ದಕ್ಷಿಣ ಭಾರತ ಚಿತ್ರರಂಗವನ್ನು ಹೊಗಳಿದ ನಿರ್ದೇಶಕ ಅನುರಾಗ್ ಕಶ್ಯಪ್‌

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೂಲಕ ಬಾಲಿವುಡ್‌ ಒಂದು ದೊಡ್ಡ ಹಿಟ್ ಕಂಡಿದೆಯಾದರೂ ಇದು ತಾತ್ಕಾಲಿಕ ಎನ್ನಲಾಗುತ್ತಿದೆ. ಯಾವುದೇ ಗಟ್ಟಿಯಾದ ಸೌತ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪಠಾಣ್’ ಸಿನಿಮಾಕ್ಕೆ ಎದುರು ಇರಲಿಲ್ಲ, ಹಾಗಾಗಿ ‘ಪಠಾಣ್’ ದೊಡ್ಡ ಯಶಸ್ಸನ್ನು ಗಳಿಸಿದೆ. ಒಂದೊಮ್ಮೆ ಯಾವುದಾದರೂ ಗಟ್ಟಿಯಾದ ದಕ್ಷಿಣದ ಸಿನಿಮಾ ‘ಪಠಾಣ್’ ಎದುರು ನಿಂತಿದ್ದರೆ ಈ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಅನುರಾಗ್‌ ಕಶ್ಯಪ್‌ (Anurag Kashyap) ಹೇಳಿದ್ದಾರೆ.

ಇದಕ್ಕೆ ಮುಖ್ಯ ಕಾರಣವೆಂದರೆ, ಬಾಲಿವುಡ್ ಈಗಲೂ ಸಹ ಸ್ವಂತ ಕತೆ ಅಥವಾ ಸಾಮಾನ್ಯ ಜನರಿಗೆ ಹತ್ತಿರವಾದ ಕತೆಗಳನ್ನು ಹೆಣೆಯುವುದರ ಹೊರತಾಗಿ ಹಾಲಿವುಡ್‌ ಅನ್ನು ಕಾಪಿ ಮಾಡುತ್ತಿರುವುದಾಗಿದೆ. ‘ಪಠಾಣ್’ ಸಹ ಹಾಲಿವುಡ್‌ನ ಜನಪ್ರಿಯ ಮಾದರಿ ಸ್ಪೈ ಥ್ರಿಲ್ಲರ್ ಜಾನರ್ ಒಳಗೇ ಬರುವ ಸಿನಿಮಾವಾಗಿದೆ. ಈ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

“ಒಂದು ಸಮಯದಲ್ಲಿ ಭಾರತದ ಸಿನಿಮಾಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇತ್ತು. ಭಾರತದ ‘ಆವಾರ’, ‘ಡಿಸ್ಕೊ ಡ್ಯಾನ್ಸರ್’ ಇನ್ನು ಕೆಲವು ಸಾಮಾನ್ಯರ ಬಗೆಗಿನ ಸಿನಿಮಾಗಳು ವಿಶ್ವದೆಲ್ಲೆಡೆ ಮಾನ್ಯತೆ ಗಳಿಸಿದ್ದವು. ರಷ್ಯಾ, ಆಫ್ರಿಕಾಕ್ಕೆ ಹೋದರೂ ಹಿಂದಿ ಹಾಡುಗಳು ಕೇಳುತ್ತಿದ್ದವು. ಆದರೆ ಬಾಲಿವುಡ್‌ನವರು ಹಾಲಿವುಡ್‌ ಸಿನಿಮಾಗಳನ್ನು ಕಾಪಿ ಮಾಡಲು ಆರಂಭಿಸಿದ ಬಳಿಕ ತಮ್ಮತನ ಕಳೆದುಕೊಂಡರು, ಒರಿಜಿನಾಲಿಟಿ ಕಳೆದುಕೊಂಡರು” ಅನುರಾಗ್ ಕಶ್ಯಪ್ ಎಂದಿದ್ದಾರೆ.

”ಅದೇ ದಕ್ಷಿಣ ಭಾರತ ಸಿನಿಮಾಗಳು ಈಗಲೂ ತಮ್ಮ ನೆಲದ ಕತೆಯನ್ನೇ ಹೇಳುತ್ತವೆ. ಅವು ಈಗಲೂ ಭಾರತದ ಸಿನಿಮಾಗಳಂತೆ ಕಾಣುತ್ತವೆ. ಆದರೆ ಬಾಲಿವುಡ್‌ನ ಹಲವು ಹಿಂದಿ ಸಿನಿಮಾಗಳು ಭಾರತದ ಸಿನಿಮಾಗಳಂತೆ ಕಾಣುವುದೇ ಇಲ್ಲ. ಹಲವು ಬಾಲಿವುಡ್ ಸಿನಿಮಾಗಳನ್ನು ಭಾರತದಲ್ಲಿ ಚಿತ್ರೀಕರಣ ಸಹ ಮಾಡಲಾಗುವುದಿಲ್ಲ. ಇದೇ ಕಾರಣಕ್ಕೆ ಆರ್‌ಆರ್‌ಆರ್ ಅಂಥಹಾ ಅಪ್ಪಟ ಭಾರತೀಯ ಕತೆಯುಳ್ಳ ಸಿನಿಮಾ ಪ್ರೇಕ್ಷಕರಿಗೆ ಅಚ್ಚರಿ ಹುಟ್ಟಿಸುತ್ತದೆ. ಬಾಲಿವುಡ್‌ನಲ್ಲಿ ದೊಡ್ಡ ಗೆಲುವು ಸಾಧಿಸುತ್ತದೆ” ಎಂದು ಅನುರಾಗ್ ಕಶ್ಯಪ್ ಸಂದರ್ಶನದಲ್ಲಿ ಹೇಳಿದ್ದಾರೆ.

ಅನುರಾಗ್ ಕಶ್ಯಪ್ ಮೊದಲಿನಿಂದಲೂ ಸೌತ್‌ ಇಂಡಿಯಾ ಸಿನಿಮಾಗಳನ್ನು ಹೊಗಳುತ್ತಾ ಬಂದಿದ್ದಾರೆ. ತಮಿಳು ಸಿನಿಮಾ ಒಂದರಲ್ಲಿ ವಿಲನ್ ಆಗಿ ಸಹ ನಟಿಸಿರುವ ಅನುರಾಗ್ ಕಶ್ಯಪ್, ಕನ್ನಡದ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಅತಿಯಾಗಿ ಮೆಚ್ಚಿದ್ದರು. ರಾಜ್ ಬಿ ಶೆಟ್ಟಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದರು. ‘ಕಾಂತಾರ’ ಸಿನಿಮಾವನ್ನೂ ಸಹ ಅನುರಾಗ್ ಕಶ್ಯಪ್ ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ : Kabza movie trailer : ಕಬ್ಜ ಟ್ರೈಲರ್ ಬಿಡುಗಡೆಗೆ ಡೇಟ್‌ ಫಿಕ್ಸ್‌

ಇದನ್ನೂ ಓದಿ : Malti Mary Chopra Jonas : ಕೊನೆಗೂ ಮಗಳ ಮುಖವನ್ನು ರಿವೀಲ್‌ ಮಾಡಿದ ಪ್ರಿಯಾಂಕಾ ಚೋಪ್ರಾ

ಇದನ್ನೂ ಓದಿ : KGF to Kantara : ಸ್ಯಾಂಡಲ್‌ವುಡ್‌ 100 ಕೋಟಿ ಕ್ಲಬ್ ಸೇರಿ ಇತಿಹಾಸ ಸೃಷ್ಟಿದ 7 ಸಿನಿಮಾಗಳು ಯಾವುವು ಗೊತ್ತಾ ?

ಅನುರಾಗ್ ಕಶ್ಯಪ್, ಬಾಲಿವುಡ್‌ನ ಬಹಳ ವಿಭಿನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಮಾಮೂಲಿ ಮಸಾಲಾ ಕಮರ್ಶಿಯಲ್ ಸಿನಿಮಾಗಳಲ್ಲದೆ, ನಿಜ ಘಟನೆಗಳನ್ನು ಆಧರಿಸಿದ, ಸಾಮಾನ್ಯರ ಕತೆಗಳನ್ನು ಅನುರಾಗ್ ಕಶ್ಯಪ್ ಹೇಳುತ್ತಾ ಬಂದಿದ್ದಾರೆ. ಅನುರಾಗ್ ಕಶ್ಯಪ್‌ರ ‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾಗಳಂತೂ ಕಲ್ಟ್ ಕ್ಲಾಸಿಕ್‌ಗಳೆಂದು ಹೆಸರಾಗಿವೆ. ಸಿನಿಮಾ ಅಧ್ಯಯನ ಮಾಡುವವರು ತಪ್ಪದೆ ‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾವನ್ನು ಅಧ್ಯಯನ ಮಾಡುತ್ತಾರೆ.

Anurag Kashyap : Director Anurag Kashyap praised South Indian cinema

Comments are closed.