ವಿದೇಶದಲ್ಲೂ ಕರಾವಳಿಗರ ಹವಾ….! ಕಡಲಾಚೆ ತೆರೆ ಕಾಣಲಿದೆ ತುಳು ಚಿತ್ರ ಇಂಗ್ಲೀಷ್ ಎಂಕ್ಲೇಗ್ ಬರ್ಪುಜಿ ಬ್ರೋ…!

ಮಂಗಳೂರು: ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿರುವ ಹಾಸ್ಯಮಯ ಹಾಗೂ ನವಿರು ಪ್ರೇಮಕತೆ ಹೊಂದಿರುವ ಚಿತ್ರ ಇಂಗ್ಲೀಷ್ ಎಂಕ್ಲೇಗ್ ಬರ್ಪುಜಿ ಬ್ರೋ ಈಗ ಕಡಲಾಚೆಯೂ ತೆರೆ ಕಾಣಲಿದ್ದು, ತುಳುಪ್ರೇಕ್ಷಕರನ್ನು ಸೆಳೆಯಲಿದೆ.

ಈಗಾಗಲೇ ಮಾರ್ಚ್ 26 ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೆರೆಕಂಡು ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ತುಳು ಕಾಮಿಡಿಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ನಟ ಅನಂತನಾಗ್ ಕೂಡ ನಟಿಸಿದ್ದಾರೆ.  ತುಳುಕಾಮಿಡಿ ಸಿನಿಮಾ ಈಗ ಓಮನ್ ಹಾಗೂ ಯುಎಇಯಲ್ಲೂ  ಪ್ರದರ್ಶನಗೊಳ್ಳಲಿದೆ.

ದುಬೈನ ಉದ್ಯಮಿ ಹಾಗೂ ಕನ್ನಡ ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ಆಕ್ಮೆ ನಿರ್ಮಾಣಸಂಸ್ಥೆ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಖತ್ ಫೇಮಸ್ ಆಗಿದ್ದು, ಈಗ ವಿದೇಶದಲ್ಲೂ ಪ್ರೇಕ್ಷಕರನ್ನು ರಂಜಿಸಲಿದೆ.

ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಇಂಗ್ಲೀಷ್ ಎಂಕ್ಲೇಗ್ ಬರ್ಪುಜಿ ಬ್ರೋಉತ್ತಮ ಸಂದೇಶದೊಂದಿಗೆ ತುಳುನಾಡಿನ ಸಂಸ್ಕೃತಿ,ನಂಬಿಕೆ ಹಾಗೂ ಸಂಪ್ರದಾಯಗಳನ್ನು ಪ್ರೇಕ್ಷಕರಿಗೆ ತೆರೆದಿಟ್ಟಿದೆ. ಮನಮುಟ್ಟುವ ಹಾಡುಗಳು ಪ್ರೇಕ್ಷಕರಿಗೆ ಮುದ ನೀಡುವಂತಿದೆ.

ಎರಡನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಇಂಗ್ಲೀಷ್ ಎಂಕ್ಲೇಗ್ ಬರ್ಪುಜಿ ಬ್ರೋ ವಿದೇಶದಲ್ಲಿ ತೆರೆಕಾಣುವ ಮೂಲಕ ತುಳು ಚಿತ್ರರಂಗದಲ್ಲೇ ದಾಖಲೆ ಬರೆಯಲಿದೆ. 8ಕೆ ಕ್ಯಾಮರಾ ಬಳಸಿ ಬೆಂಗಳೂರಿನ ಪ್ಯಾಲೇಸ್ ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಇದು ನಟ ಅನಂತ ನಾಗ್ ಅವರ ಮೊದಲ ತುಳು ಚಿತ್ರ.

ಖ್ಯಾತ ಹಾಸ್ಯನಟರಾದ ಅರವಿಂದ್ ಬೋಳಾರ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು,ವಿಸ್ಮಯ್ ವಿನಾಯಕ್, ದೀಪಕ್ ಪೈ ನಟಿಸಿದ್ದಾರೆ. ಪ್ರಥ್ವಿ ಅಂಬರ್ ನಾಯಕರಾಗಿರುವ ಸಿನಿಮಾದಲ್ಲಿ ನವ್ಯಾಪೂಜಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರೀಮಿಯರ್ ಶೋ ದುಬೈನಲ್ಲಿ ಮಾರ್ಚ್ 13 ರಂದು Al Ghurair centre Deira  ದಲ್ಲಿ ನಡೆದಿತ್ತು.  


Comments are closed.