ಕೋಟ : ಮನೆ ನಿರ್ಮಾಣದ ವೇಳೆ ಕಾಂಕ್ರೀಟ್‌ ಸ್ಲಾಬ್‌ ಕುಸಿತ ; ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

ಕೋಟ : ಮನೆ ನಿರ್ಮಾಣದ ವೇಳೆಯಲ್ಲಿ ಕಾಂಕ್ರೀಟ್‌ ಸ್ಲಾಬ್‌ ಕುಸಿದು ಕಾರ್ಮಿಕನೋರ್ವ ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕೋಟತಟ್ಟು ಪಡುಕರೆಯ ಶಿರಸಿ ಮಾರಿಕಾಂಬಾ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ.

ಸಾಲಿಗ್ರಾಮದ ಗೆಂಡೆಕೆರೆ ನಿವಾಸಿ ಮಂಜುನಾಥ ( 36 ವರ್ಷ) ಎಂಬರು ಸಾವನ್ನಪ್ಪಿದ್ದು, ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಚೇತನ್‌ (28 ವರ್ಷ) ಎಂಬಾತನ ಗಂಭೀರವಾಗಿ ಗಾಯ ಗೊಂಡಿದ್ದಾರೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೋಟತಟ್ಟುವಿನಲ್ಲಿ ಪಡುಕರೆಯಲ್ಲಿ ರಾಜಶೇಖರ ಹಂದೆ ಎಂಬವರು ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದರು. ಮನೆಯ ಮುಂಭಾಗದಲ್ಲಿ ಸ್ಲ್ಯಾಬ್‌ ಅಳವಡಿಸಿದ್ದರು ಆದರೆ ಕಾಮಗಾರಿಯಲ್ಲಿನ ಲೋಪದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಗಾಯಾಳು ಚೇತನ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಇದನ್ನೂ ಓದಿ : ಮೀನುಗಾರಿಕಾ ಬೋಟ್‌ ಬಂಡೆಗೆ ಢಿಕ್ಕಿ : 6 ಮಂದಿ ಮೀನುಗಾರರ ರಕ್ಷಣೆ

ಇದನ್ನೂ ಓದಿ : ಮೂಡಬಿದಿರೆಯಲ್ಲಿ ಸಿಡಿಲು ಬಡಿದು ಇಬ್ಬರು ಯುವಕರು ಸಾವು : ಮೂವರು ಗಂಭೀರ

( Labour Died another serious in kota when building a house )

Comments are closed.