Michael Clarke backs KL Rahul : “ನಾನು ಕ್ಯಾಪ್ಟನ್ ಆಗಿದ್ದಿದ್ರೆ ಕೆ.ಎಲ್ ರಾಹುಲ್‌ರನ್ನು ಪ್ಲೇಯಿಂಗ್ XIನಿಂದ ಕೈಬಿಡುತ್ತಿರಲಿಲ್ಲ” ಎಂದ ಆಸೀಸ್ ಮಾಜಿ ನಾಯಕ

ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರನ್ನು ಟೀಮ್ ಇಂಡಿಯಾದ ಆಡುವ ಬಳಗದಿಂದ ಕೈ ಬಿಡಲಾಗಿದ್ದು, (Michael Clarke backs KL Rahul ) ಅವರ ಬದಲು ಯುವ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಆಡುತ್ತಿದ್ದಾರೆ. ರಾಹುಲ್ ಬದಲು ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದಿರುವ ಶುಭಮನ್ ಗಿಲ್ ಎರಡೂ ಇನ್ನಿಂಗ್ಸ್’ಗಳಲ್ಲಿ (21 ಮತ್ತು 5 ರನ್) ವಿಫಲರಾಗಿದ್ದಾರೆ.

ರಾಹುಲ್ ಅವರನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಡುವ ಬಳಗದಿಂದ ಕೈಬಿಟ್ಟಿರುವುದಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ (Michael Clarke) ಅಚ್ಚರಿ ವ್ಯಕ್ತಪಡಿಸಿದ್ದಾರೆ. “ನಾನು ನಿಜಕ್ಕೂ ರಾಹುಲ್ ಅವರನ್ನು ಇಷ್ಟ ಪಡುತ್ತೇನೆ. ಅವರೊಬ್ಬರ ಅದ್ಭುತ ಆಟಗಾರ. ಭಾರತ ತಂಡದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 2 ಪಂದ್ಯಗಳನ್ನು ಗೆದ್ದಿದೆ. ನಾನೇನಾದರೂ ಭಾರತ ತಂಡದ ನಾಯಕನಾಗಿರುತ್ತಿದ್ದರೆ ರಾಹುಲ್ ಅವರಿಗಾಗಿ ಫೈಟ್ ಮಾಡುತ್ತಿದ್ದೆ” ಎಂದು ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

“ಭಾರತ ತಂಡ ಗೆಲ್ಲುತ್ತಿದೆ. ರಾಹುಲ್ ಒಳ್ಳೆಯ ಫಾರ್ಮ್’ನಲ್ಲಿ ಇಲ್ಲದೇ ಇರಬಹುದು. ಆದರೆ ಅವರನ್ನು ತಂಡದಲ್ಲಿ ಮುಂದುವರಿಸುವ ಅವಶ್ಯಕತೆಯಿದೆ. ಅವರೊಬ್ಬ ಅತ್ಯುತ್ತಮ ಆಟಗಾರ. ಹೀಗಾಗಿ ಅವರಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬೆಂಬಲ ನೀಡಬೇಕಿತ್ತು. ರೋಹಿತ್ ಶರ್ಮಾ ಅವರ ಜಾಗದಲ್ಲಿ ನಾನಿರುತ್ತಿದ್ದರೆ ರಾಹುಲ್ ಅವರನ್ನು ಪ್ಲೇಯಿಂಗ್ XIನಿಂದ ಕೈಬಿಡಲು ಬಿಡುತ್ತಿರಲಿಲ್ಲ” ಎಂದು 2015ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

ಇದನ್ನೂ ಓದಿ : KL Rahul: ಟೀಮ್ ಇಂಡಿಯಾದಲ್ಲಿ ಬೆಂಚ್ ಕಾಯಿಸುವ ಬದಲು ರಾಹುಲ್ ಅವರನ್ನು ಇರಾನಿ ಕಪ್‌ನಲ್ಲಿ ಆಡಿಸಬಹುದಿತ್ತಲ್ವಾ?

ಇದನ್ನೂ ಓದಿ : Japrit Bumrah : ವೇಗಿ ಜಸ್‌ಪ್ರೀತ್ ಬುಮ್ರಾಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ, ಏಳು ತಿಂಗಳು ಕ್ರಿಕೆಟ್‌ನಿಂದ ಔಟ್

ಇದನ್ನೂ ಓದಿ : India Vs Australia 3rd test : ಸ್ಪಿನ್ ಕೋಟೆಯಲ್ಲಿ ಭಾರತಕ್ಕೆ ಶಾಕ್ ಕೊಟ್ಟ ಕಾಂಗರೂಗಳು, ಮೊದಲ ದಿನವೇ 14 ವಿಕೆಟ್ ಪತನ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜೊತೆ ಕನ್ನಡಿಗ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಆಡಿದ 3 ಇನ್ನಿಂಗ್ಸ್’ಗಳಲ್ಲಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನಾಗ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್’ನಲ್ಲಿ 20 ರನ್ ಗಳಿಸಿ ಔಟಾಗಿದ್ದ ರಾಹುಲ್, ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 17 ರನ್ ಮತ್ತು 1 ರನ್ ಗಳಿಸಿ ಔಟಾಗಿದ್ದರು. ಮೊದಲರೆಡು ಟೆಸ್ಟ್ ಪಂದ್ಯಗಳ ವೈಫಲ್ಯದ ನಂತರ ರಾಹುಲ್ ಅವರನ್ನು ಟೀಮ್ ಇಂಡಿಯಾ ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ 3ನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಪ್ಲೇಯಿಂಗ್ XIನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

Michael Clarke backs KL Rahul: If I was the captain, I would not have dropped KL Rahul from the playing XI,” said the former Aussie captain.

Comments are closed.