Water Politics : 33 ಕೋಟಿ ಅನುದಾನ ಒದಗಿಸಿದ ಮಾಜಿ ಸಚಿವನಿಗೆ ನೋ ಎಂಟ್ರಿ..!

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕನಸಿನ ಕೂಸಾಗಿರುವ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದ್ದು ನಾಳೆ ಉದ್ಘಾಟನೆಗೊಳ್ಳಲಿದೆ. ತಾನು ಸಚಿವನಾಗಿದ್ದ ವೇಳೆಯಲ್ಲಿ 33 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುದಾನ ಒದಗಿಸಿದ್ದ ಮಾಜಿ ಸಚಿವರಿಗೆ ಯೋಜನೆಯ ಕಾಮಗಾರಿ ವೀಕ್ಷಣೆಗೆ ತಡೆಯೊಡ್ಡಿರುವ ಘಟನೆ ನಡೆದಿದೆ.

ಮಾಜಿ‌ ಸಚಿವ ಬಿ.ರಮಾನಾಥ ರೈ ಅವರು ತಾನು ಸಚಿವರಾಗಿದ್ದ ವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿಸಿಕೊಂಡಿದ್ದರು. ಸುಮಾರು 33.15 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯೂ ಪೂರ್ಣಗೊಂಡಿದೆ. ಈ ಯೋಜನೆಯ ಮೂಲಕ ಬಂಟ್ವಾಳ ತಾಲೂಕಿನ ಹಲವು ಗ್ರಾಮಗಳಲ್ಲಿನ ನೀರಿನ ಸಮಸ್ಯೆಗೆ ಮುಕ್ತಿ ದೊರಕಲಿದೆ. ನೀರಿನ ಶುದ್ದೀಕರಣ ಘಟಕವನ್ನು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ.

ತನ್ನ ಕನಸು ನನಸಾಗೋ ಹೊತ್ತಲ್ಲಿ, ಶುದ್ದೀಕರಣ ಘಟಕ ವೀಕ್ಷಣೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್ ಸೇರಿದಂತೆ ಅವರು ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ತೆರಳಿದ್ದರು.

ಆದರೆ ಯೋಜನೆಯ ವೀಕ್ಷಣೆಗೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಅಲ್ದಲೇ ಶುದ್ದ ನೀರಿನ ಘಟಕದ ಗೇಟ್ ಗೆ ಬೀಗ ಹಾಕಲಾಗಿತ್ತು. ಬೀಗ ತೆಗೆದು ಘಟಕ ಪರಿಶೀಲನೆಗೆ ಅವಕಾಶ ಕೇಳಿದ್ರೂ ಕೂಡ ಇಂಜಿನಿಯರ್ ಅವಕಾಶ ನೀಡಲಿಲ್ಲ. ಆದರೂ ಘಟಕ ವೀಕ್ಷಣೆಗೆ ಮುಂದಾದ ವೇಳೆಯಲ್ಲಿ ಪೊಲೀಸರು ತಡೆಯೊಡ್ಡಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆಯೇ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಂತರದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಹಲವು ಮುಖಂಡರು ವಾಪಾಸಾಗಿದ್ದಾರೆ. ಗ್ರಾಮದ ಜನರ ನೀರಿನ ದಾಹ ನೀಗಿಸಲು ಅನುದಾನ ತಂದ ಮಾಜಿ ಸಚಿವರಿಗೆ ಘಟಕ ವೀಕ್ಷಣೆಗೆ ತೊಡೆಯೊಡ್ಡಿರುವ ಎಷ್ಟು ಸರಿ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ವ್ಯಾಪಕ ಚರ್ಚೆ ನಡೆಯುತ್ತಿದೆ.

Comments are closed.