ಅನಾರೋಗ್ಯ ಪೀಡಿತ ಮಾಲೀಕನಿಗಾಗಿ ಮಿಡಿದ ನಾಯಿ…! ಒಂದು ವಾರ ಹಾಸ್ಪಿಟಲ್ ಎದುರೇ ಕುಳಿತಿದ್ದ ಶ್ವಾನ…!!

ಟರ್ಕಿ: ಒಂದು ತುತ್ತು ಅನ್ನ ಇಕ್ಕಿದ ಮಾಲೀಕನಿಗೆ ನಾಯಿಯಷ್ಟು ನಿಷ್ಠೆಯಿಂದ ಇರೋ ಪ್ರಾಣಿ ಮತ್ತೊಂದಿಲ್ಲ. ಇದೇ ಕಾರಣಕ್ಕೆ ನಿಯತ್ತಿಗೆ ನಾಯಿನೇ ಉಪಮೆ. ಟರ್ಕಿಯಲ್ಲಿ ಅನಾರೋಗ್ಯ ಪೀಡಿತ ಮಾಲೀಕನಿಗಾಗಿ ನಾಯಿಯೊಂದು ಬರೋಬ್ಬರಿ 1 ವಾರ ಆಸ್ಪತ್ರೆ ಬಾಗಿಲಲ್ಲೇ ಕಾದು ಕೂತು ತನ್ನ ನಿಯತ್ತು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಟರ್ಕಿಯ 68 ವರ್ಷದ ವೃದ್ಧ ಸೆಮಲ್ ಸೆಂಟ್ರಕ್ ಎಂಬುವವರು ನಾಯಿಯೊಂದನ್ನು ಪ್ರೀತಿಯಿಂದ ಸಾಕಿದ್ದರು. ಇತ್ತೀಚಿಗೆ ಅನಾರೋಗ್ಯಕ್ಕಿಡಾಗಿದ್ದ ಸೆಮಲ್ ಟ್ರಾಬ್ ಝೋನ್ ಬಾನಕಕ್ ಆಸ್ಪತ್ರೆಗೆ ದಾಖಲಾಗಿದ್ದರು.  ಮೆದುಳಿನ ಸಮಸ್ಯೆಗೆ ತುತ್ತಾಗಿದ್ದರಿಂದ ಸೆಮಲ್ ಚೇತರಿಸಿಕೊಳ್ಳಲು ಬರೋಬ್ಬರಿ 1 ವಾರ ಬೇಕಾಯಿತು.

https://twitter.com/istanbulism/status/1351621559623024643?s=19

ಈ ಒಂದು ವಾರವೂ ಅವರ ನೆಚ್ಚಿನ ನಾಯಿ ಆಸ್ಪತ್ರೆಯ ಹೊರಭಾಗದಲ್ಲೇ ತನ್ನ ಮಾಲೀಕನಿಗಾಗಿ ಕಾದು ಕುಳಿತಿತ್ತು. ಮೆದುಳಿನ ಸಮಸ್ಯೆಗೆ ತುತ್ತಾಗಿದ್ದ ಅವರನ್ನು ಜ.14 ರಂದು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಅಂಬ್ಯುಲೆನ್ಸ್ ಹಿಂಬಾಲಿಸಿಕೊಂಡು ಬಂದ ಶ್ವಾನ ಆಸ್ಪತ್ರೆ ಎದುರು ಕುಳಿತಿತ್ತು.

https://twitter.com/istanbulism/status/1351621599057891330?s=19

ಸೆಮೆಲ್ ಮಗಳು ಈ ನಾಯಿಯನ್ನು ಹಲವು ಭಾರಿ ಮನೆಗೆ ಕರೆದೊಯ್ದರು ಮತ್ತೆ ಓಡಿ ಬಂದು ಆಸ್ಪತ್ರೆ ಎದುರೇ ಕುಳಿತಿರುತ್ತಿತ್ತು ಎನ್ನಲಾಗಿದೆ. ಈ ಶ್ವಾನ  ಮಾಲೀಕನ ಮೇಲೆ ಇಟ್ಟಿರುವ ಪ್ರೀತಿಗೆ ಮರುಳಾದ ಆಸ್ಪತ್ರೆ ಸಿಬ್ಬಂದಿ ಅದಕ್ಕೆ ಆಹಾರ ನೀಡಿದ್ದಾರೆ.

ಸೆಮೆಲ್ ಜ.20 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ನಾಯಿ ಅವರ ವೀಲ್ಹ್ ಚೇರ್ ಬಳಿ ಆಗಮಿಸಿ ಅವರನ್ನು ಮುದ್ದಿಸಿ ತನ್ನ ಪ್ರೀತಿ ತೋರಿದ್ದು,ಅವರೊಂದಿಗೆ ಮನೆಗೆ ಮರಳಿದೆ. ಈ ವಿಡಿಯೋ ಹಾಗೂ ನಾಯಿ ಪೋಟೋ ಎಲ್ಲೆಡೆ ವೈರಲ್ ಆಗಲಿದ್ದು, ಜನರು ನಾಯಿ ನಿಯತ್ತಿಗೆ ಸರಿಸಾಟಿಯುಂಟೇ ಅಂತಿದ್ದಾರೆ.

Comments are closed.