ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ಧಿ : ನವೆಂಬರ್ 15 ರಿಂದ 2 ತಿಂಗಳು ತೆರೆಯಲಿದೆ ಶಬರಿಮಲೆ

ಕೇರಳ : ಅಯ್ಯಪ್ಪನ ದರ್ಶನ ಮಾಡಿ ಬಹಳ ದಿನವಾಗಿದೆ ಒಮ್ಮೆ ಶಬರಿಮಲೆ ದೇವಾಲಯ ತೆರೆದರೆ ಹೋಗಿ ಬರಬೇಕು ಎಂದು ಕಾಯತ್ತಿರುವ ಅಯ್ಯಪ್ಪನ ಭಕ್ತರಿಗೆ ಒಂದು ಸಿಹಿ ಸುದ್ದಿ ಇದೆ. ನವೆಂಬರ್ 15 ರಿಂದ 2 ತಿಂಗಳ ಕಾಲ ಶಬರಿಮಲೆ ಅಯ್ಯಪ್ಪನ ದರ್ಶನ ಭಾಗ್ಯ ಭಕ್ತರು ಪಡೆದುಕೊಳ್ಳಬಹುದು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶದ ಹಲವಾರು ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಈಗ ದೇಶದಲ್ಲಿ ಕೋವಿಡ್‌ ಕೇಸ್‌ ಗಳ ಸಂಖ್ಯೆ ಕಡಿಮೆಯಾಗಿದ್ದು ಹೆಚ್ಚಿನ ದೇವಸ್ಥಾನಗಳು ತೆರೆಯುತ್ತಿವೆ. ಅದರಲ್ಲಿ ಶಬರಿಮಲೆ ಅಯ್ಯಪ್ಪ ದೇವಾಲಯ ಕೂಡ ಒಂದು.

ಇದನ್ನೂ ಓದಿ: Dengue fever : ಹೆಚ್ಚುತ್ತಿದೆ ಡೆಂಗ್ಯೂ ಅಬ್ಬರ, ಕೇಂದ್ರದಿಂದ 9 ರಾಜ್ಯಗಳಿಗೆ ತಜ್ಞರ ತಂಡ ನಿಯೋಜನೆ

ಶಬರಿಮಲೈ ದೇವಾಲಯವು ಬುಧವಾರ ಚಿತಿರಾ ಅಟ್ಟಾ ವಿಶೇಷ ಪೂಜೆಗಾಗಿ ಭಕ್ತರಿಗಾಗಿ ತೆರೆಯಲ್ಪಟ್ಟಿದೆ. ಪೂಜೆಯ ನಂತರ ರಾತ್ರಿ 9 ಗಂಟೆಗೆ ದೇವಾಲಯ ಮುಚ್ಚಲಿದೆ ಮತ್ತು ವರ್ಚುವಲ್ ಕ್ಯೂ ಬುಕಿಂಗ್ ವ್ಯವಸ್ಥೆಯ ಮೂಲಕ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.

ದೇವಾಲಯ ಪ್ರವೇಶ ಮಾಡುವಂತ ಭಕ್ತರು ಲಸಿಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಭಕ್ತಾದಿಗಳು 2 ಲಸಿಕೆ ಪಡೆದಿದ್ದಾರೆ ಅಥವಾ 72 ಗಂಟೆಗಳ ಒಳಗಿನ ಕೋವಿಡ್‌ ನೆಗೆಟಿವ್‌ ವರದಿಯನ್ನು ಹೊಂದಿರಬೇಕು. ಎಂದು ಮಂಡಳಿ ಹೇಳಿದೆ. ನವೆಂಬರ್ 15 ರಿಂದ ಎರಡು ತಿಂಗಳ ಸುದೀರ್ಘ ಯಾತ್ರೆಯ ಋತುವಿಗಾಗಿ ದೇವಾಲಯ ತೆರೆಯಲಿದೆ ಎಂದು ಮಂಡಳಿಗೆ ಮತ್ತಷ್ಟು ಮಾಹಿತಿ ನೀಡಿದರು.

ಇದನ್ನೂ ಓದಿ: Kedaranath – Modi : ಕೇದಾರನಾಥ ದೇವಾಲಯಕ್ಕೆ ಭೇಟಿ : 250 ಕೋಟಿ ರೂ.ಗಳ ಪುನರ್ ನಿರ್ಮಾಣ ಕಾರ್ಯ ಉದ್ಘಾಟಿಸಲಿರುವ ಮೋದಿ

(Good news for Devotees of Ayyappa : Sabarimala to open for 2 months from November 15)

Comments are closed.