BBMP Budget 2023: ನಾಳೆ ಬಿಬಿಎಂಪಿ ಬಜೆಟ್‌ ಮಂಡನೆ: ಹಲವು ಅಭಿವೃದ್ದಿ ಯೋಜನೆಗಳ ಘೋಷಣೆ ಸಾಧ್ಯತೆ

ಬೆಂಗಳೂರು: (BBMP Budget 2023) ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬೆಂಗಳೂರು ಟ್ರಾಫಿಕ್ ಸಮಸ್ಯೆಗಳ ನಡುವೆ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಾಳೆ ಬಜೆಟ್ ಮಂಡಿಸಲು ಸಿದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳನ್ನು ಮಂಡಿಸಿರುವ ಬಿಜೆಪಿ, ಇದೀಗ ಬೆಂಗಳೂರಿಗರನ್ನು ಒಲಿಸಿಕೊಳ್ಳಲು ಬಿಬಿಎಂಪಿ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸುವ ನಿರೀಕ್ಷೇಯಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಬಜೆಟ್ ಮಂಡಿಸಲಿದ್ದು, ಬಜೆಟ್ ಮಂಡನೆ ಆನ್‌ಲೈನ್‌ನಲ್ಲಿ ಸ್ಟ್ರೀಮ್ ಆಗುವುದರಿಂದ ಸಾರ್ವಜನಿಕರು ಕೂಡ ಬಜೆಟ್ ಮಂಡನೆಯನ್ನು ನೇರವಾಗಿ ವೀಕ್ಷಿಸಬಹುದು. ಕಳೆದ ಬಾರಿ ಮಧ್ಯ ರಾತ್ರಿಯಲ್ಲಿ ವೆಬ್‌ ಸೈಟ್‌ ಮೂಲಕ ಬಿಬಿಎಂಪಿ ಬಜೆಟ್‌ ಘೋಷಣೆ ಮಾಡಿದ್ದು, ಈ ಬಾರಿ ಗುರುವಾರ ಬೆಳಿಗ್ಗೆ ಅಂದರೆ ನಾಳೆ ಬಜೆಟ್‌ ಮಂಡಿಸಲಿದೆ. ಈ ಬಾರಿ ಬಿಬಿಎಂಪ ಯಿಂದ ನಗರದ ಜನರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದೆ.

ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಒತ್ತು ನೀಡುವುದರ ಜೊತೆಗೆ ಆಸ್ತಿ ತೆರಿಗೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಕೂಡ ಇದೆ. ಇನ್ನೂ ಕಳೆದ ವರ್ಷದ ಕೆಲವು ಯೋಜನೆಗಳನ್ನು ಹಾಗೇ ಮುಂದುವರಿಸಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಸಂಘ ಸಂಸ್ಥೆಗಳಿಗೆ ನಿಗಮದಿಂದ ಮೀಸಲಿಟ್ಟ ಅನುದಾನ ಕುಗ್ಗಲಿದೆ ಎಂದು ಮೂಲಗಳು ಸೂಚಿಸಿವೆ. ಬೀದಿ ದೀಪಗಳು, ರಸ್ತೆಗಳು ಮತ್ತು ಇತರ ನಾಗರಿಕ ಸೌಕರ್ಯಗಳಿಗೆ ಮೀಸಲಿಡುವುದನ್ನು ಹೊರತುಪಡಿಸಿ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಗಮನಹರಿಸುತ್ತದೆ. ಬಜೆಟ್ ಗಾತ್ರವು ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿದಂತೆಯೇ ಇರುತ್ತದೆ. ಬಿಬಿಎಂಪಿ ಈ ವರ್ಷ 9,000 ಕೋಟಿ ರೂಪಾಯಿಗಳ ಬಜೆಟ್ ಮಂಡಿಸುವ ನಿರೀಕ್ಷೆ ಇದೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಐಬಿಸಿ ನಾಲೆಡ್ಜ್ ಪಾರ್ಕ್‌ ನಲ್ಲಿ ಟೈಗರ್ 5 ಸ್ಪೋರ್ಟ್ಸ್ ನ ಹೊಸ ಸೌಲಭ್ಯ ಪ್ರಾರಂಭ

ಇದನ್ನೂ ಓದಿ : BBMP Budget: ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್‌: ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ

ಪ್ರಸಕ್ತ ವರ್ಷದಲ್ಲಿ ಕಸ ವಿಲೇವಾರಿಗೆ ಮಹತ್ವ ನಿಡಲು ನಿರ್ಧರಿಸಲಾಗಿದೆ. ಈ ವರ್ಷ ಕಸ ವಿಲೇವಾರಿಗೆ ಕಳೆದ ವರ್ಷಗಳಗಿಂತ ಅತಿ ಹೆಚ್ಚು ಅನುದಾನ ಹಂಚಿಕೆಯಾಗುವ ಸಾಧ್ಯತೆ ಇದೆ. ಆದರೆ, ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಕೆರೆಗಳು, ಕಾಲುವೆಗಳು, ಉದ್ಯಾನವನಗಳ ಉನ್ನತೀಕರಣಕ್ಕೂ ಬಜೆಟ್‌ನಲ್ಲಿ ಆದ್ಯತೆ ಸಿಗಲಿದೆ.

BBMP Budget 2023: BBMP budget presentation tomorrow: Many development projects are likely to be announced

Comments are closed.