ವಿಶ್ವದ ಅತಿ ಉದ್ದದ ವಾಯುಮಾರ್ಗದ ಮೇಲೆ ಮಾನಿನಿಯರ ಸಾಹಸ…! ಹೊಸ ದಾಖಲೆ ಬರೆದ ಏರ್ ಇಂಡಿಯಾ..!!

ಮಹಿಳೆಯರು ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದ್ದು, ವಿಶ್ವದ ಅತಿ ಉದ್ದದ ವಾಯು ಮಾರ್ಗದಲ್ಲಿ ಹಾರಾಟ ನಡೆಸುವ ಮೂಲಕ‌ ಮಹಿಳಾ ಪೈಲಟ್ ಗಳ ತಂಡ ಎಲ್ಲರೂ ಅಚ್ಚರಿ ಪಡುವ ಸಾಧನೆ ಮಾಡಿದೆ.

ಏರ್ ಇಂಡಿಯಾ ಸಂಸ್ಥೆಯ ಮಹಿಳಾ ಪೈಲಟ್ ಗಳ ತಂಡ ವಿಶ್ವದ ಅತಿ ಉದ್ದದ ವಾಯು ಮಾರ್ಗ ಎಂದು ಕರೆಸಿಕೊಳ್ಳೋ,ಸ್ಯಾನ್ ಫ್ರಾನ್ಸಿಸ್ಕೋದಿಂದ ಉತ್ತರ ಧ್ರುವದ ಮೇಲೆ ಹಾರಾಟ ನಡೆಸಿ ಬೆಂಗಳೂರು ತಲುಪಿದ್ದಾರೆ‌.

16 ಸಾವಿರ ಕಿಲೋಮೀಟರ್ ನ್ನು ಈ ತಂಡ 17 ಗಂಟೆಯಲ್ಲಿ ತಲುಪಿದ್ದು, ಆ ಮೂಲಕ ಹೆಣ್ಮಕ್ಕಳು ಸ್ಟ್ರಾಂಗ್ ಗುರು ಅನ್ನೋದನ್ನು ಸಾಬೀತುಪಡಿಸಿದ್ದಾರೆ.

ಉತ್ತರ ಧ್ರುವದ ಮೇಲೆ ಹಾರಾಟ ನಡೆಸಲು ಅತ್ಯಂತ ಅನುಭವ ಬೇಕು. ಹೀಗಾಗಿ ವಿಮಾನಯಾನ ಸಂಸ್ಥೆಗಳು ಈ ಮಾರ್ಗಕ್ಕೆ ಹೆಚ್ಚಿನ ಅನುಭವ ಉಳ್ಳವರನ್ನು ನೇಮಿಸೋದು ವಾಡಿಕೆ.

ಆದರೆ ಏರ್ ಇಂಡಿಯಾ 2013 ರಲ್ಲಿ ಬೋಯಿಂಗ್ 777 ವಿಮಾನ ನಡೆಸಿ ವಿಶ್ವದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜೋಯಾ ಅಗರವಾಲ್ ಗೆ ಈ ತಂಡದ ಜವಾಬ್ದಾರಿ ನೀಡಿತ್ತು.ಯಶಸ್ವಿಯಾಗಿ ಹಾರಾಟ ಪೊರೈಸಿದ ತಂಡ, ಸೋಮವಾರ ಬೆಳಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

ತಮ್ಮ ಈ ವಿಶೇಷ ಹಾರಾಟದ ಅನುಭವವನ್ನು ಹಂಚಿಕೊಂಡಿರುವ ಜೋಯಾ ಅಗರವಾಲ್, ನಾವು ಉತ್ತರ ಧ್ರುವದ ಮೇಲೆ‌ ಹಾರಿರೋದು ಮಾತ್ರವಲ್ಲ. ಸಂಪೂರ್ಣ ಮಹಿಳಾ ತಂಡವೇ ಈ ಸಾಧನೆ ಮಾಡಿದೆ ಅನ್ನೋದು ಗಮನಾರ್ಹ ಸಂಗತಿ.

ಈ ಸಾಧನೆಯ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ಕೇವಲ ಪ್ರಯಾಣ ಮಾತ್ರವಲ್ಲ 10 ಟನ್ ಇಂಧನ ಕೂಡ ಉಳಿಸಿದ್ದೇವೆ ಎಂದಿದ್ದಾರೆ.ಈ ಮಹಿಳಾ ತಂಡದ ಸಾಧನೆಯನ್ನು ಏರ್ ಇಂಡಿಯಾ ಶ್ಲಾಘಿಸಿದೆ.

ದ್ದು, ಜೊತೆಗೆ ಕೇಂದ್ರ ವಿಮಾನ ಯಾನ ಸಚಿವ ಹರದೀಪ್ ಸಿಂಗ್ ಪುರಿ, ಇದು ನಾರಿಶಕ್ತಿಯ ಸಾಧನೆ ಎಂದು ಕೊಂಡಾಡಿದ್ದಾರೆ.

Comments are closed.