ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿಕ್ಕಿತು ಆನೆಬಲ : ನಗರ ಬೀದಿ ಬದಿ ವ್ಯಾಪಾರಿಗಳಿಗೆ ₹7 ಕೋಟಿ ಮೀಸಲು

ಬೆಂಗಳೂರು: ರಾಜ್ಯದ ಯುವಜನತೆಯ ಕೌಶಲ್ಯ ವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ಕ್ರಾಂತಿಕಾರಿ ಘೋಷಣೆಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ಯುವನಿಧಿ ಯೋಜನೆಯ ಯಶಸ್ಸಿನ ಬೆನ್ನಲ್ಲೇ, ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಯುವಕರನ್ನು ಸಜ್ಜುಗೊಳಿಸಲು ಬೃಹತ್ ಅನುದಾನ ಘೋಷಿಸಲಾಗಿದೆ.

1. ₹1,386 ಕೋಟಿಯ ‘K-QUEST’ ಯೋಜನೆ

ರಾಜ್ಯದ ಸರ್ಕಾರಿ ಐಟಿಐ (ITI) ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳ ಮೂಲಸೌಕರ್ಯ ಹಾಗೂ ತರಬೇತಿ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು “K-QUEST” (Karnataka Quality Upgradation for Employment and Skills Transformation) ಯೋಜನೆಯನ್ನು ಜಾರಿಗೆ ತರಲಾಗುವುದು. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಸಹಭಾಗಿತ್ವದಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಈ ಯೋಜನೆಗಾಗಿ 1,386 ಕೋಟಿ ರೂ. ಮೀಸಲಿಡಲಾಗಿದೆ.

2. ಯುವನಿಧಿ ಯೋಜನೆಯಡಿ ₹913 ಕೋಟಿ ಪಾವತಿ

ಬಜೆಟ್ ಮಂಡನೆ ವೇಳೆ ಮಾಹಿತಿ ನೀಡಿದ ಸಿಎಂ, ಯುವನಿಧಿ ಯೋಜನೆಯಡಿ ಇದುವರೆಗೆ 3,08,267 ಫಲಾನುಭವಿಗಳಿಗೆ 913 ಕೋಟಿ ರೂ. ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ (DBT) ಮೂಲಕ ಯಶಸ್ವಿಯಾಗಿ ಪಾವತಿಸಲಾಗಿದೆ ಎಂದು ತಿಳಿಸಿದರು.

3. ಮಹಿಳಾ ಐಟಿಐ ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕ ವಿನಾಯಿತಿ

ಐಟಿಐ ಕಲಿಯುವ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಮಹಿಳಾ ತರಬೇತಿದಾರರಿಗೆ 1,200 ರೂಪಾಯಿಗಳ ವಾರ್ಷಿಕ ಬೋಧನಾ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು. ಜೊತೆಗೆ ಐಟಿಐ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಕ್ಕಾಗಿ ಹೆಚ್ಚುವರಿ ವಿಷಯಗಳ ಬೋಧನೆಯೊಂದಿಗೆ ‘ಪದವಿ ಪೂರ್ವ ಪ್ರಮಾಣ ಪತ್ರ’ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.

4. ಅಂತರಾಷ್ಟ್ರೀಯ ರೈತ ಮಹಿಳಾ ವರ್ಷ – 2026

2026ನ್ನು ‘ಅಂತರಾಷ್ಟ್ರೀಯ ರೈತ ಮಹಿಳಾ ವರ್ಷ’ ಎಂದು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ರಾಜ್ಯದ 5,000 ರೈತ ಮಹಿಳೆಯರಿಗೆ ಆಧುನಿಕ ಕೃಷಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: Budget: ರಾಜ್ಯ ಬಜೆಟ್ ಬೃಹತ್ ಶೂನ್ಯ, 11 ಸುಳ್ಳುಗಳು ಇವೆ ಎಂದು ವಿಶ್ಲೇಷಣೆ!

5. ನಗರ ಬೀದಿ ಬದಿ ವ್ಯಾಪಾರಿಗಳಿಗೆ ₹7 ಕೋಟಿ ಮೀಸಲು

ನಗರ ಪ್ರದೇಶದ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಸಮೀಕ್ಷೆ ನಡೆಸಲು, ಗುರುತಿನ ಚೀಟಿ ವಿತರಿಸಲು ಮತ್ತು ಮಾರಾಟ ಸಮಿತಿಗಳನ್ನು ರಚಿಸಲು 7 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಬಜೆಟ್‌ನ ಪ್ರಮುಖ ಘೋಷಣೆಗಳು

ಕೌಶಲ್ಯ ತರಬೇತಿ ಕೇಂದ್ರ : ಮೈಸೂರು ಮತ್ತು ಕಲಬುರಗಿಯಲ್ಲಿ ಶ್ನೈಡರ್ ಎಲೆಕ್ಟ್ರಿಕ್ (Schneider Electric) ಸಹಯೋಗದಲ್ಲಿ ತರಬೇತಿ ಕೇಂದ್ರ ಸ್ಥಾಪನೆ.

ಆರೈಕೆ ಉದ್ಯಮಶೀಲತೆ : ಗ್ರಾಮೀಣ ಭಾಗದ ಸ್ವಸಹಾಯ ಸಂಘದ ಮಹಿಳೆಯರಿಗೆ ಬಾಣಂತಿಯರು ಮತ್ತು ಶಿಶುಗಳ ಆರೈಕೆ ಕುರಿತು ತರಬೇತಿ.

ಸ್ಮಾರ್ಟ್ ಅನ್ನವಾಣಿ : ಆಹಾರ ಇಲಾಖೆಯ ಸಹಾಯವಾಣಿಯನ್ನು AI ಆಧಾರಿತ ‘Smart Annavani’ ಆಗಿ ಪರಿವರ್ತನೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories