ಹರಿದ ಜೀನ್ಸ್ ನಿಂದ ಯಾವ ಸಂದೇಶ ನೀಡುತ್ತೀರಿ ಎಂದ ಸಿಎಂ…!? ನಿಮ್ಮ ಯೋಚನೆ ಬದಲಾಯಿಸಿ ಎಂದ ಬಿಗ್ ಬೀ ಮೊಮ್ಮಗಳು..!

ಉತ್ತರಾಖಂಡದ ನೂತನ ಮುಖ್ಯಮಂತ್ರಿ  ತಿರತ್ ಸಿಂಗ್ ರಾವತ್  ಮಹಿಳೆಯರ ಬಟ್ಟೆ ಬಗ್ಗೆ ನೀಡಿದ ಹೇಳಿಕೆ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹರಿದ ಜೀನ್ಸ್ ಶ್ರೀಮಂತಿಕೆಯ ಸಂಕೇತವಲ್ಲ. ಹರಿದ ಜೀನ್ಸ್ ನಿಂದ ನೀವು ಸಮಾಜಕ್ಕೆ ಮಕ್ಕಳಕ್ಕೆ ಯಾವ ಸಂದೇಶ ನೀಡುತ್ತೀರಿ ಎಂದು ಸಿಎಂ ಪ್ರಶ್ನಿಸಿದ್ದರು.

ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಉತ್ತರಾಖಂಡ ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,  ಮೊಣಕಾಲಿನ ಬಳಿ ಹರಿದ ಜೀನ್ಸ್ ಧರಿಸಿ ಓಡಾಡುವ ಮಹಿಳೆಯರು ಮಕ್ಕಳಿಗೆ ಯಾವ ಸಂದೇಶ ನೀಡಬಹುದು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನೊಮ್ಮೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯನ್ನು ಗಮನಿಸಿದೆ.

ಆಕೆ ಎನ್ಜಿಓ ಒಂದನ್ನು ನಡೆಸುತ್ತಿದ್ದರು. ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಅವರ ಗಂಡ ಜೆಎನ್ಓ ಪ್ರೊಫೆಸರ್ ಅವರು ಹರಿದ ಜೀನ್ಸ್ ಧರಿಸಿದ್ದರು. ಆದರೆ ಅವರು ಮಕ್ಕಳಿಗೆ ಯಾವ ಸಂಸ್ಕಾರ ನೀಡಬಲ್ಲರು ಎಂಬುದು ನನಗೆ ಅರ್ಥವಾಗಲಿಲ್ಲ ಎಂದಿದ್ದರು. ರಾವತ್ ಈ ಹೇಳಿಕೆ ಇದೀಗ ದೇಶದಾದ್ಯಂತ ಸಂಚಲನ ಮೂಡಿಸಿದ್ದು, ಮಹಿಳೆಯರ ವಿರೋಧ ವ್ಯಕ್ತವಾಗಿದೆ.

ಮೊಣಕಾಲು ತೋರಿಸಿ ಶ್ರೀಮಂತಿಕೆ ಪ್ರದರ್ಶಿಸಬೇಕೆ ಎಂದು ರಾವತ್ ಪ್ರಶ್ನಿಸಿರುವುದಕ್ಕೆ ರಾಜಕೀಯ ಪಕ್ಷಗಳು, ಸೋಷಿಯಲ್ ಮೀಡಿಯಾ ಜನರು ಸಿಎಂ ವಿರುದ್ಧ ತಿರುಗಿಬಿದ್ದಿದ್ದಾರೆ.  ಕಾಂಗ್ರೆಸ್ ವಖ್ತಾರೆ ಗರೀಮಾ ರಾವತ್ ಹೇಳಿಕೆ ಅಸಂಬದ್ಧ ಎಂದಿದ್ದರೇ, ಪ್ರಿಯಾಂಕಾ ಚರ್ತುವೇದಿ ನಿಮ್ಮ ಯೋಚನೆ ಬದಲಾಯಿಸಿ ಆಗ ದೇಶ ಬದಲಾಗುತ್ತದೆ ಎಂದಿದ್ದಾರೆ.

ಇನ್ನು ಬಿಗ್ ಬೀ ಅಮಿತಾಬ್ ಬಚ್ಛನ್ ಮೊಮ್ಮಗಳು ನವ್ಯಾನವೇಲಿ ಸಿಎಂ ವಿರುದ್ಧವೇ ಧೈರ್ಯವಾಗಿ ಧ್ವನಿ ಎತ್ತಿದ್ದು, ಬದಲಾಯಿಸಬೇಕಿರುವುದು ಹೆಣ್ಣುಮಕ್ಕಳ ಉಡುಗೆಯನ್ನಲ್ಲ ನಿಮ್ಮ ಮನಸ್ಥಿತಿಯನ್ನು ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

ಒಟ್ಟಿನಲ್ಲಿ ಮತ್ತೊಮ್ಮೆ ಬಿಜೆಪಿ ನಾಯಕರು ಮಹಿಳೆಯ ವಸ್ತ್ರದ ಬಗ್ಗೆ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

Comments are closed.