ರಾಗಿ ಕಾಳು ಎಣಿಸಿ ವರ್ಲ್ಡ್ ರೆಕಾರ್ಡ್…! ಶಿವಮೊಗ್ಗ ವಿದ್ಯಾರ್ಥಿಯ ಅಪರೂಪದ ಸಾಧನೆ…!!

ಒಂದು ಕೆಜಿ ಕಡ್ಲೇಲಿ ಎಷ್ಟು ಕಾಳಿದೆ ಅಂತ ಕೇಳಿದ್ರೇ ನಿಮಗೇನು ಹುಚ್ಚಾ?  ಅಂತ ಕೇಳ್ತಾರೆ. ಅಂತಹದ್ರಲ್ಲಿ ಒಂದು ಕೆಜಿ ರಾಗಿಲಿ ಎಷ್ಟು ಕಾಳಿದೆ ಅಂತ ಯಾರು ಹೇಳ್ತಾರೆ ಹೇಳಿ. ಆದರೆ ಇಲ್ಲೊಬ್ಬ ಹುಡುಗ  ಈ ಪ್ರಶ್ನೆಗೂ ಉತ್ತರ ಕಂಡುಹಿಡಿದು ವಿಶ್ವದಾಖಲೆ ಬರೆದಿದ್ದಾನೆ.

ಶಿವಮೊಗ್ಗ ಹೊಯ್ಸಳ ಕಾಲೇಜಿನ ಬಿಕಾಂ ವಿದ್ಯಾರ್ಥೀ ಸಚಿನ್ ಇಂತಹದೊಂದು ಕ್ಲಿಷ್ಟಕರ ಹಾಗೂ ವಿಭಿನ್ನ ಸಾಧನೆ ಮಾಡುವ ಮೂಲಕ ಇಂಡಿಯನ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರು ಬರೆಸಿಕೊಂಡಿದ್ದಾನೆ.

1 ಕೆಜಿ ರಾಗಿಯಲ್ಲಿ ಬರೋಬ್ಬರಿ 3 ಲಕ್ಷದ  76 ಸಾವಿರದ 83 ಕಾಳುಗಳಿದೆ ಎಂದು ಸಚಿನ್ ಕಂಡು ಹಿಡಿದಿದ್ದು, ಇದನ್ನು ಲೆಕ್ಕ ಹಾಕೋದಿಕ್ಕೆ ಸಚಿನ್ 146 ಗಂಟೆ 30 ನಿಮಿಷ ತೆಗೆದುಕೊಂಡಿದ್ದಾನೆ.

ಸಚಿನ್ ಗೆ ವಿಭಿನ್ನವಾದ ಸಾಧನೆ ಮಾಡೋ ಆಸೆ ಇತ್ತಂತೆ. ಇದಕ್ಕಾಗಿ ಅತಿ ಹೆಚ್ಚು ತಾಳ್ಮೆ ಬಯಸುವ  ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದು, ಇದಕ್ಕೆ ಶಿಕ್ಷಕರಾಗಿರುವ ಈತನ ತಂದೆ-ತಾಯಿ ಪ್ರೋತ್ಸಾಹ ನೀಡಿದ್ದರಂತೆ.

ಅತ್ಯಂತ ಸೂಕ್ಷ್ಮವಾದ ಕೆಲಸದಲ್ಲಿ ನೈಪುಣ್ಯತೆ ಸಾಧಿಸಿ ರಾಗಿ ಕಾಳನ್ನು ಎಣಿಸಿದ ಈ ಯುವಕನ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.  

Comments are closed.