ವಾರದಲ್ಲಿ 12 ಅವಧಿ ಬೋಧನೆ ಕಡ್ಡಾಯ : ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ವಾರ್ನಿಂಗ್

ಬೆಂಗಳೂರು : ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪಪ್ರಾಂಶುಪಾಲರು ವಾರದಲ್ಲಿ ಕಡ್ಡಾಯವಾಗಿ ಕನಿಷ್ಠ 12 ಅವಧಿಗಳ ಬೋಧನೆ ಮಾಡುವಂತೆ ಶಿಕ್ಷಣ ಇಲಾಖೆ ಖಡಕ್ ಆದೇಶ ಹೊರಡಿಸಿದೆ.

ರಾಜ್ಯದಲ್ಲಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಕುಸಿದಿದ್ದು, ಎಸ್ಎಸ್ಎಲ್ ಸಿ ಫಲಿತಾಂಶವು ಕಡಿಮೆಯಾಗಿರುವುದನ್ನು ಗಮಿನಿಸಿ ಶಿಕ್ಷಣ ಇಲಾಖೆ ಕಲಿಕಾ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಗಮನಹರಿಸಬೇಕಾಗಿದ್ದು, ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ವಾರದಲ್ಲಿ ಕಡ್ಡಾಯವಾಗಿ ಕನಿಷ್ಠ 12 ಅವಧಿಗಳ ಬೋಧನೆಯನ್ನು ಮಾಡಲೇ ಬೇಕಾಗಿದೆ. ಅದರಲ್ಲೂ 9 ಮತ್ತು 10ನೇ ತರಗತಿಯ ಬೋಧನೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಆದೇಶದಲ್ಲಿ ಸೂಚಿಸಿದೆ.

ಮುಖ್ಯ ಶಿಕ್ಷಕರು ಪಾಠ ಪ್ರವಚನಗಳ ವರದಿಯನ್ನು ಪ್ರತೀ ತಿಂಗಳು ತಮ್ಮ ವ್ಯಾಪ್ತಿಯಲ್ಲಿನ ಬಿಇಓ ಹಾಗೂ ಬಿ.ಆರ್.ಸಿಗಳಿಗೆ ಕಳುಹಿಸಿಕೊಡಬೇಕು. ಒಂದೊಮ್ಮೆ ಮುಖ್ಯ ಶಿಕ್ಷಕರು ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿ ಫಲಿತಾಂಶ ಉತ್ತಮಗೊಳಿಸುವಲ್ಲಿ ಶ್ರಮವಹಿಸಬೇಕಾಗಿದೆ. ಒಂದೊಮ್ಮೆ ಉದಾಸೀನತೆ ಅಥವಾ ನಿರ್ಲಕ್ಷ್ಯ ತೋರಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ತಮ್ಮ ಆದೇಶಿಸಿದ್ದಾರೆ.

Comments are closed.