ಬಿಬಿಎಂಪಿ ಬಜೆಟ್ 2023 : ಯಾವುದಕ್ಕೆ ಎಷ್ಟು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಮುನ್ನ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP Budget 2023) 2023-24ನೇ ಸಾಲಿನ ಬಜೆಟ್‌ನ್ನು ಇಂದು ಗುರುವಾರ (ಮಾರ್ಚ್‌ 2) ರಂದು 11.30ಕ್ಕೆ ಮಂಡಿಸಲಾಗುತ್ತಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತ ತುಶೀರ್ ಗಿರಿನಾಥ್ ಅವರ ಸಮ್ಮುಖದಲ್ಲಿ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ ಬಹು ನಿರೀಕ್ಷಿತ ಬಜೆಟ್‌ನ್ನು ಮಂಡಿಸಿದ್ದಾರೆ. ಇತ್ತೀಚೆಗೆ ರಾಜ್ಯ ಬಜೆಟ್‌ನಲ್ಲಿ ಈಗಾಗಲೇ ಘೋಷಿಸಿರುವ ಸರಕಾರದ ಆರು ಕೋಟಿ ಅನುದಾನವೂ ಇದರಲ್ಲಿ ಸೇರಿದ್ದು, ಒಟ್ಟು 11 ಸಾವಿರ ಕೋಟಿ ಬಜೆಟ್‌ನ್ನು ಮಂಡಿಸಿದ್ದಾರೆ.

ಚುನಾಯಿತ ಬಿಬಿಎಂಪಿ ಕೌನ್ಸಿಲ್ ಇಲ್ಲದೆ ಬಜೆಟ್ ಮಂಡಿಸುತ್ತಿರುವುದು ಇದು ಮೂರನೇ ವರ್ಷ. ಈ ವರ್ಷದ ಬಜೆಟ್ ಮಳೆನೀರು ಚರಂಡಿಗಳು, ರಸ್ತೆಗಳು, ಶಿಕ್ಷಣ, ಆರೋಗ್ಯ ಮತ್ತು ವಿವಿಧ ಕಲ್ಯಾಣ ಕಾರ್ಯಗಳು ಸೇರಿದಂತೆ ವಿವಿಧ ನಾಗರಿಕ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಲಾಗಿದೆ. ಬಿಬಿಎಂಪಿ ಬಜೆಟ್ ಅನ್ನು ಟೌನ್ ಹಾಲ್‌ನಲ್ಲಿ ಮಂಡಿಸಲಾಗಿದೆ. ಈ ಬಾರೀ ಬಿಬಿಎಂಪಿ 2023-24ನೇ ಸಾಲಿನ ಬಜೆಟ್‌ನಲ್ಲಿ ಈ ಕೆಳಗಿನವುಗಳಿಗೆ ಅನುದಾನವನ್ನು ನೀಡಲಾಗಿದೆ.

ಬಿಬಿಎಂಪಿ 2023-24ನೇ ಸಾಲಿನ ಬಜೆಟ್‌ ಅನುದಾನ ವಿವರ :

  • ಇಂದಿರಾ ಕ್ಯಾಂಟೀನ್‌ಗೆ ಹಣ 50 ಕೋಟಿ ಅನುದಾನ
  • ವಸತಿ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಾಣ
  • ಶ್ರವಣ ಕುಮಾರ ಹೆಸರಿನಲ್ಲಿ ನಿರಾಶ್ರಿತ ವೃದ್ಧರಿಗೆ ವಸತಿ ವ್ಯವಸ್ಥೆ
  • ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ಹಂಚಿಕೆಯ ಕ್ರಮ
  • ಪ್ರವಾಹ ತಡೆಗೆ ಚರಂಡಿ ಅಭಿವೃದ್ಧಿಗಾಗಿ 1800 ಕೋಟಿ ಅನುದಾನ
  • ಕೆರೆಗಳಿಗೆ ತಡೆ ಗೇಟ್. ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿಗೆ 273 ಕೋಟಿ
  • ಪ್ರಮುಖ 74 ಜಂಕ್ಷನ್ ಅಭಿವೃದ್ಧಿಗೆ 150 ಕೋಟಿ ರು ಮೀಸಲಾತಿ
  • ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ 350 ಕೋಟಿ ರೂ. ವೆಚ್ಚದಲ್ಲಿ 5 ಕಿಮೀ ಎಲಿವೇಟೆಡ್ ರಸ್ತೆ
  • 110 ಗ್ರಾಮಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳ ಪುನರ್ ನಿರ್ಮಾಣಕ್ಕೆ 300 ಕೋಟಿ ರೂ
  • ಪ್ರತಿ ವಾರ್ಡಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ
  • ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಜಾರಿ
  • ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೂ ಕೋಟಿ ಕೋಟಿ ಅನುದಾನ
  • ಈ ಬಾರಿಯ ಬಜೆಟ್ ನಲ್ಲೂ ಪಾಲಿಕೆಯಿಂದ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ
  • ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಹೆಚ್ಚಿನ ಒತ್ತು
  • ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ “ಸುರಕ್ಷಿತ ನಗರ ಯೋಜನೆ”
  • ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ಸ್ತ್ರೀ ಶೌಚಾಲಯ ನಿರ್ಮಾಣ

ಇದನ್ನೂ ಓದಿ : BBMP Budget 2023: ನಾಳೆ ಬಿಬಿಎಂಪಿ ಬಜೆಟ್‌ ಮಂಡನೆ: ಹಲವು ಅಭಿವೃದ್ದಿ ಯೋಜನೆಗಳ ಘೋಷಣೆ ಸಾಧ್ಯತೆ

ಇದನ್ನೂ ಓದಿ : ಬೆಂಗಳೂರಿನ ಐಬಿಸಿ ನಾಲೆಡ್ಜ್ ಪಾರ್ಕ್‌ ನಲ್ಲಿ ಟೈಗರ್ 5 ಸ್ಪೋರ್ಟ್ಸ್ ನ ಹೊಸ ಸೌಲಭ್ಯ ಪ್ರಾರಂಭ

ಇದನ್ನೂ ಓದಿ : BBMP Budget: ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್‌: ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ

ಈ ಬಾರಿಯ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಆಸ್ತಿ ತೆರಿಗೆ ಹೊರೆ ಇರುವುದಿಲ್ಲ. ಚುನಾವಣೆ ದೃಷ್ಟಿಯಿಂದ ಆಸ್ತಿ ತೆರಿಗೆ ಏರಿಕೆ ಮಾಡದಂತೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆ ಬಗ್ಗೆ ಗಮನಿಸಿ ಅದಕ್ಕೆ ಪೂರಕವಾದ ಬಜೆಟ್‌ನಲ್ಲಿ ಅನುದಾನವನ್ನು ನೀಡಿದ್ದಾರೆ.

BBMP Budget 2023: How much for what? Here are complete details

Comments are closed.