comments are closed.