Mekedatu:ಮೇಕೆದಾಟು ವಿವಾದ…! ಮತ್ತೆ ಖ್ಯಾತೆ ತೆಗೆದ ತಮಿಳುನಾಡು ಯೋಜನೆ ಕೈಬಿಡುವಂತೆ ಸಿಎಂಗೆ ಪತ್ರ…!!

ಚೈನೈ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಪ್ರವೇಶಿಸಲು ನಿರಾಕರಿಸಿದ ಬೆನ್ನಲ್ಲೇ ಮತ್ತೆ ತಮಿಳುನಾಡು ಮೇಕೆದಾಟು ಯೋಜನೆ ಖ್ಯಾತೆ ಮುಂದುವರೆಸಿದ್ದು, ಯೋಜನೆ ಕೈಬಿಡುವಂತೆ ತಮಿಳುನಾಡಿನ ಸಿಎಂ ಸ್ಟಾಲಿನ್ ಸಿಎಂ ಬಿಎಸ್ವೈಗೆ ಪತ್ರ ಬರೆದಿದ್ದಾರೆ.

ಮೇಕೆದಾಟು ಯೋಜನೆಗಾಗಿ ಅಪಾರ ಪ್ರಮಾಣದ ಅರಣ್ಯನಾಶವಾಗಲಿದೆ ಎಂದು ತಮಿಳುನಾಡು ಆರೋಪಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.

ಆದರೆ ಬಳಿಕ ಮಧ್ಯಪ್ರವೇಶಿಸಲು ನ್ಯಾಯಮಂಡಳಿ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಬೇರೆ ದಾರಿ ಇಲ್ಲದೇ ಕರ್ನಾಟಕದ ಸಿಎಂ ಬಿಎಸ್ವೈಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪತ್ರ ಬರೆದಿದ್ದಾರೆ. ಅಲ್ಲದೇ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿಗೆ ಅಗತ್ಯ ಕುಡಿಯುವ ನೀರಿನ ಪೊರೈಕೆ ಉದ್ದೇಶದಿಂದ ಕಾವೇರಿ ನದಿಗೆ ಮೇಕದಾಟು ಬಳಿ ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದೆ. ಆದರೆ ಈ ಯೋಜನೆಗೆ ಆರಂಭದಿಂದಲೂ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ.

ಇದೀಗ ಪತ್ರ ಬರೆದಿರುವ ಮುಖ್ಯಮಂತ್ರಿ ಸ್ಟಾಲಿನ್, ಬೆಂಗಳೂರಿಗೆ ಕುಡಿಯುವ ನೀರು ಪೊರೈಸಲು ಹಲವಾರು ಬೇರೆ ಅವಕಾಶಗಳಿವೆ. ಹೀಗಿದ್ದಾಗಲೂ ಕೇವಲ 4.75 ಟಿಎಂಸಿ ನೀರಿಗಾಗಿ  67.16 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಾಣ ಸರಿಯಲ್ಲ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಾಳಾಗಲಿದೆ ಎಂದು ಸ್ಟಾಲಿನ್ ವಿವರಿಸಿದ್ದಾರೆ.

ದುರದೃಷ್ಟವಶಾತ ನೀರಿನ ವ್ಯಾಜ್ಯ ಬಹುಕಾಲ ನ್ಯಾಯಾಲಯದಲ್ಲೇ ಇದ್ದಿದ್ದರಿಂದ ನೀರಿನ ತಟದಲ್ಲಿನ ನೀರಾವರಿ ವ್ಯವಸ್ಥೆ ಸುಧಾರಿಸುವ ಪ್ರಯತ್ನಗಳು ನಡೆದಿಲ್ಲ ಎಂದು ಸ್ಟಾಲಿನ್ ಪತ್ರದಲ್ಲಿ ವಿವರಿಸಿದ್ದಾರೆ.

ಒಟ್ಟಿನಲ್ಲಿ ಮೇಕದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ತನ್ನ ಆಕ್ಷೇಪ ಮುಂದುವರೆಸುವ ಲಕ್ಷಣ ದಟ್ಟವಾಗಿದ್ದು, ಕರ್ನಾಟಕದ ಮುಂದೇ ಯೋಜನೆ ಜಾರಿಗೊಳಿಸುವ ಸವಾಲಿದೆ.

Comments are closed.