ಆಧ್ಯಾತ್ಮಕ್ಕೆ ಹೊರಳಿದ ಗಂಡ-ಹೆಂಡತಿ ಬೆಡಗಿ…! ನಮಾಜ್ ಮಾಡಲು ಕಲಿತಿದ್ದಾರಂತೆ ಸಂಜನಾ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಪ್ರಕರಣ ಚಾರ್ಜಶೀಟ್ ಹಂತದಲ್ಲಿರೋದರಿಂದ ಸಂಜನಾ ಮತ್ತೆ ಸಾಮಾಜಿಕ ಬದುಕಿಗೆ ಮರಳಿದ್ದು, ಇತ್ತೀಚಿಗೆ ನನಗೆ ಆಧ್ಯಾತ್ಮದಲ್ಲಿ ಆಸಕ್ತಿ ಮೂಡಿದೆ. ಧರ್ಮ-ಕರ್ಮದಲ್ಲಿ ನಂಬಿಕೆ ಮೂಡುತ್ತಿದೆ. ನಮಾಜ್ ಮಾಡೋದನ್ನು ಕಲಿಯುತ್ತಿದ್ದೇನೆ ಎನ್ನುವ ಮೂಲಕ ತಮ್ಮ ಹೊಸದಿನಚರಿ ಬಿಚ್ಚಿಟ್ಟಿದ್ದಾರೆ.

ನಟಿ ಸಂಜನಾ ಗಲ್ರಾನಿ ಸ್ಯಾಂಡಲ್ ವುಡ್ ನ ಹಲವು ಚಿತ್ರಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾದವರು. ಆದರೆ ಸಂಜನಾ ಸದ್ದಿಲ್ಲದೇ ಇಸ್ಲಾಂಗೆ ಮತಾಂತರ ಆಗಿದ್ದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಅತ್ತ ಸಂಜನಾ ಜೈಲು ಸೇರಿದ್ದರೇ, ಇತ್ತ ಮಾಧ್ಯಮಗಳ ಮೂಲಕ ಸಂಜನಾ ಇಸ್ಲಾಂಗೆ ಮತಾಂತರಗೊಂಡಿದ್ದು ಹಾಗೂ ಮದುವೆಯಾದ ಸಂಗತಿ ಬೆಳಕಿಗೆ ಬಂದಿತ್ತು.

ಜೈಲಿನಿಂದ ಹೊರಬಂದ ಬಳಿಕ ಸಂಜನಾ ನ್ಯಾಯಾಲಯಕ್ಕೆ ಬುರ್ಖಾ ಧರಿಸಿ ಹಾಜರಾಗಿದ್ದು, ಈ ಸಂಗತಿಯನ್ನು ಧೃಡಿಕರಿಸಿತ್ತು. ಇದೀಗ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಮಾಧ್ಯಮಗಳಿಗೆ ಮರಳಿರುವ ಸಂಜನಾ, ಯುಗಾದಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಆಧ್ಯಾತ್ಮಮುಖಿಯಾಗಿ ಮಾತನಾಡಿದ್ದಾರೆ.

ಅಷ್ಟೇ ಅಲ್ಲ ಇಸ್ಲಾಂಗೆ ಮತಾಂತರವಾಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಸಂಜನಾ, ಧರ್ಮ ಬದಲಾವಣೆ ನನ್ನ ವೈಯಕ್ತಿಕ ಆಯ್ಕೆ. ಇದು ರಾಜಕೀಯ ಅಥವಾ ಬೇರೆಯವರ ಚರ್ಚೆಯ ಸಂಗತಿಯಲ್ಲ. ನನಗೆ ಇಸ್ಲಾಂ ಧರ್ಮ ಆಕರ್ಷಣಿಯ ಎನ್ನಿಸಿತು, ಸ್ವೀಕರಿಸಿದ್ದೇನೆ. ಈಗ ನಮಾಜ್ ಮಾಡುವುದನ್ನು ಕಲಿಯುತ್ತಿದ್ದೇನೆ.

ಜೈಲಿನಿಂದ ಹೊರಬಂದ ಮೇಲೆ ನನಗೆ ಆಧಾತ್ಮ ಹಾಗೂ ಧರ್ಮ,ಕರ್ಮದ ಮೇಲೆ ನಂಬಿಕೆ ಬಂದಿದೆ. ಹೀಗಾಗಿ ಕುರಾನ್ ಅಧ್ಯಯನ ಮಾಡುತ್ತಿದ್ದೇನೆ ಎಂದಿದ್ದಾರೆ. ಫಿಟ್ ನೆಸ್ ಗೂ ವಿಶೇಷ ಗಮನ ನೀಡುತ್ತಿದ್ದೇನೆ. ಉಪವಾಸ ಆರಂಭಿಸಿದ್ದೇನೆ. ಹೀಗಾಗಿ ಸಂಜೆ ವರ್ಕೌಟ್ ನಡೆಸಿ ಶೀಘ್ರದಲ್ಲೇ ಫುಲ್ ಟೈಂ ನಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜನಾ ಮತ್ತೆ ಸಾರ್ವಜನಿಕ ಬದುಕಿಗೆ ಮರಳಿದ್ದು, ನಡೆದಿದ್ದೆಲ್ಲ ಒಂದು ಕೆಟ್ಟ ಕನಸು ಎಂಬಂತೆ ಪ್ರಕರಣವನ್ನುಹಿಂದೆ ಬಿಟ್ಟು ಮುಂದೇ ಸಾಗುವ ಹಾದಿಕಂಡುಕೊಂಡಿದ್ದಾರಂತೆ. ಅಷ್ಟೇ ಅಲ್ಲ ಹೊಸ ಸಿನಿಮಾಗಳ ಮೂಲಕ ಮತ್ತೆ ಅಭಿಮಾನಿಗಳಿಗೆ ಸಪ್ರೈಸ್ ನೀಡಲಿದ್ದಾರಂತೆ.  

Comments are closed.