ಅಪ್ಪನ ಕ್ಷೇತ್ರಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ರಾ ಶ್ರುತಿ ಹಾಸನ್…?! ಬಹುಭಾಷಾ ನಟಿ ವಿರುದ್ಧ ಬಿಜೆಪಿ ದೂರು…!!

ತಮಿಳುನಾಡಿನಲ್ಲಿ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ, ಮಕ್ಕಳ್ ನಿಧಿಮೈಯಂ ಪಕ್ಷದ ಶ್ರುತಿ ಹಾಸನ್ ವಿರುದ್ಧ ಬಿಜೆಪಿ  ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮತಗಟ್ಟೆಯೊಳಗೆ ಶ್ರುತಿ ಅಕ್ರಮ ಪ್ರವೇಶ ಮಾಡಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

ತಮಿಳುನಾಡಿನ ಚುನಾವಣೆಯಲ್ಲಿ ಬಹುಭಾಷಾ ನಟ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನಿಧಿಮೈಯಂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕಮಲ್ ಹಾಸನ್ ಭರ್ಜರಿ ಪ್ರಚಾರ ಕೂಡ ನಡೆಸಿದ್ದಾರೆ. ಆದರೆ ಮತದಾನದಲ್ಲಿ ಪಾಲ್ಗೊಂಡ ಶ್ರುತಿ ಹಾಸನ್ ಇದೀಗ ಮತಗಟ್ಟೆ ಅನಧಿಕೃತ ಪ್ರವೇಶದ ಆರೋಪಕ್ಕೆ ತುತ್ತಾಗಿದ್ದು, ಬಿಜೆಪಿ ದೂರು ನೀಡಿದೆ.

ತಂದೆ ಹಾಗೂ ಅಭ್ಯರ್ಥಿ ಕಮಲ್ ಹಾಸನ್ ಕಣಕ್ಕಿಳಿದಿರುವ ಕೊಯಮುತ್ತೂರು ಕ್ಷೇತ್ರದ ಮತಗಟ್ಟೆಯೊಂದಕ್ಕೆ ಶ್ರುತಿ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಕಮಲ್ ಹಾಸನ್ ಚೈನೈನಲ್ಲಿ ಮತಚಲಾಯಿಸಿದ ಬಳಿಕ ಮಕ್ಕಳಾದ ಅಕ್ಷರಾ ಹಾಗೂ ಶ್ರುತಿ ಹಾಸನ್ ಜೊತೆ ತಮ್ಮ ಕ್ಷೇತ್ರ ಕೊಯಮುತ್ತೂರಿಗೆ ತೆರಳಿದ್ದರು.

ಈ ವೇಳೆ ಶ್ರುತಿ, ಕೊಯಮುತ್ತೂರು ಕ್ಷೇತ್ರದ ಮತಗಟ್ಟೆಯೊಳಗೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಚುನಾವಣೆಯ ನಿಯಮ ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯ ಬಿಜೆಪಿ ಜಿಲ್ಲಾಧ್ಯಕ್ಷ ನಂದಕುಮಾರ್ ಆಯೋಗಕ್ಕೆ ಪತ್ರಬರೆದಿದ್ದಾರೆ. ಬೂತ್ ಎಜೆಂಟ್ ಬಿಟ್ಟು ಬೇರೆ ಯಾರು ಮತಗಟ್ಟೆ ಪ್ರವೇಶಿಸುವಂತಿಲ್ಲ. ಆದರೂ ಶ್ರುತಿ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದಕ್ಕೂ ಮುನ್ನ ಕಮಲ್ ಹಾಸನ್ ಕೂಡ ಬಿಜೆಪಿ ವಿರುದ್ಧ ಅಕ್ರಮದ ಆರೋಪ ಮಾಡಿದ್ದು, ಬಿಜೆಪಿ ಗೆದ್ದರೇ ಹಣ ಹಂಚುವ ಭರವಸೆ ನೀಡುವ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದೆ ಎಂದು ಆಯೋಗಕ್ಕೆ ದೂರು ನೀಡಿದ್ದಾರೆ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಚುನಾವಣೆ ರಾಜಕೀಯ ರಂಗೇರಿದೆ.  

Comments are closed.