ತುಳುನಾಡು ಕ್ರಿಕೆಟ್‌ ಲೀಗ್‌ : ಅರಬ್‌ ದೇಶದಲ್ಲಿ ಕನ್ನಡಿಗರ ಕ್ರಿಕೆಟ್‌ ಹಬ್ಬ

ಉಡುಪಿ : ಕ್ರಿಕೆಟ್‌ ಅಂದರೆ ಹಳ್ಳಿಯಿಂದ ಹಿಡಿದು ದಿಲ್ಲಿವರೆಗೂ ಫ್ಯಾನ್ಸ್‌ ಇದ್ದಾರೆ. ಕ್ರಿಕೆಟ್‌ ಎಂದರೆ ಒಂದಷ್ಟು ಜನರಿಗೆ ಜೀವಾಳವೂ ಆಗಿದೆ. ತಮ್ಮ ಹೊಟ್ಟೆ ಪಾಡಿಗಾಗಿ ದುಡಿಮೆಯನ್ನು ಅರಸಿ ದೂರದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಕ್ರಿಕೆಟ್‌ ಪ್ರೀತಿಯಿಂದ ವಂಚಿತರಾಗಿಲ್ಲ. ದೂರದ ದೇಶದಲ್ಲಿ ತಮ್ಮ ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ಕನ್ನಡಿಗರು, ತಮ್ಮ ದಿನನಿತ್ಯದ ಒತ್ತಡದ ಕೆಲಸದ ನಡುವೆಯೂ ಕೂಡ ಕನ್ನಡಿಗರು ತಮ್ಮನ್ನು ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮಾರ್ಚ್‌ 5ರಂದ ತುಳುನಾಡು ಕ್ರಿಕೆಟ್‌ ಲೀಗ್‌ (Tulunadu Cricket League), ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಲಿದ್ದಾರೆ.

ಇದೇ ಮಾರ್ಚ್‌ 5ರಂದು ರೇಂಜರ್ ಜನರಲ್ ಟ್ರಾನ್ಸ್ಪೋರ್ಟ್ ಎಲ್ ಎಲ್ ಸಿ, ಯೇಸ್ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಷನ್ ಎಲ್ ಎಲ್ ಸಿ ಗ್ಲಾಡಿಯೇಟರ್ ಕ್ಲಬ್ ಸಹಯೋಗದಲ್ಲಿ ಯುಎಇ ರಾಷ್ಟ್ರದ ಅಜ್ಮನ್ ರಾಯಲ್ ಕ್ರಿಕೆಟ್ ಗ್ರೌಂಡ್ಸ್ ಇಲ್ಲಿ ಹತ್ತು ತಂಡಗಳ ಲೀಗ್ ಕಮ್ ನಾಕೌಟ್ ಮಾದರಿಯ ಒಂದು ದಿನದ ಟೆನ್ನಿಸ್ ಬಾಲ್‌ ಕ್ರಿಕೆಟ್‌ (TennisBall Cricket Tournament) ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡಗಳ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

ತಂಡಗಳ ವಿವರ :
ಟೀಮ್ ಎಲಿಗಂಟ್ ಮಂಗಳೂರು, ವರಾಹ ರೂಪ ಮಂಗಳೂರು, ಟೀಮ್ ಎಕ್ಸ್ಪರ್ಟ್ ದಾಫ್ಜ, ಹೀಟ್ ಶೀಲ್ಡ್ ಗ್ಲಾಡಿಯೇಟರ್, ವಿದ್ ಒನ್ ಕಟೀಲ್, ರೇಂಜರ್ಸ್, ಉಡುಪಿ ಫ್ರೆಂಡ್ಸ್, ನವೀನ್ XI, ಕರ್ಮರ್ ಡಿ ಜೆ ಚಾಲೆಂಜರ್ಸ್, ದುಬೈ ಇಂಡಿಯನ್ಸ್.

ತಂಡಗಳ ಪ್ರಮುಖರು :

  • ದುಬೈ ಇಂಡಿಯನ್ಸ್‌ : ಮಾಲೀಕರು- ಅನೀಶ್‌, ಮ್ಯಾನೇಜರ್‌ : ಗಜ ಪೂಜಾರಿ, ಐಕಾನ್‌ ಆಟಗಾರರು: ಸುಖೇಶ್‌ ಭಂಡಾರಿ ಮತ್ತು ಪ್ರವೀಣ್‌ ಆಚಾರ್ಯ.
  • ರೇಂಜರ್ಸ್‌ : ತಂಡದ ಮಾಲೀಕರು: ಉದಯ ಶೆಟ್ಟಿ. ತಂಡದ ಮ್ಯಾನೇಜ್‌ ಪ್ರಶಾಂತ್‌ ಶೆಟ್ಟಿ, ಐಕಾನ್‌ ಆಟಗಾರರು ವಿಶ್ವ ಕಾಂತ್‌ ಹಾಗೂ ಪ್ರದೀಪ್‌.
  • ವಿದ್‌ ಒನ್‌ ಕಟೀಲ್‌: ಮಾಲೀಕರು ವಿದ್ಯಾನಂದ ಶೆಟ್ಟಿ, ಮ್ಯಾನೇಜರ್‌; ಜೀವನ್‌ ಶೆಟ್ಟಿ, ಐಕಾನ್‌ ಆಟಗಾರರು: ಅಶ್ರಫ್‌ ಮತ್ತು ಹಮ್ದಾನ್‌.
  • ಕರ್ಮರ್ ಡಿಜೆ ಚಾಲೆಂಜರ್ಸ್‌: ಮಾಲೀಕರು- ದೀಪಕ್‌ ಪೂಜಾರಿ, ಮ್ಯಾನೇಜರ್‌: ದಿವಿತ್‌ ದೀಪಕ್‌, ಐಕಾನ್‌ ಆಟಗಾರರು: ವಿನಯ್‌ ಪೂಜಾರಿ, ಸ್ವರೂಪ್‌ ರೈ.
  • ಹೀಟ್‌ ಶೀಲ್ಡ್‌ ಶಿಮಂತೂರು ಗ್ಲಾಡಿಯೇಟರ್ಸ್‌: ಮಾಲೀಕರು-ಪ್ರೇಮನಾಥ್‌ ಶೆಟ್ಟಿ, ಮ್ಯಾನೇಜರ್‌ ವಿವೇಕ್‌ ಶೆಟ್ಟಿ, ಐಕಾನ್‌ ಆಟಗಾರರು: ಶಿವಪ್ರಸಾದ್‌ ಶೆಟ್ಟಿ, ಸೂರ್ಯಕಾಂತ್‌.
  • ನವೀನ್‌ XI: ತಂಡದ ಮಾಲೀಕರು ಇಮ್ರಾನ್‌, ಮ್ಯಾನೇಜರ್‌ ನವೀನ್‌, ಐಕಾನ್‌ ಆಟಗಾರರು: ರೊವೆಲ್‌ ಮತ್ತು ರೋಹನ್‌.
  • ಉಡುಪಿ ಫ್ರೆಂಡ್ಸ್:‌ ಮಾಲೀಕರು ನವಾಜ್‌, ಮ್ಯಾನೇಜರ್‌: ಫಿರೋಜ್, ಐಕಾನ್‌ ಆಟಗಾರರು: ಶಾಬುದ್ದೀನ್‌ ಮತ್ತು ನವಾಜ್‌ ಎಸ್‌.
  • ಟೀಮ್‌ ಎಲಿಗಂಟ್‌ ಮಂಗಳೂರು: ಮಾಲೀಕರು-ಖಾದರ್‌ ಶರೀನ್‌, ಮ್ಯಾನೇಜರ್‌ ಶಕೀರ್‌, ಐಕಾನ್‌ ಆಟಗಾರರು: ಸಮ್ಸು, ಸಫೌನ್‌.
  • ಟೀಮ್‌ ಎಕ್ಸ್‌ಫರ್ಟ್‌ ಡಾಫ್ಜಾ: ಮಾಲೀಕರು ಶೇಖ್‌ ಮೊಹಮ್ಮದ್‌ ಸುಹೈಲ್‌, ಫೈಜ್‌ ಕಾಪು ಮ್ಯಾನೇಜರ್‌, ಮೊಹಮ್ಮದ್‌ ಆಸೀರ್‌ ಹಾಗೂ ಶೆಹಜಾನ್‌ ಅಹಮ್ಮದ್‌ ಐಕಾನ್‌ ಆಟಗಾರರು.
  • ವರಹಾ ರೂಪ ಮಂಗಳೂರು: ಮಾಲೀಕರು ಪ್ರವೀಣ್‌ ಶೆಟ್ಟಿ, ಮ್ಯಾನೇಜರ್‌ ಸುನೀಲ್‌ ಶೆಟ್ಟಿ, ಐಕಾನ್‌ ಆಟಗಾರರು ಧೀಜರ್‌ ಪೂಜಾರಿ ಮತ್ತು ಮಿತುನ್‌ ಶೆಟ್ಟಿ.

ಇದನ್ನೂ ಓದಿ : Michael Clarke backs KL Rahul : “ನಾನು ಕ್ಯಾಪ್ಟನ್ ಆಗಿದ್ದಿದ್ರೆ ಕೆ.ಎಲ್ ರಾಹುಲ್‌ರನ್ನು ಪ್ಲೇಯಿಂಗ್ XIನಿಂದ ಕೈಬಿಡುತ್ತಿರಲಿಲ್ಲ” ಎಂದ ಆಸೀಸ್ ಮಾಜಿ ನಾಯಕ

ಇದನ್ನೂ ಓದಿ : Japrit Bumrah : ವೇಗಿ ಜಸ್‌ಪ್ರೀತ್ ಬುಮ್ರಾಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ, ಏಳು ತಿಂಗಳು ಕ್ರಿಕೆಟ್‌ನಿಂದ ಔಟ್

ಇದನ್ನೂ ಓದಿ : KL Rahul: ಟೀಮ್ ಇಂಡಿಯಾದಲ್ಲಿ ಬೆಂಚ್ ಕಾಯಿಸುವ ಬದಲು ರಾಹುಲ್ ಅವರನ್ನು ಇರಾನಿ ಕಪ್‌ನಲ್ಲಿ ಆಡಿಸಬಹುದಿತ್ತಲ್ವಾ?

Tulunadu Cricket League: Kannadigas cricket festival in Arab country

Comments are closed.