ಟಾಲಿವುಡ್ ನಲ್ಲಿ ದಚ್ಚು ಸವಾರಿ ಶುರು….! ರಿಲೀಸ್ ಆಗ್ತಿದ್ದಂತೆ ಸಖತ್ ರೆಸ್ಪಾನ್ಸ್ ಪಡೆದ ರಾಬರ್ಟ್ ತೆಲುಗು ಟೀಸರ್….!!

ಸಾಕಷ್ಟು ನೀರಿಕ್ಷೆ ಹುಟ್ಟಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಟೀಸರ್ ರಿಲೀಸ್ ಆಗಿದ್ದು, ರಿಲೀಸ್ ಆದ 45 ನಿಮಿಷದಲ್ಲಿ 2 ಲಕ್ಷ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸುವತ್ತ ಸಾಗಿದೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತೆರೆ ಕಾಣಲಿರುವ ರಾಬರ್ಟ್ ಸಿನಿಮಾದ ಕನ್ನಡ ಟೀಸರ್ ಕಳೆದ ವರ್ಷ ದರ್ಶನ್ ಬರ್ತಡೇ ವೇಳೆ ರಿಲೀಸ್ ಆಗಿತ್ತು. ಇದೀಗ ಸಿನಿಮಾ ಬಿಡುಗಡೆಗೆ 8 ದಿನ ಬಾಕಿ ಇರುವಾಗ ಚಿತ್ರತಂಡ ತೆಲುಗು ಟೀಸರ್ ರಿಲೀಸ್ ಮಾಡಿದ್ದು, ಸಿನಿರಸಿಕರು ಕುತೂಹಲದಿಂದ ಟೀಸರ್ ವೀಕ್ಷಿಸುತ್ತಿದ್ದಾರೆ.

37 ಸೆಕೆಂಡ್ ನ  ಟೀಸರ್ ರಿಲೀಸ್ ಆದ ಗಂಟೆಯಲ್ಲೇ ಲಕ್ಷಾಂತರ ವೀವ್ಸ್ ಪಡೆದಿದ್ದು, ದರ್ಶನ್ ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡುತ್ತಿದ್ದಾರೆ. ಸಖತ್ ಆಕ್ಯ್ಷನ್ ಸೀನ್ಸ್ ಹಾಗೂ ಪಚ್ಚಿಂಗ್ ಡೈಲಾಗ್ಸ್ ನಿಂದ ಕೂಡಿದ ಟೀಸರ್ ಮನಸೆಳೆಯುತ್ತಿದೆ.

ಉಮಾಪತಿ ನಿರ್ಮಿಸಿರುವ ರಾಬರ್ಟ್ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನವಿದ್ದು, ಮರಿಟೈಗರ್ ವಿನೋದ್ ಪ್ರಭಾಕರ್ ಕೂಡ ದರ್ಶನ್ ಗೆ ಸಾಥ್ ನೀಡಿದ್ದಾರೆ. ನಾಯಕಿಯಾಗಿ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಖ್ಯಾತಿಯ ಆಶಾ ಭಟ್ ನಟಿಸಿದ್ದಾರೆ.

ಆನಂದ್ ಆಡಿಯೋದ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗಿದೆ. ಆದರೆ ತೆಲುಗು ಟೀಸರ್ ನಲ್ಲಿ ದರ್ಶನ್ ಖಡಕ್ ವಾಯ್ಸ್ ಕೇಳುವ ನೀರಿಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು ತೆಲುಗಿನಲ್ಲಿ ದರ್ಶನ್ ವಾಯ್ಸ್ ನೀಡಿಲ್ಲ. ಬದಲಾಗಿ ಡಬ್ ಮಾಡಲಾಗಿದೆ.

ಕೆಲದಿನಗಳ ಹಿಂದೆಯಷ್ಟೇ ರಾಬರ್ಟ್ ತೆಲುಗು ವರ್ಸನ್ ರಿಲೀಸ್ ಗೆ ತೆಲುಗು ಸಿನಿ ಇಂಡಸ್ಟ್ರಿ ನಿರಾಕರಿಸಿದ ಹಿನ್ನೆಲೆಯಲ್ಲಿ  ಸಮಸ್ಯೆ ಉಂಟಾಗಿದ್ದು, ಬಳಿಕ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ದೂರು ನೀಡಿದ್ದರು. ಈಗ ಸಮಸ್ಯೆ ಬಗೆಹರಿದಿದ್ದು, ರಾಬರ್ಟ್ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದ್ದು, ತೆಲುಗಿನಲ್ಲಿ ಬರೋಬ್ಬರಿ 200 ಥೀಯೇಟರ್ ಗಳಲ್ಲಿ ತೆರೆಗೆ ಬರಲಿದೆ.

Comments are closed.