ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಕೊರೊನಾ ಶಂಕೆ : ಆಸ್ಪತ್ರೆಗೆ ದಾಖಲು

0

ತುಮಕೂರು : ಕೊರೊನಾ ಭೀತಿಯ ನಡುವೆಯಲ್ಲಿಯೇ ರಾಜ್ಯದಲ್ಲಿಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅರಂಭವಾಗಿದೆ. ಆದರೆ ತುಮಕೂರಿನಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗೆ ಶಂಕಿತ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಆಂಧ್ರದ ರಾಯದುರ್ಗಕ್ಕೆ ತನ್ನ ತಾಯಿ ಜೊತೆ ವಿದ್ಯಾರ್ಥಿ ತೆರಳಿದ್ದ, ಈ ವೇಳೆ ತಾಯಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ತಾಯಿಯಿಂದ ಮಗನಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಜೂನ್ 22 ರಂದು ರಾಯದುರ್ಗದಿಂದ ಮಗನನ್ನ ಪರೀಕ್ಷೆಗಾಗಿ ಶಿರಾ ತಾಲೂಕಿಗೆ ಕರೆತಂದಿದ್ದರು. ನಿನ್ನೆ ವಿದ್ಯಾರ್ಥಿಗೆ ಜ್ವರ ಕಾಣಿಸಿಕೊಂಡಿದೆ.

ಹೀಗಾಗಿ ವಿದ್ಯಾರ್ಥಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿಯನ್ನ ಕರೆದುಕೊಂಡು ಬರಲಾಗಿದೆ. ಶಂಕಿತ ವಿದ್ಯಾರ್ಥಿಗೆ ಇಂದು ಪರೀಕ್ಷೆ ನೀಡದಿರಲು ತೀರ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷೆ ನೀಡಲು ಡಿಡಿಪಿಐ ರೇವಣ್ಣ ಸಿದ್ದಪ್ಪ ತಿಳಿಸಿದ್ದಾರೆ.

Leave A Reply

Your email address will not be published.