ರಾಮಮಂದಿರ ದೇಣಿಗೆಗೂ ತಟ್ಟಿದ ಚೆಕ್ ಬೌನ್ಸ್ ಬಿಸಿ….! 22 ಕೋಟಿ ಮೌಲ್ಯದ 15 ಸಾವಿರ ಚೆಕ್ ಬಳಕೆಗೆ ಸಿಕ್ಕಿಲ್ಲ….!!

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದಾಖಲೆಯ ನಿಧಿ ಸಂಗ್ರಹಿಸಿಕೊಟ್ಟ ವಿಶ್ವಹಿಂದೂ ಪರಿಷತ್ ಗೆ ಚೆಕ್ ಬೌನ್ಸ್ ಬಿಸಿ ತಟ್ಟಿದೆ ಎಂಬ ಸಂಗತಿ ಹೊರಬಿದ್ದಿದೆ. ವಿಶ್ವಹಿಂದೂ ಪರಿಷತ್ ಸಂಗ್ರಹಿಸಿಕೊಟ್ಟ ಒಟ್ಟು ಚೆಕ್ ಗಳ ಪೈಕಿ 15 ಸಾವಿರ ಚೆಕ್ ಬೌನ್ಸ್ ಆಗಿದ್ದು, 22 ಕೋಟಿ ಹಣ ನಿಧಿಗೆ ಸಿಗದಂತಾಗಿದೆ.

ವಿಶ್ವಹಿಂದೂ ಪರಿಷತ್   ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿಕೊಟ್ಟಿದ್ದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಈಗ ಸಂಗ್ರಹವಾದ ಹಣದ ಪೈಕಿ 22 ಕೋಟಿ ರೂಪಾಯಿ ಬಳಕೆಗೆ ಸಿಗದಂತಾಗಿದೆ. 15 ಸಾವಿರ ಚೆಕ್ ಗಳು ಹಣದಕೊರತೆ, ಸ್ಪೆಲ್ಲಿಂಗ್ ಮಿಸ್ಟೆಕ್, ತಾಂತ್ರಿಕ ಸಮಸ್ಯೆಯಿಂದ ರಿಜೆಕ್ಟ್ ಆಗಿದೆ.

ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಲೆಕ್ಕ ಪರಿಶೋಧನಾ ಸಮಿತಿ ಪರಿಶೀಲನೆ ವೇಳೆ ಈ ಸಂಗತಿ ಹೊರಬಿದ್ದಿದೆ.

ಜನವರಿ 15 ರಿಂದ ಆರಂಭವಾಗಿದ್ದ ದೇಣಿಗೆ ಸಂಗ್ರಹದಲ್ಲಿ  ವಿಶ್ವಹಿಂದೂಪರಿಷತ್ ದೇಶದ ಎಲ್ಲ ಭಾಗಗಳಲ್ಲೂ ಮನೆ ಮನೆಗೆ ತೆರಳಿ  ಹಣ ಸಂಗ್ರಹಿಸಿತ್ತು. ಕೆಲವೆಡೆ ಸ್ಥಳೀಯ ಶಾಸಕರೇ ಮುಂದೇ ನಿಂತು ಹಣ ಸಂಗ್ರಹಿಸಿಕೊಟ್ಟು ದಾಖಲೆ ನಿರ್ಮಿಸಿದ್ದರು.

Comments are closed.