ತುಂಬಿ ಹರಿಯುತ್ತಿದೆ ಸ್ವರ್ಣಾ ನದಿ : 35 ಮಂದಿ ಸ್ಥಳಾಂತರ, ಉಪ್ಪೂರು, ಬೈಕಾಡಿಯಲ್ಲಿ ನೆರೆ ಭೀತಿ

0

ಉಡುಪಿ : ಕಳೆದೊಂದು ವಾರದಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆ ಉಡುಪಿ ಜಿಲ್ಲೆಯಲ್ಲಿ ಇಂದೂ ಕೂಡ ಮುಂದುವರಿದಿದೆ. ಭಾರೀ ಮಳೆಯ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸ್ಚರ್ಣಾ ನದಿ ಪಾತ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 35 ಮಂದಿಯನ್ನು ಸ್ಥಳಾಂತರ‌ ಮಾಡಲಾಗಿದ್ದು,‌ ಉಡುಪಿ ಜಿಲ್ಲೆಯ ಹಲವೆಡೆ ನೆರೆ ಭೀತಿ ಆವರಿಸಿದೆ.

ಉಡುಪಿ ಜಿಲ್ಲೆಯ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ವಾಸಿಸುತ್ತಿದ್ದ 35 ನಿವಾಸಿಗಳನ್ನು ಶಿಫ್ಟ್ ಮಾಡಲಾಗಿದೆ
ಸ್ವರ್ಣಾ ನದಿ ಬದಿಯಲ್ಲಿ ಬರುವ ಬಲ್ಲೆಕುದ್ರು, ಪಾಸ್ಕುದ್ರು, ಕೊಡಿಪಟ್ಲ, ಮೆಲ್ ಕೊಡಿಪಟ್ಲದಲ್ಲಿ ನಡುಗಡ್ಡೆಯ ವಾತಾವರಣ ಸೃಷ್ಟಿಯಾಗಿದೆ. ಕೆಲ ಮನೆಗಳಿಗೆ ನೀರು ನುಗ್ಗಿದೆ.

ಸುವರ್ಣ ನದಿ ತಟದಲ್ಲಿ ಸ್ಥಳಗಳಲ್ಲಿ ಸಿಲುಕಿದ್ದ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಆತಂಕದಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೊಟ್ ಮುಖಾಂತರ ರಕ್ಷಿಸಿ ದಡಕ್ಕೆ ತರಲಾಗಿದೆ.

ಉಡುಪಿಯ ತಹಶೀಲ್ದಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಬಲೇಕುದ್ರು ಎಂಬಲ್ಲಿ ಒಂದೇ ಕುಟುಂಬದ ಎಂಟು ಮಂದಿಯನ್ನು ರಕ್ಷಣೆ ಮಾಡಲಾಯಿತು. 80 ವರ್ಷದ ಅಜ್ಜಿ 8 ತಿಂಗಳ ಹಸುಗೂಸು ಸೇರಿದಂತೆ ಎತ್ತರ ಪ್ರದೇಶಕ್ಕೆ ಕುಟುಂಬವನ್ನು ಅಗ್ನಿಶಾಮಕ ಇಲಾಖಾ ಸಿಬ್ಬಂದಿ ಮೂಲಕ ಶಿಫ್ಟ್ ಮಾಡಲಾಗಿದೆ.

ಮಲೆನಾಡಿನ ಭಾಗಗಳಲ್ಲಿಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ‌ ಜಿಲ್ಲೆಯ ಸ್ವರ್ಣ, ಸೀತಾ ನದಿ ತುಂಬಿ ಹರಿಯುತ್ತಿದೆ. ಕುಂದಾಪುರ ಬೈಂದೂರು ಕಾರ್ಕಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ನದಿಪಾತ್ರದ ಜನರು ಎಚ್ಚರಿಕೆಯಿಂದರಬೇಕೆಂದು ಸೂಚನೆಯನ್ನು ನೀಡಲಾಗಿದೆ.

ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ. ನಾಡದೋಣಿ ಮೀನುಗಾರಿಕೆಯವರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಬೈಕಾಡಿ, ಉಪ್ಪೂರು, ಹಕ್ಲಾಡಿ, ಹೈಕಾಡಿ ನಾವುಂದ ಬಡಾಕೆರೆ ಮತ್ತಿತರ ನದಿ ಪಾತ್ರದ ಪ್ರದೇಶಗಳಲ್ಲಿ ನೆರೆ ಹಾವಳಿ ಆವರಿಸಿ

Leave A Reply

Your email address will not be published.