ಭಾರತ ವಿರುದ್ದವೂ ಸ್ಟೀವ್ ಸ್ಮಿತ್ ಮೋಸದಾಟ : ವೈರಲ್ ಆಯ್ತು ವಿಡಿಯೋ…!

ಸಿಡ್ನಿ : ಭಾರತ – ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳೆಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೋಸದಾಟ ಬಯಲಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆಯಲ್ಲಿ ಸ್ಮಿತ್ ನಡೆಸಿರುವ ಕುತಂತ್ರ ಇದೀಗ ವೈರಲ್ ಆಗಿದ್ದ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

000

2018ರಲ್ಲಿ ಬಾಲ್ ಟ್ಯಾಂಪರಿಂಗ್ ಹಗರಣದ ಸುಳಿಗೆ ಸಿಲುಕು ಬರೋಬ್ಬರಿ 1 ವರ್ಷಗಳ ಕಾಲ ನಿಷೇಧವನ್ನು ಎದುರಿಸಿದ್ದ ಸ್ಟೀವ್ ಸ್ಮಿತ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆಯಲ್ಲಿ ಬರೋಬ್ಬರಿ 407 ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ ಪರ ಕೀಟರ್ ರಿಷಬ್ ಪಂತ್ ಬ್ಯಾಟಿಂಗ್ ನಡೆಸುತ್ತಿದ್ದರು. 64 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಪಂತ್ ಭಾರತದಕ್ಕೆ ಆಸರೆಯಾಗಿದ್ದರು. ಡ್ರಿಂಕ್ಸ್ ಬ್ರೇಕ್ ವೇಳೆಯಲ್ಲಿ ಕ್ರೀಸ್ ಗೆ ಬಂದ ಸ್ಟೀವ್ ಸ್ಮಿತ್ ಕಳ್ಳಾಟವಾಡಿದ್ದಾರೆ.

000

ಶತಾಯಗತಾಯ ರಿಷಬ್ ಪಂತ್ ಅವರನ್ನು ಔಟ್ ಮಾಡಲೇ ಬೇಕೆಂಬ ಹಟಕ್ಕೆ ಬಿದ್ದ ಸ್ಟೀವ್ ಸ್ಮಿತ್ ರಿಷಬ್ ಪಂತ್ ಮಾಡಿದ್ದ ಗಾರ್ಡ್ ಮಾಸ್ಕ್ ನ್ನು ತನ್ನ ಕಾಲಿನಿಂದ ಅಳಿಸಿ ಹಾಕಿದ್ದಾರೆ. ನಂತರ ಕ್ರಸ್ ಗೆ ಬಂದ ಪಂತ್ ಮತ್ತೊಮ್ಮೆ ಗಾರ್ಡ್ ಪಡೆದುಕೊಂಡಿದ್ದಾರೆ. ಸ್ಮಿತ್ ನಡೆಸಿದ ಕಳ್ಳಾಟ ಇದೀಗ ವಿಕೆಟ್ ಗೆ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

000

Comments are closed.