ಕರ್ನಾಟಕ ಬಜೆಟ್ 2026: ಪರಿಶಿಷ್ಟ ಪಂಗಡಗಳ ಆಯೋಗ : ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ₹44,632 ಕೋಟಿ ಅನುದಾನ
ರಾಜ್ಯದ ಶೋಷಿತ ವರ್ಗಗಳ ಸಮಗ್ರ ಏಳಿಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ 'ಕಲ್ಯಾಣ ಕ್ರಾಂತಿ'ಯನ್ನೇ ಸಾರಿದ್ದಾರೆ.
ಬೆಂಗಳೂರು: sc st obc minority welfare schemes: ರಾಜ್ಯದ ಶೋಷಿತ ವರ್ಗಗಳ ಸಮಗ್ರ ಏಳಿಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ‘ಕಲ್ಯಾಣ ಕ್ರಾಂತಿ’ಯನ್ನೇ ಸಾರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ (SCSP/TSPI) ಬರೋಬ್ಬರಿ ₹44,632 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.
ಬಜೆಟ್‌ನಲ್ಲಿ ದಲಿತ, ಅಲ್ಪಸಂಖ್ಯಾತರಿಗೆ ಕೊಟ್ಟಿದ್ದೇನು ?
ಶಿಕ್ಷಣಕ್ಕೆ ಮೊದಲ ಆದ್ಯತೆ: ಹೊಸ ವಸತಿ ಶಾಲೆಗಳ ಹಬ್ಬ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ:
ಹೊಸ ವಸತಿ ಶಾಲೆಗಳು: ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗಾಗಿ 40 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
ಮೆಟ್ರಿಕ್ ನಂತರದ ವಸತಿ ನಿಲಯ: ಪ್ರಮುಖ ನಗರಗಳಲ್ಲಿ ವಸತಿ ನಿಲಯಗಳ ಬೇಡಿಕೆ ಹೆಚ್ಚಿರುವ ಕಾರಣ, 62 ಹೊಸ ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಕಟ್ಟಡ ನಿರ್ಮಾಣ: ಸ್ವಂತ ಕಟ್ಟಡವಿಲ್ಲದ 30 ಕೆಯಿಸ್ (KIES) ವಸತಿ ಶಾಲೆಗಳಿಗೆ ₹660 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು.
ನೀಟ್/ಜೆಇಇ ತರಬೇತಿ: ಆಯ್ದ 4 ವಸತಿ ಶಾಲೆಗಳನ್ನು ‘ಸೆಂಟರ್ ಆಫ್ ಎಕ್ಸಲೆನ್ಸ್’ ಆಗಿ ಉನ್ನತೀಕರಿಸಿ, ವಿದ್ಯಾರ್ಥಿಗಳಿಗೆ ಉಚಿತವಾಗಿ ಕೆ-ಸೆಟ್, ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು.
Also Read: ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿಕ್ಕಿತು ಆನೆಬಲ : ನಗರ ಬೀದಿ ಬದಿ ವ್ಯಾಪಾರಿಗಳಿಗೆ ₹7 ಕೋಟಿ ಮೀಸಲು
ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಉತ್ತೇಜನ
- ನೇಮಕಾತಿ: ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಕಲ್ಯಾಣ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
- ಫಾಸ್ಟ್ ಫುಡ್ ಟ್ರಕ್ ಸೌಲಭ್ಯ: ಎಸ್‌ಟಿ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಫಾಸ್ಟ್ ಫುಡ್ ಟ್ರಕ್ ಅಥವಾ ಮೊಬೈಲ್ ಕ್ಯಾಂಟೀನ್ ಸ್ಥಾಪಿಸಲು ₹4 ಲಕ್ಷದವರೆಗೆ ಧನಸಹಾಯ ನೀಡಲಾಗುವುದು.
- ಗಂಗಾ ಕಲ್ಯಾಣ ಯೋಜನೆ: ವಿದ್ಯುದೀಕರಣಕ್ಕಾಗಿ ಪಾವತಿಸುವ ಮೊತ್ತವನ್ನು ₹75,000 ರಿಂದ ₹1.50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಹಲವು ಹೊಸ ನಿಗಮಗಳ ಸ್ಥಾಪನೆ
- ಬೌದ್ಧ ಅಭಿವೃದ್ಧಿ ನಿಗಮ: ಬೌದ್ಧ ಸಮುದಾಯದ ಏಳಿಗೆಗಾಗಿ ಹೊಸ ನಿಗಮ ಸ್ಥಾಪನೆ.
- ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ: ಅರಣ್ಯದಂಚಿನಲ್ಲಿ ವಾಸಿಸುವ PVTG (ಜೇನುಕುರುಬ, ಕಾಡುಕುರುಬ ಸೇರಿದಂತೆ) ಸಮುದಾಯಗಳಿಗಾಗಿ ಪ್ರತ್ಯೇಕ ನಿಗಮ.
- ಪರಿಶಿಷ್ಟ ಪಂಗಡಗಳ ಆಯೋಗ: ಎಸ್‌ಟಿ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ಆಯೋಗದ ಸ್ಥಾಪನೆ.
ಮೂಲಸೌಕರ್ಯ ಮತ್ತು ಆಡಳಿತ
ವಾಲ್ಮೀಕಿ ಆಡಳಿತ ಸೌಧ: ಬೆಂಗಳೂರಿನ ಸುಮನಹಳ್ಳಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ‘ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಸೌಧ’ ಸಂಕೀರ್ಣ ನಿರ್ಮಾಣ.
ಅಂಬೇಡ್ಕರ್ ಸ್ಮರಣಾರ್ಥ ಶಾಲೆ: ಡಾ. ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಕಲಬುರಗಿ, ವಿಜಯಪುರ, ಬೆಳಗಾವಿ ಮತ್ತು ಕೋಲಾರದಲ್ಲಿ ಸಿಬಿಎಸ್‌ಇ (CBSE) ಪಠ್ಯಕ್ರಮದ ಹೊಸ ವಸತಿ ಶಾಲೆಗಳ ಆರಂಭ.
karnataka budget 2026 sc st obc minority welfare schemes kannada



