ಸ್ವಲ್ಪ ಸಮಯಕೊಡಿ ವಿವರವಾಗಿ ಮಾತಾಡ್ತಿನಿ….! “ಸಸ್ಪೆನ್ಸ್” ಬಾಂಬ್ ಸಿಡಿಸಿದ ತುಪ್ಪದ ಬೆಡಗಿ ರಾಗಿಣಿ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಹೊರಬಂದ ತುಪ್ಪದ ಬೆಡಗಿ ರಾಗಿಣಿ ಸಸ್ಪೆನ್ಸ್ ಬಾಂಬ್ ಸಿಡಿಸಿದ್ದಾರೆ. ನ್ಯಾಯಾಲಯದ ವಿಚಾರಣೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿನ ರಾಗಿಣಿ ಸ್ವಲ್ಪ ಟೈಂ ಕೊಡಿ. ಉಸಿರಾಡಲು ಅವಕಾಶ ಕೊಡಿ. ಆಮೇಲೆ ವಿವರವಾಗಿ ಮಾತಾಡ್ತೀನಿ ಎಂದಿದ್ದಾರೆ.

ಸೋಮವಾರ ಸುಪ್ರೀಂ ಕೋರ್ಟ್ ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ರಾಗಿಣಿ, ಜೈಲಿನಿಂದ ಹೊರಬರುತ್ತಿದ್ದಂತೆಯೂ ಮಾಧ್ಯಮಗಳ ಎದುರು ವಿವರಾದ ಸುದ್ದಿಗೋಷ್ಠಿ ನಡೆಸುವ ಭರವಸೆ ನೀಡಿದ್ದರು. ಜೈಲಿನಿಂದ ಹೊರಬಂದ ಎರಡು ದಿನಗಳ   ಕಾಲ ಮನೆಯಲ್ಲೇ ವಿಶ್ರಾಂತಿ ಪಡೆದ ರಾಗಿಣಿ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಶನಿವಾರ ಎನ್ಡಿಪಿಎಸ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದ ರಾಗಿಣಿ ನ್ಯಾಯಾಲಯಕ್ಕೆ ತೆರಳುವ ವೇಳೆ ಆಕೆಯ ತಂದೆ ಜೊತೆಗಿದ್ದರು.  ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ, ನಾನು ಮುಗ್ಧೆ. 12 ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದೇನೆ. ನಾನೇನು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ಒಗಟಿನಂತೆ ಮಾತನಾಡಿದ ರಾಗಿಣಿ ನನಗೊಂದಿಷ್ಟು ಕಾಲಾವಕಾಶ ನೀಡಿ. ಬಳಿಕ  ಈ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ನನಗೆ ಕಾನೂನಿನಲ್ಲಿ ನಂಬಿಕೆ ಇದೆ. ಹೀಗಾಗಿ ಸುಮ್ಮನಿದ್ದೇನೆ. ಸಧ್ಯದಲ್ಲೇ ವಿವರಗಳ ಜೊತೆ ನಿಮ್ಮ ಜೊತೆ ಮಾತನಾಡುತ್ತೇನೆ ಎಂದರು.

ಮೂಲಗಳ ಮಾಹಿತಿ ಪ್ರಕಾರ ರಾಗಿಣಿ, ಈಗಾಗಲೇ ವಕೀಲರೊಂದಿಗೆ ಸಮಾಲೋಚನೆ ನಡೆಸಿದ್ದು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ಬಿಚ್ಚಿಡುವ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಜಾಮೀನಿನ ಮೇಲೆ ಹೊರಬಂದಿರೋ ನಟಿ ರಾಗಿಣಿ ಯಾವುದೇ ಕಾನೂನು ನಿಯಮಗಳನ್ನು ಉಲ್ಲಂಘಿಸಿದರೂ ಮತ್ತೆ ಜೈಲುಪಾಲಾಗುವ ಸಾಧ್ಯತೆ ಇದೆ.

ಹೀಗಾಗಿ ಸುದ್ದಿಗೋಷ್ಠಿಯಲ್ಲಿ ಯಾವೆಲ್ಲ ವಿಚಾರ ಮಾತನಾಡಬೇಕು? ಸುದ್ದಿಗೋಷ್ಠಿ ನಡೆಸಬಹುದೇ? ಎಂಬೆಲ್ಲ ವಿಚಾರಗಳ ಬಗ್ಗೆ ಕಾನೂನು ಸಲಹೆ ಪಡೆಯುತ್ತಿದ್ದು, ಆ ಬಳಿಕವಷ್ಟೇ ತನಗೆ ಗೊತ್ತಿರುವ ಸಂಗತಿಗಳನ್ನು ಹಂಚಿಕೊಳ್ಳಲು ರಾಗಿಣಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ನ್ಯಾಯಾಲಯಕ್ಕೆ ರಾಗಿಣಿ ಜೊತೆ ಇನ್ನೊರ್ವ ಆರೋಪಿತೆ ನಟಿ ಸಂಜನಾ ಗಲ್ರಾನಿ ಕೂಡ ವಿಚಾರಣೆಗೆ ಹಾಜರಾಗಿದ್ದರು. ಸಂಜನಾ ಹಾಗೂ ರಾಗಿಣಿ ಪರಸ್ಪರ ಹಗ್ ಮಾಡಿಕೊಳ್ಳುವ ಮೂಲಕ ಮುಖಾಮುಖಿಯಾದ ಒಬ್ಬರನ್ನೊಬ್ಬರು ಮಾತನಾಡಿಸಿದ್ದಾರೆ. ಒಟ್ಟಿನಲ್ಲಿ ಜೈಲಿನಿಂದ ಹೊರಬಂದ ರಾಗಿಣಿ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಕೈಬಿಟ್ಟ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ ಎನ್ನಲಾಗುತ್ತಿದೆ.

Comments are closed.